Saturday, January 11, 2025

ಸಾಯುವ ಮುನ್ನ ತಮ್ಮ ಸ್ನೇಹಿತನಿಗೆ ಫ್ರೆಂಡಶಿಪ್ ಬೆಲ್ಟ್ ಕಟ್ಟಿದ ಸ್ನೇಹಿತರು

ಕೊಪ್ಪಳ : ಸಾಯುವ ಮುನ್ನಾದಿನ ತಮ್ಮ ಸ್ನೇಹಿತನಿಗೆ ಫ್ರೆಂಡಶಿಪ್ ಬೆಲ್ಟ್ ಕಟ್ಟಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸುಹಾಸ್ ಸೌದ್ರಿ, ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದ ಅವನು, ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಇನ್ನು, ತೀವ್ರ ಅನಾರೋಗ್ಯದ ನಡುವೆಯೂ ಶಾಲೆ,ಶಿಕ್ಷಕರು,ಸ್ನೇಹಿತರನ್ನು ನೆನೆಸಿಕೊಂಡ ಸುಹಾಸ್ ಈ ಹಿನ್ನಲೆಯಲ್ಲಿ ಸುಹಾಸ್ ನನ್ನು ಪಾಲಕರು ಕರೆದುಕೊಂಡು ಬಂದಿದ್ದರು. ಈ ವೇಳೆ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿದ್ದ ಸುಹಾಸ್​​ಗೆ ಫ್ರೆಂಡಶಿಪ್ ಬೆಲ್ಟ್ ಕಟ್ಟಿದ್ದಾರೆ.

ಅದಲ್ಲದೇ, ಸ್ನೇಹಿತ ಸುಹಾಸ್ ನ ಪರಸ್ಥಿತಿ ಕಂಡು ಕಣ್ಣೀರು ಹಾಕುತ್ತಾ ಪ್ರೆಂಡಶಿಪ್ ಬೆಲ್ಟ್ ಕಟ್ಟಿದ್ದಾರೆ. ಓದಿನಲ್ಲಿ ಟಾಪರ್ ಆಗಿದ್ದ ಸುಹಾಸ್. ಶಾಲೆಯಲ್ಲಿ ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ.

RELATED ARTICLES

Related Articles

TRENDING ARTICLES