Sunday, December 22, 2024

ಕೋಟಿ ವೀವ್ಸ್​ನಲ್ಲಿ ಮಿಂದೆದ್ದ ‘ಜಗವೇ ನೀನು ಗೆಳತಿಯೇ’

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್​ರನ್ನ ಬೆಳ್ಳಿತೆರೆಗೆ ಪರಿಚಯಿಸಿದ ಡೈರೆಕ್ಟರ್ ಶಶಾಂಕ್, ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ತಮ್ಮ ಅಪ್​ಕಮಿಂಗ್ ಸಿನಿಮಾದ ಮ್ಯೂಸಿಕಲ್ ಆಲ್ಬಂನಲ್ಲಿ ರೆಕಾರ್ಡ್​ ಬ್ರೇಕ್ ಮಾಡಿದ್ದಾರೆ. ಜಗವೇ ನೀನು ಗೆಳತಿಯೇ ಹಾಡಿನ ಕೋಟಿ ವೀವ್ಸ್​ ಸಂಭ್ರಮದಲ್ಲಿ ಮಿಂದೇಳಿದ್ದಾರೆ.

  • ಸಿದ್ ಶ್ರೀರಾಮ್ ಕಂಠದ ಗೀತೆಗೆ ಸಾವಿರಾರು ರೀಲ್ಸ್ ಗರಿ..!
  • ಆ- 19ಕ್ಕೆ ಪ್ರೇಮ ದೃಶ್ಯಕಾವ್ಯ ‘ಲವ್ 360’ ಗ್ರ್ಯಾಂಡ್ ರಿಲೀಸ್
  • ಡಾಕ್ಟರ್ ಆದ್ರು ಌಕ್ಟರ್.. ಹೆಂಗೆ ನಾವು ರಚನಾ ಈಸ್ ಬ್ಯಾಕ್

ಮನುಷ್ಯನ ಬದುಕೇ ಒಂಥರಾ ಹೋರಾಟ. ಆದ್ರೆ ಆ ಹೋರಾಟ ಬೇರೆ ಬೇರೆ ವಿಷಯಗಳಿಗಾಗಿ ಆಗಿರಲಿದೆ. ಸಾಮಾನ್ಯವಾಗಿ ದುಡ್ಡು, ಆಸೆ, ಅಧಿಕಾರಕ್ಕಾಗಿ ಹೊಡೆದಾಡ್ತಾರೆ. ಆದ್ರೆ ನಾವೀಗ ಹೇಳೋಕೆ ಹೊರಟಿರೋ ಹುಡ್ಗ ತನ್ನ ಪ್ರೇಯಸಿಗಾಗಿ ಹೋರಾಡ್ತಾನೆ. ಯೆಸ್.. ಇದು ಲವ್ 360 ಚಿತ್ರದ ಒನ್ ಲೈನ್ ಸ್ಟೋರಿ.

ಯಶ್, ರಾಧಿಕಾ ಪಂಡಿತ್​ರಂತಹ ಅದ್ಭುತ ಕಲಾವಿದರನ್ನ ದೊಡ್ಡ ಪರದೆಗೆ ಪರಿಚಯಿಸಿದ ನಿರ್ದೇಶಕ ಶಶಾಂಕ್ ಌಕ್ಷನ್ ಕಟ್ ಹೇಳಿರೋ ಈ ಸಿನಿಮಾ, ಆಗಸ್ಟ್ 19ಕ್ಕೆ ತೆರೆಗಪ್ಪಳಿಸಲಿದೆ. ಆದ್ರೆ ಅದಕ್ಕೂ ಮುನ್ನ ಟೀಸರ್, ಸಾಂಗ್ಸ್ ಹಾಗೂ ಮೇಕಿಂಗ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿವೆ. ಅದ್ರಲ್ಲೂ ಜಗವೇ ನೀನು ಗೆಳತಿಯೇ ಸಾಂಗ್ ಧೂಳೆಬ್ಬಿಸ್ತಿದೆ.

ಹೌದು.. ಇದು ಸದ್ಯ ದೊಡ್ಡ ಹಿಟ್ ಆಗಿರೋ ಕನ್ನಡದ ಟಾಪ್ ಮೆಲೋಡಿ ಸಾಂಗ್. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿರೋ ಈ ಹಾಡಿಗೆ ನಿರ್ದೇಶಕ ಶಶಾಂಕ್ ಅವ್ರೇ ಸಾಹಿತ್ಯ ಪೋಣಿಸಿದ್ದಾರೆ. ಇನ್ನು ಬಹುಭಾಷಾ ಗಾಯಕ ಸಿದ್ ಶ್ರೀರಾಮ್ ಕಂಠದಲ್ಲಿ ಅದು ಅಷ್ಟೇ ಸೊಗಸಾಗಿ ಮೂಡಿಬಂದಿದೆ.

ಡಾಕ್ಟರ್ ವೃತ್ತಿಯಲ್ಲಿದ್ದ ಪ್ರವೀಣ್ ಌಕ್ಟರ್ ಆಗೋ ಕನಸು ಹೊತ್ತು, ಈ ಚಿತ್ರದ ಮೂಲಕ ನಾಯಕನಟನಾಗಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡ್ತಿದ್ದಾರೆ. ಅವ್ರಿಗೆ ಲವ್ ಮಾಕ್ಟೇಲ್​ನ ಹೆಂಗೆ ನಾವು ಖ್ಯಾತಿಯ ರಚನಾ ನಾಯಕಿಯಾಗಿ ಜೊತೆಯಾಗಿದ್ದಾರೆ. ಇವರಿಬ್ಬರ ಇಂಟೆನ್ಸ್ ಪ್ರೇಮ್ ಕಹಾನಿ ಇದಾಗಿದ್ದು, ಸದ್ಯ ಈ ಮೆಲೋಡಿ ಹಾಡಿನಿಂದ ಎಲ್ಲರ ಮನೆ, ಮನ ತಲುಪಿದ್ದಾರೆ.

ರೀಲ್ಸ್​ನಲ್ಲಿ ರೈಲುಬಂಡಿಯಂತೆ ಸಂಚಾರ ಮಾಡ್ತಿರೋ ಜಗವೇ ನೀನು ಗೆಳತಿಯೇ ಸಾಂಗ್, ಸದ್ಯ ಕೋಟಿ ವೀವ್ಸ್ ಪಡೆದಿದೆ. ಇದು ನಿಜಕ್ಕೂ ಗ್ರೇಟ್. ಪ್ರತೀ ವಾರ ಕನಿಷ್ಟ ನಾಲ್ಕೈದು ಸಿನಿಮಾ ರಿಲೀಸ್ ಆಗ್ತಿರುತ್ತೆ. ಅದ್ರಿಂದ 20 ಹಾಡುಗಳಾದ್ರೂ ಮಾರ್ಕೆಟ್​ಗೆ ಬರುತ್ವೆ. ಆದ್ರೆ ಅವೆಲ್ಲವುಗಳ ಮಧ್ಯೆ ಕೇಳುಗರಿಂದ ಮೆಚ್ಚುಗೆ ಗಳಿಸೋ ಸಾಂಗ್ಸ್ ಬಹಳ ಕಡಿಮೆ. ಅದ್ರಲ್ಲಿ ಅಗ್ತಸ್ಥಾನಕ್ಕೇರಿರೋ ಲವ್ 360 ಆಲ್ಬಮ್ ಗೀತೆ, 10 ಮಿಲಿಯನ್ ವೀವ್ಸ್ ಪಡೆದಿರೋದು ಚಿತ್ರದ ಹುಮ್ಮಸ್ಸು, ಹುರುಪನ್ನು ದ್ವಿಗುಣಗೊಳಿಸಿದೆ.

ಅಂದಹಾಗೆ ಈ ಸಿನಿಮಾನ ಕೆಆರ್​ಜಿ ಸ್ಟುಡಿಯೋಸ್ ಡಿಸ್ಟ್ರಿಬ್ಯೂಟ್ ಮಾಡಲಿದೆ. ಕನ್ನಡ ಚಿತ್ರರಂಗದ ಖ್ಯಾತ ವಿತರಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್  ಲವ್ 360 ಚಿತ್ರವನ್ನು ಹಂಚಿಕೆ ಮಾಡ್ತಿದ್ದಾರೆ. ಇದ್ರಿಂದ ಒಳ್ಳೆಯ ಥಿಯೇಟರ್ ಸೆಟಪ್ ಜೊತೆ ಬಾಕ್ಸ್ ಆಫೀಸ್ ಕಲೆಕ್ಷನ್​ಗೂ ಪ್ಲಸ್ ಆಗಲಿದೆ. ಒಟ್ಟಾರೆ ಶಶಾಂಕ್​ರ ಕ್ರಿಯಾಶೀಲತೆಗೆ ಸಿಕ್ಕ ಪ್ರತಿಫಲಗಳಿವು ಅಂದ್ರೆ ತಪ್ಪಾಗಲ್ಲ.

ಕ್ಲಾಸಿಕಲ್ ಡ್ಯಾನ್ಸರ್ ಆಗಿ ರಚನಾ ಎಲ್ಲರ ಗಮನ ಸೆಳೆಯಲಿದ್ದು, ಡ್ಯಾನಿ ಕುಟ್ಟಪ್ಪನ ವಿಲನ್ ಖದರ್ ಹಾಗೂ ಪ್ರವೀಣ್ ಹೀರೋಯಿಸಂ ಆಗಸ್ಟ್ 19ಕ್ಕೆ ದೊಡ್ಡ ಪರದೆ ಮೇಲೆ ರಿವೀಲ್ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES