Wednesday, January 22, 2025

ಮಾಜಿ ಪತಿ ಜೊತೆ ಇದ್ದ ಮನೆ ಖರೀದಿಸಿದ ಸಮಂತಾ

ಊ ಅಂಟಾವಾ ಖ್ಯಾತಿಯ ಸಮಂತಾ ಮದ್ವೆ ಬ್ರೇಕಪ್​​​​​ ಆದ್ಮೇಲೆ, ಯಾಕೋ ಸಖತ್​ ಗ್ಲಾಮರ್​ ಆಗ್ಬಿಟ್ರು. ಲೈಫ್​ ಸ್ಟೈಲ್​​ ಚೇಂಜ್​ ಮಾಡ್ಬಿಟ್ರು. ಮೈ ಮೇಲೆ ಯಾಕೋ ಬಟ್ಟೇನೆ ನಿಲ್ತಿಲ್ಲ ಅಂತಾ ಏನೇನು ಮಾತಾನಾಡಿಕೊಂಡಿದ್ರು. ಚೈತು ಕಂಡ್ರೆ ಸ್ಯಾಮ್​​ಗೆ ಕೊಲ್ಲೋವಷ್ಟು ಕೋಪ ಅಂತೆಲ್ಲಾ ಗಾಳಿ ಸುದ್ದಿ ಹಬ್ಬಿಸಿದ್ರು, ಸ್ಯಾಮ್​​ ಯಾಕೋ ಚೈತು ಬಿಟ್ಟುಕೊಡ್ತಿಲ್ಲ. ಇಬ್ರೂ ದೂರ ಆದ್ರೂ ಸ್ಯಾಮ್​​ಗೆ ಚೈತು ಎಂಬ ಮಾಯೆ ಬಿಡ್ತಿಲ್ಲ. ಯಾಕೆ ಅಂತೀರಾ..?

ಬಿಟ್ಟರೂ ಬಿಡದೀ ಮಾಯೆ.. ಸ್ಯಾಮ್​​, ಚೈತು ಬ್ರಹ್ಮಗಂಟು

ದೂರಾ ದೂರಾ ಎರಡು ತೀರ.. ನಡುವೆ ಪ್ರೇಮ ಮಂದಾರ

ಮಾಜಿ ಪತಿಯ ಸವಿ ನೆನಪಿಗೆ ಮತ್ತೆ ಮನೆ ಖರೀದಿ

ಪದೇ ಪದೇ ನೆನಪಾದೆ.. ವಿರಹದಲ್ಲಿ ಸಮಂತಾ..!

ಪುಷ್ಪ ಚಿತ್ರದ ಕಥೆ ಎಲ್ರೂ ಮರೆತುಬಿಡಬಹುದು. ಆದ್ರೆ, ಸಮಂತಾ ​​ಲಂಗಾ ದಾವಣಿ ತೊಟ್ಟು ಸೊಂಟ ಬಳುಕಿಸಿದ ಊ ಅಂಟಾವಾ ಹಾಡನ್ನ ಯಾರೂ ಮರೆಯೋಕೆ ಸಾಧ್ಯವಿಲ್ಲ. ಸ್ಯಾಮ್​ ಡಿಗ್ಲಾಮ್​​ ಬೋಲ್ಡ್​​ ಲುಕ್​ ಕಂಡು ಪಡ್ಡೆ ಹೈಕಳು ಕಣ್​ ಪಿಳಿ ಪಿಳಿ ಬಿಟ್ಟು ನೋಡಿದ್ರು. ಕ್ಲಾಸಿಕ್​​ ಲುಕ್​​ನಲ್ಲಿ ಮಿಂಚ್ತಿದ್ದ ಸ್ಯಾಮ್​ ಮೈಮೇಲೆ ಯಾಕೆ ಬಟ್ಟೆಗಳೆ ನಿಲ್ತಿಲ್ಲ ಅಂತಾ ಫ್ಯಾನ್ಸ್​ ಕೂಡ ತಲೆಕೆಡಿಸಿಕೊಂಡಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಎಲ್ರು ಬೊಟ್ಟು ಮಾಡಿ ತೋರಿಸೋದು ಮಾತ್ರ ಸಮಂತಾ ಮ್ಯಾರೇಜ್​​ ಬ್ರೇಕಪ್​​​​​​.

ಸ್ಯಾಮ್​​ ಸುಖಸಂಸಾರ ಮುರಿದ ಮೇಲೆ ಆಧ್ಯಾತ್ಮದ ಕಡೆ ವಾಲಿದ್ರು. ಅಯ್ಯೋ..!  ಏನಾಯ್ತು ಸ್ಯಾಮ್​​ಗೆ ಅಂತಾ ಯೋಚಿಸೋ ಮುಂಚೆ ಗ್ಲಾಮರಸ್​​ ರೋಲ್​​​ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ರು. ನಾಗಚೈತನ್ಯ ಮದ್ವೆ ಮುರಿದ ಮೇಲೆ ಮತ್ತೊಂದು ಮದ್ವೆಯಾಗ್ತಾರೆ ಅಂದುಕೊಂಡಿದ್ದ ಫ್ಯಾನ್ಸ್​​ ನಿರೀಕ್ಷೆಗಳು ಹುಸಿಯಾದ್ವು. ಆದ್ರೆ, ಸಮಂತಾ ಮಾತ್ರ ನಾಗ ಚೈತನ್ಯ ನೆನಪಿಂದ ಹೊರ ಬಂದಿಲ್ಲ. ಬಿಟ್ಟೆನೆಂದರೂ ಬಿಡದ ಮಾಯೆಯಂತೆ ಮಾಜಿ ಪತಿಯ ನೆನಪು ಸ್ಯಾಮ್​​ಗೆ ಮತ್ತೆ ಮತ್ತೆ ಕಾಡ್ತಿದೆ.

ಟಾಲಿವುಡ್​​ನಲ್ಲಿ ಸ್ಯಾಮ್​ ಹಾಗೂ ನಾಗಚೈತನ್ಯ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದಾರೆ. ಈ ಜೋಡಿ ಮದ್ವೆಯಾದಾಗ ಇಡೀ ಸಿನಿರಂಗವೇ ಮನಸಾರೆ ಶುಭಹಾರೈಸಿ, ನೂರಾರು ಕಾಲ ಸುಖವಾಗಿ ಬಾಳಿ ಎಂದು ಆಶೀರ್ವದಿಸಿತ್ತು. ಅದ್ಯಾವ ಕಣ್ಣು ಈ ಜೋಡಿಯ ಮೇಲೆ ಬಿತ್ತೋ ಏನೋ, ನೋಡ ನೋಡುತ್ತಲೇ ಇಬ್ಬರೂ ಸಂಸಾರದಿಂದ ಮುಕ್ತಿ ಪಡೆದು ಸ್ವತಂತ್ರ್ಯವಾಗಿ ಬಾಳುತ್ತಿದ್ದಾರೆ. ಕಾರಣ ಏನು ಅನ್ನೋದು ಇಲ್ಲಿವರೆಗೂ ತಿಳಿದಿಲ್ಲ.

ಈ ಇಬ್ಬರೂ ಜೋಡಿ ದೂರಾದರೂ, ಒಬ್ಬರ ಬಗ್ಗೆ ಒಬ್ಬರೂ ಎಂದೂ ಕೆಟ್ಟ ಮಾತುಗಳನ್ನಾಡಿಲ್ಲ. ದೂರವಿದ್ದರೂ ಅದೇ ವಿರಹ ವೇದನೆಯಲ್ಲಿ ಬೇಯುತ್ತಿದ್ದಾರೆ. ಇತ್ತೀಚೆಗೆ ನಾಗ ಚೈತನ್ಯ ಮುದ್ದಿನ ನಾಯಿ ಫೋಟೊ ಶೇರ್​ ಮಾಡಿ ಮಾಜಿ ಪತ್ನಿಯನ್ನು ನೆನಪು ಮಾಡಿಕೊಂಡಿದ್ದರು. ಸ್ಯಾಮ್​ ಕೂಡ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಚೈತು ಜತೆಗೆ ನಟಿಸಿದ ಸಿನಿಮಾಗಳ ಫೋಟೋ ಶೇರ್ ಮಾಡ್ತಿರ್ತಾರೆ. ಇದನ್ನೆಲ್ಲಾ ನೋಡಿದ್ರೆ ಇಬ್ಬರ ನಡುವೆ ಚಿಕ್ಕ ಮುನಿಸು ಬಿಟ್ರೆ ಬೇರೆ ಏನೂ ಇಲ್ಲ ಅನಿಸುತ್ತದೆ. ​​

ಮದ್ವೆ ನಂತ್ರ ಜತೆಯಲ್ಲಿ ವಾಸವಿದ್ದ ಮನೆಯನ್ನು ಸ್ಯಾಮ್​​ ದುಪ್ಪಟ್ಟು ಹಣ ಕೊಟ್ಟು ಖರೀದಿ ಮಾಡಿದ್ದಾರಂತೆ. ಮದ್ವೆ ಮುರಿದು ಬಿದ್ದ ನಂತ್ರ ಮನೆಯ ಮಾಲೀಕರು ಬೇರೆಯವರಿಗೆ ಮಾರಿದ್ದರಂತೆ. ಇದೀಗ ನಾಗಚೈತನ್ಯ ಸವಿ ನೆನಪಿಗಾಗಿ ಕೇಳಿದಷ್ಟು ಹಣ ಕೊಟ್ಟು ಸಮಂತಾ ಮನೆ ಖರೀದಿ ಮಾಡಿದ್ದಾರೆ. ಖುಷಿಯ ದಿನಗಳನ್ನು ಕಳೆದ ಈ ಮನೆ ಸ್ಯಾಮ್​​ಗೆ ಮತ್ತೆ ಮತ್ತೆ ಕಾಡಿದೆ. ಹಾಗಾಗಿಯೇ ಸ್ಯಾಮ್​​​ ಹೈದರಾಬಾದಿನ ಈ ಮನೆಯನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿದ್ದಾರೆ. ಅಂತೂ ಚೈತು ಗುಂಗಲ್ಲಿ ಸ್ಯಾಮ್​​ ಇದ್ದಾರೆ ಎನ್ನಲಾಗ್ತಿದೆ. ಎನಿವೇ ಈ ಜೋಡಿ ಮತ್ತೆ ಒಂದಾಗ್ಲಿ ಅನ್ನೋದೆ ಅಭಿಮಾನಿಗಳ ಆಶಯ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES