Thursday, June 13, 2024

ನನ್ನ ಕೊಲೆ ಆದರೆ ಅದಕ್ಕೆ ಶಾಸಕ ಪ್ರೀತಂಗೌಡರೇ ಕಾರಣ : ಯೋಗೇಶ್

ಹಾಸನ : ತಮ್ಮ ಕೊಲೆಗೆ ಪ್ಲಾನ್ ಆಗಿದೆ, ನನ್ನ ಕೊಲೆ ಆದರೆ ಅದಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರೇ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜಕೀಯವಾಗಿ ಯಾರೂ ವೈರಿಗಳಿಲ್ಲ. ಅವರಿಗೆ ನಾನೊಬ್ಬನೇ ಪ್ರಬಲ ಎದುರಾಳಿ. ಹಾಗಾಗಿ ನನ್ನನ್ನು ಮುಗಿಸಬೇಕೆಂದು ಪ್ಲಾನ್ ಮಾಡಿದ್ದಾರೆ. ಇಂದು ಹಾಸನದ ಪತ್ರಿಕಾ ಭವನದಲ್ಲಿ ತಾವು ಜೆಡಿಎಸ್ ತೊರೆಯೊದಾಗಿ ಮಾಹಿತಿ ನೀಡಿ ಆರೋಪಿಸಿದ್ದು, ತಮ್ಮ ಕೊಲೆಗೆ ಪ್ಲಾನ್ ಆಗಿದೆ, ನನ್ನ ಕೊಲೆ ಆದರೆ ಅದಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರೇ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.

2018 ರಲ್ಲಿ ಬಿಜೆಪಿ ಟಿಕೇಕ್ ಆಕಾಂಕ್ಷಿ ಆಗಿದ್ದ ಅಗಿಲೆ ಯೋಗೇಶ್. ತಮಗೆ ಟಿಕೇಟ್ ಕೈತಪ್ಪಿದ ಬಳಿಕ ಚುನಾವಣೆ ನಂತರ ಜೆಡಿಎಸ್ ಸೇರಿದ್ದ ಅವರು, ಜೆಡಿಎಸ್ ನಲ್ಲಿ ಸೂಕ್ತ ಸ್ಥಾನ ಮಾನ ಸಿಗದ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ತೊರೆಯೊದಾಗಿ ಘೋಷಣೆ ಮಾಡಿದ್ದರು. ಈ ವೇಳೆ ತಮಗೆ ಜೀವ ಬೆದರಿಕೆ ಇದೆ, ನನ್ನ ಕೊಲೆಯಾದರೆ ಶಾಸಕರೇ ಕಾರಣ ಎಂದು ಆರೋಪ ಮಾಡಿದ್ದು, ಆದರೆ ಈವರೆಗೂ ನನಗೆ ರಕ್ಷೆ ಒದಗಿಸಿಲ್ಲ ಎಂದು ಅಸಮದಾನ ಹೊರ ಹಾಕಿದ ಯುವ ಮುಖಂಡ ಕೋವಿಡ್ ವೇಳೆ ಜನರಿಗೆ ಸಾಕಷ್ಟು ನೆರವು ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

RELATED ARTICLES

Related Articles

TRENDING ARTICLES