ಬಾಗಲಕೋಟೆ : ಯಾವೆಲ್ಲ ಕಾರ್ಯಕರ್ತರು ಯಾರ-ಯಾರ ಭಕ್ತರು ಅನ್ನೋದು ಆ್ಯಡ್ ಗಳಿಂದ ಗೊತ್ತಾಗುತ್ತಿದೆ ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವು ಯಾರ ಮನೆಯಲ್ಲಿ ಆದ್ರೂ ಪರಿಹಾರ ಕೊಟ್ಟೆ ಕೊಡುತ್ತೇವೆ. ಆದರೆ ಸಾವು ನ್ಯಾಯ ಯುತವಾಗಿರಬೇಕು. ಕಾನೂನು ಚೌಕಟ್ಟಿನ ಸಮಸ್ಯೆಯಿಂದ ಸಾವಾಗಿದ್ರೆ. ಕಾನೂನಾತ್ಮಕವಾಗಿ ಪರಿಹಾರ ನೀಡುತ್ತೇವೆ ಎಂದರು.
ಇನ್ನು, ಸಿದ್ದರಾಮೊತ್ಸವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ತಮ್ಮ ವಯಕ್ತಿಕ ಹುಟ್ಟು ಹಬ್ಬ ಆಚರಿಸಿಕೊಳ್ತಿದ್ದಾರೆ. ಅದರ ಬಗ್ಗೆ ನಾನೇನು ಹೇಳಲಾರೆ. ಕಾಂಗ್ರೆಸ್ ನಾಯಕರಲ್ಲಿ ಹೊಂದಾಣಿಕೆ ಇಲ್ಲ. ಇಡೀ ಕಾಂಗ್ರೆಸ್ ಪಕ್ಷವೇ ಗೊಂದಲದ ಗೂಡಾಗಿದೆ. ಮೂರು ಗುಂಪುಗಳಾಗಿ ಕಾರ್ಯಕರ್ತರು ಒಬ್ಬಬ್ಬರಿಗೆ ಜೈ ಜೈ ಅಂತಿದ್ದಾರೆ. ಯಾವೆಲ್ಲ ಕಾರ್ಯಕರ್ತರು ಯಾರ-ಯಾರ ಭಕ್ತರು ಅನ್ನೋದು ಆ್ಯಡ್ ಗಳಿಂದ ಗೊತ್ತಾಗುತ್ತಿದೆ ಎಂದು ಹೇಳಿದರು.
ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕೈ ತಪ್ಪಿತಾ ವಿಚಾರಕ್ಕೆ ಮಾತನಾಡಿದ ಅವರು, ಯಾವುದು ಕೈ ತಪ್ಪಿ ಹೋಗಿಲ್ಲ. ಸರ್ಕಾರ ಎಲ್ಲ ಘಟನೆಗಳನ್ನ ಗಂಭೀರವಾಗಿ ತಗೆದುಕೊಳ್ಳುತ್ತದೆ. ಸರ್ಕಾರ ದೇಶದ್ರೋಹಿ,ಸಮಾಜ ದ್ರೋಹಿ ಶಕ್ತಿಗಳನ್ನ ಮಟ್ಟ ಹಾಕುವ ಕೆಲಸ ಮಾಡ್ತಿದೆ. ನಮ್ಮ ಅಧಿಕಾರಿಗಳ ಸಂಶಯಾಸ್ಪದ ವ್ಯಕ್ತಿಗಳನ್ನ ವಶ ಪಡೆದು ವಿಚಾರಣೆ ನಡೆಸಿದ್ದಾರೆ. ತಪ್ಪಿತಸ್ಥರ ಮೇಲೆ ಸರ್ಕಾರ ಕಠಿಣ ಕ್ರಮ ವಹಿಸುತ್ತೆ ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ.