Wednesday, January 22, 2025

ಹುಬ್ಬಳ್ಳಿಯಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ ಹೋಲ್​ ಸೇಲ್​ ಅಂಗಡಿ

ಹುಬ್ಬಳ್ಳಿ : ನಗರದ ಎಪಿಎಂಸಿ ಯಲ್ಲಿನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣಕ್ಕೇ ಧಾವಿಸಿ ಸಂಭವಿಸಬಹುದಾದ ಬಾರಿ ದುರಂತವನ್ನು ತಪ್ಪಿಸಿದ್ದಾರೆ.

ಎಪಿಎಂಸಿ ಯಲ್ಲಿನ ವಾಟರ್ ಟ್ಯಾಂಕ್ ಬಲಿಯಲ್ಲಿರುವ ಜಗದಂಬಾ ಟ್ರೇಡರ್ಸ್ (ಹೋಲ್ ಸೇಲ್)ಕಿರಾಣಿ ಅಂಗಡಿಯಲ್ಲಿ ಈಗಷ್ಟೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಂಗಡಿ ಮಾಲೀಕ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿಯನ್ನು ರವಾನಿಸಿದ್ದಾರೆ.

ಕೂಡಲೇ ಸ್ಥಳಕ್ಕೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡಿದ್ದು,ಬೆಂಕಿ ಯಾವ ಕಾರಣಕ್ಕಾಗಿ ಹತ್ತಿದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ,ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES