Wednesday, January 22, 2025

ಬಡಮಕ್ಕಳ ಸಾವು ನೋವುಗಳ ಬಂಡವಾಳ ಮಾಡಿಕೊಂಡಿದ್ದಾರೆ : ಹೆಚ್​ಡಿಕೆ

ರಾಮನಗರ : ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಎರಡು ಕೋಮುಗಳ ನಡುವೆ ಸಾಮರಸ್ಯದ ಕೊರತೆ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ತಾಯಿಯ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಎರಡು ಕೋಮುಗಳ ನಡುವೆ ಸಾಮರಸ್ಯದ ಕೊರತೆ ಇದೆ. ಇದನ್ನ ಸರಿಪಡಿಸುವುದು ಸರ್ಕಾರದ ಕೆಲಸ. ಎಲ್ಲಾ ಸಮಾಜವನ್ನ ಬೆಸೆಯುವ ಕೆಲಸ ಸರ್ಕಾರದಲ್ಲಿ ಆಗುತ್ತಿಲ್ಲ ಎಂದರು.

ಸಮಾಜದಲ್ಲಿ ಕೋಮು ಭಾವನೆ ಮೂಡುವ ವಾತಾವರಣ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿಗಳಿಂದ ಈ ರೀತಿಯ ಮಂಗಳೂರಿನ ಪ್ರವಾಸ ನಿರೀಕ್ಷೆ ಮಾಡಿರಲಿಲ್ಲ. ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ನಡುವಳಿಕೆ ಬಗ್ಗೆ ಜನರಿಗೆ ಅಸಮಾಧಾನ ಇದೆ. ಕೋಮುಗಲಭೆಯಿಂದ ಅಭಿವೃದ್ಧಿಯ ವಾತಾವರಣ ಮಂಗಳೂರಿನಲ್ಲಿ ಹಾಳಾಗಿದೆ. ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳಿದರು.

ಅದಲ್ಲದೇ, ಸಂಘಟನೆ ಮಾಡಲು ನನ್ನ ಅಭ್ಯಂತರವಿಲ್ಲ. ಸಂಘಟನೆ ಹೆಸರಲ್ಲಿ ಸಮಾಜವನ್ನ ಹಾಳುಮಾಡಬೇಡಿ. ನಾಳೆ ಮಂಗಳೂರಿಗೆ ಭೇಟಿ ಕೊಡುತ್ತಿದ್ದೇನೆ‌. ಹತ್ಯೆಯಾಗಿರೋ ಮೂರು ಕುಟುಂಬಗಳನ್ನ ಭೇಟಿಯಾಗುತ್ತಿದ್ದೇನೆ. ಬಡಮಕ್ಕಳ ಸಾವು ನೊವುಗಳನ್ನ ಬಂಡವಾಳ ಮಾಡಿಕೊಂಡಿದ್ದಾರೆ. ಇಲ್ಲಿ ದೊಡ್ಡ ಮಟ್ಟಿನ ಷಡ್ಯಂತ್ರ ಇದೆ. ಧರ್ಮದ ಭಾವನಾತ್ಮಕ ವಿಷಯಗಳನ್ನ ಇಟ್ಟುಕೊಂಡು ಯುವಕರನ್ನ ದಾರಿ ತಪ್ಪಿಸಲಾಗುತ್ತಿದೆ.ಯುವಕರು ಇಂತಹ ವಿಚಾರಗಳಿಗೆ ಬಲಿಯಾಗಬೇಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES