Monday, December 23, 2024

ಕ್ಯಾಬ್ ಡ್ರೈವರ್ಸ್​ ಕೋರಿಕೆಗೆ ಡಾಲಿ ಬಂಪರ್ ಡೋಸ್

ಸ್ಯಾಂಡಲ್​​ವುಡ್​​​​​ನಲ್ಲಿ ಸದ್ಯ ಡಾಲಿ ಧನಂಜಯದೇ ಕಾರುಬಾರು. ಟಗರು ಡಾಲಿ ಮುಟ್ಟಿದ್ದೆಲ್ಲಾ ಚಿನ್ನ. ಸೋಲನ್ನು ಮೆಟ್ಟಿ ನಿಂತ ಹಠವಾದಿ ಡಾಲಿ. ಟಾಲಿವುಡ್​​​​​ನಲ್ಲೂ ಅಬ್ಬರಿಸ್ತಾ ಇರೋ ಜಾಲಿ ರೆಡ್ಡಿ. ಅಂಕಲ್​​​ನ ಹೊಡಿತೀನಿ ಸುಬ್ಬಿ ಅಂತ ಬಾಯ್ಬಿಟ್ರೆ ಸಾಕು, ಶಿಳ್ಳೆ, ಚಪ್ಪಾಳೆ, ಕೇಕೆಯ ಸುರಿಮಳೆ. ಯೆಸ್​​​.. ಇದೀಗ ಡಾಲಿ ಕ್ಯಾಬ್​​ ಡ್ರೈವರ್ಸ್​​ ಕೋರಿಕೆಗೆ ಡೈಲಾಗ್​ ಮೇಲೆ ಡೈಲಾಗ್​​ ಹೊಡೆದಿದ್ದಾರೆ.

  • ನಿಯತ್ತಿನಿಂದ ದುಡಿಯೋನೇ ಕಿಂಗ್​​​​ ಎಂದ ಜಾಲಿರೆಡ್ಡಿ

ರಿಲೀಸ್​ ಆಗಲಿರೋ ಬಹುತೇಕ ಕನ್ನಡ ಸಿನಿಮಾಗಳಲ್ಲಿ ಟಗರು ಡಾಲಿ ಅಭಿನಯದ ಸಿನಿಮಾಗಳೇ ಸಾಕಷ್ಟಿವೆ. ಹೆಡ್​ಬುಷ್​​​​, ಜಮಾಲಿಗುಡ್ಡ, ಹೊಯ್ಸಳ ,ಮಾನ್ಸೂನ್​ ರಾಗ ಹೀಗೆ ಧನಂಜಯ ಅವ್ರ ಅಂಗೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಬಹುಬೇಡಿಕೆಯ ನಟ ಡಾಲಿ, ವರ್ಷಪೂರ ಬಿಡುವಿಲ್ಲದ ಬ್ಯುಸಿಯೆಸ್ಟ್​​ ನಟರಾಗಿದ್ದಾರೆ. ಸದ್ಯ ಅವ್ರ ಮಾನ್ಸೂನ್​ ರಾಗ ಚಿತ್ರದ ಎಫೆಕ್ಟ್​ ಕೂಡ ಬಲು ಜೋರಾಗಿದೆ. ಪಾತ್ರ ಯಾವುದೇ ಇರಲಿ ಪ್ರೇಕ್ಷಕರ ದಿಲ್​ ದೋಚೋ ಪ್ರತಿಭಾನ್ವಿತ ಕಲಾವಿದ ಈ ಧನಂಜಯ.

ದಿನದ 24 ಗಂಟೆಯಲ್ಲಿ ಸಿನಿಮಾ ಶೂಟಿಂಗ್, ಡಬ್ಬಿಂಗ್​​ ಅಂತ ಬ್ಯುಸಿ ಇರೋ ಡಾಲಿ, ಅಭಿಮಾನಿಗಳಿಗೂ ಸಮಯ ಮೀಸಲಿಡುತ್ತಾರೆ. ಇತ್ತೀಚೆಗೆ ಕ್ಯಾಬ್​​ ಡ್ರೈವರ್​​​​​ಗಳಿಗಾಗಿಯೇ ಹೊಸ ಆ್ಯಪ್​​​​ ಸಿದ್ಧವಾಗಿದೆ. ಈ ಆ್ಯಪ್​ ಲಾಂಚ್​​ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಡಾಲಿ ಆಗಮಿಸಿದ್ರು. ಕಿಕ್ಕಿರಿದು ಸೇರಿದ್ದ ಕ್ಯಾಬ್​​ ಡ್ರೈವರ್ಸ್​​​ ಹಾಗೂ ಅಸಂಖ್ಯಾತ ಕ್ಯಾಬ್​​ಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ರು. ನಿಯತ್ತಾಗಿ ನೂರು ರೂಪಾಯಿ ದುಡಿಯೋನೇ ನಿಜವಾದ ಕಿಂಗ್​​ ಎಂದು ಖಡಕ್​ ಡೈಲಾಗ್​ ಹೊಡೆದ್ರು.

