ಇಂಗ್ಲೆಂಡ್: ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022ರ ಎರಡನೇ ದಿನದಂದು ನಡೆಯುತ್ತಿರುವ ವೇಟ್ಲಿಫ್ಟರ್ನಲ್ಲಿ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 201 ಕೆಜಿ ಎತ್ತುವ ಮೂಲಕ ಚಿನ್ನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಈ ವರ್ಷದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದಾರೆ. 49 ಕೆಜಿ ಕ್ಲೀನ್ ಮತ್ತು ಜರ್ಕ್ ಸ್ಪರ್ಧೆಯಲ್ಲಿ ಚಾನು ಚಿನ್ನ ಗೆದ್ದರು. ಚಾನು ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟರು.
#CommonwealthGames2022 | Weightlifter Mirabai Chanu wins gold in women’s 49 kg category for a total lift of 201 Kg, sets game record for the category pic.twitter.com/gY4eOXDHlP
— ANI (@ANI) July 30, 2022