  • ಡಾಲಿ ಮದ್ವೆಗೂ, ಕ್ಯಾಬ್​ ಡ್ರೈವರ್ಸ್​​​​ಗೂ ಏನು ಸಂಬಂಧ..?

ಡಾಲಿ ಹೋಗಿದ್ದು ಖಾಸಗಿ ಕಾರ್ಯಕ್ರಮವಾದ್ರೂ ಸಿನಿಮಾ ಬಗ್ಗೆ ತುಂಬಾ ಮಾತನಾಡಿದ್ರು. ಫ್ಯಾಮಿಲಿ ಸಮೇತ ಬಂದು ನೋಡಿ ನನ್ನ ಸಿನಿಮಾ ಬಡವ ರಾಸ್ಕಲ್​ ಗೆಲ್ಲಿಸಿದ್ರಿ. ಎಷ್ಟೊಂದು ಕ್ಯಾಬ್​ ಡ್ರೈವರ್ಸ್​​ ಇದೀರಾ. ಎಲ್ಲರೂ ನನ್​​ ಸಿನಿಮಾ ನೋಡ್ತೀರಾ ಅಂದ್ರು. ಜತೆಗೆ ಅಂಕಲ್​​​ನ ಹೊಡಿತೀನಿ ಸುಬ್ಬಿ ಡೈಲಾಗ್​​ಗೆ ಚಪ್ಪಾಳೆ ಗಿಟ್ಟಿಸಿಕೊಂಡ್ರು. ಹೆಡ್​​ಬುಷ್​ ಬರಲಿ ನ್ಯೂ ಡೈಲಾಗ್​ ಹೊಡಿತೀನಿ ಅಂದ್ರು.

ನಿಮಗೆ ನೀವೇ ಬಾಸ್​​ಗಳು ಎಂದು ಕ್ಯಾಬ್​ ಡ್ರೈವರ್ಸ್​​ನ ಹೊಗಳಿದ್ದಲ್ಲದೆ, ಮದ್ವೆ ಕುರಿತಾದ ಇಂಟರೆಸ್ಟಿಂಗ್​ ಸೀಕ್ರೇಟ್​ ರಿವೀಲ್​ ಮಾಡಿದ್ರು. ಡಾಲಿ ಮದ್ವೆ ಆಗೋದಾ, ಬೇಡ್ವಾ ಅಂತಾ ಹೆಚ್ಚಾಗಿ ಕ್ಯಾಬ್​ ಡ್ರೈವರ್ಸ್​​​​ಗಳನ್ನೇ ವಿಚಾರಿಸ್ತಾರಂತೆ. ಹೇಗಿದೆ ಲೈಫ್..? ಮದ್ವೆ ಆಗಬಹುದಾ​​​ ಅಂತ ಒಪೀನಿಯನ್​​ ಕೇಳ್ತಾರಂತೆ.

ಕನ್ನಡದ ಸಿನಿಮಾ ನೋಡಿ. ನಾನು ವಿಕ್ರಾಂತ್​ ರೋಣ ಸಿನಿಮಾ ನೋಡಿದೆ. ತುಂಬಾ ಚೆನ್ನಾಗಿದೆ ಎಂದು ರೋಣನ ಬಗ್ಗೆ ರಿವ್ಯೂ​​​ ಕೊಟ್ರು. ಸದ್ಯ, ಆಗಸ್ಟ್​ 12ಕ್ಕೆ ಡಾಲಿ, ರಚಿತಾ ರಾಮ್​ ಅಭಿನಯದ ಮಾನ್ಸೂನ್​ ರಾಗ ಸಿನಿಮಾ ರಿಲೀಸ್​ ಆಗ್ತಿದೆ. ರೆಟ್ರೋ ಮಾದರಿಯ ಚಿತ್ರ ಇದಾಗಿದ್ದು, ರಿಲೀಸ್​ಗೂ ಮುನ್ನವೇ ಬೇಜಾನ್​ ಹೈಪ್​​ ಕ್ರಿಯೇಟ್​ ಮಾಡಿದೆ. ನೂರಾರು ಕಟೌಟ್​ ಕೂಡ ಥಿಯೇಟರ್​ ಮುಂದೆ ರಾರಾಜಿಸ್ತಿವೆ. ಏನೇ ಆಗಲಿ. ಡಾಲಿ ಶುಕ್ರದೆಸೆಯಲ್ಲಿದ್ದಾರೆ. ಆ ಗೆಲುವಿನ ಪರ್ವ ನಿತ್ಯ, ನಿರಂತರವಾಗಿ ಮುಂದುವರೆಯಲಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES