Sunday, December 22, 2024

ನ್ಯಾಷನಲ್​ ಸ್ಟಾರ್​​ ಯಶ್​​ ಮುಂದಿನ ಸಿನಿಮಾ ಯಾವುದು..?

ಬೆಂಕಿ ಜತೆಗೆ ಪಳಗಿದ, ಹಠವ ಹೊತ್ತು ತಿರುಗಿದ, ಪಣವ ತೊಟ್ಟ ಯೋಧ, ಸ್ಯಾಂಡಲ್​​ವುಡ್​​ ಧೀರ ರಾಕಿಭಾಯ್​​ ಸದ್ಯ ಜಾಲಿಮೂಡ್​ನಲ್ಲಿದ್ದಾರೆ. ಪ್ರಪಂಚದ ಮೂಲೆ ಮೂಲೆಯಲ್ಲೂ ಮಾಸ್ಟರ್​​ ಪೀಸ್​ಗೆ ಅಭಿಮಾನಿಗಳಿದ್ದಾರೆ. ಸದ್ಯ ಯ್ಯೂರೋಪ್​​​, ಇಟಲಿಯಲ್ಲಿ ಯಶ್​​​​ ಫ್ಯಾನ್ಸ್​​ ಬಿಗ್​​ ಸರ್ಪ್ರೈಸ್​​ ಕೊಟ್ಟಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..?

ರಾಕಿಭಾಯ್​​ ತಾಕತ್ತು ಯೂರೋಪ್​​, ಇಟಲಿಗೂ ಗೊತ್ತು

ಕೆಜಿಎಫ್​​​ 2 ಸಕ್ಸಸ್​ ನಂತ್ರ ಇಟಲಿಯಲ್ಲಿ ರಿಲ್ಯಾಕ್ಸ್​​ ಮೂಡ್​​​

ನ್ಯಾಷನಲ್​ ಸ್ಟಾರ್​​ ಯಶ್​​ ಮುಂದಿನ ಸಿನಿಮಾ ಯಾವುದು..?

ಸ್ಯಾಂಡಲ್​ವುಡ್​ ಸಿಂಡ್ರೆಲಾ, ಮಾಸ್ಟರ್​​ ಪೀಸ್​ ಜಾಲಿ ವೆಕೇಷನ್​​​

ಕರ್ನಾಟಕದ ಚಿತ್ರರಂಗದಲ್ಲಿ ಇಲ್ಲಿವರೆಗೂ ಇದ್ದ ರಣರಂಗದ ಚದುರಂಗವನ್ನು ಭೇದಿಸಿ ತನ್ನ ಖ್ಯಾತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಹೀರೋ ರಾಕಿಂಗ್​ ಸ್ಟಾರ್​​. ಕೆಜಿಎಫ್​​ ನಂತ್ರ ಸುಲ್ತಾನನ ನೇಮು, ಫೇಮು ತೂಫಾನ್​​ನಂತೆ ಪ್ರಪಂಚದ ಮೂಲೆ ಮೂಲೆಗೂ ತಲುಪಿತು. ರಾಕಿಭಾಯ್​​ ಹೆಸ್ರು ಗೊತ್ತಿಲ್ಲದೆ ಇರೋ ಮಣ್ಣಿಲ್ಲ. ಆ ಲೆವೆಲ್​ಗೆ ರಾಕಿಭಾಯ್​​​ ಜನಪ್ರಿಯತೆ ಪಡೆದಿದ್ದಾರೆ.

ರಾಕಿಂಗ್​ ಸ್ಟಾರ್​ ನೆಕ್ಸ್ಟ್​​ ಪ್ರಾಜೆಕ್ಟ್​ ಯಾವುದು..? ಪ್ಯಾನ್​​ ಇಂಡಿಯಾನಾ..? ಇಲ್ಲಾ ಪ್ಯಾನ್​​ ವರ್ಲ್ಡ್​​ ಸಿನಿಮಾನಾ ಅಂತಾ ಫ್ಯಾನ್ಸ್​​ ತಲೆಕೆಡಿಸಿಕೊಂಡಿದ್ರೆ, ರಾಕಿಭಾಯ್​​ ಮಾತ್ರ ಯಾವ ಚಿಂತೆ ಇಲ್ಲದೆ ರಿಲ್ಯಾಕ್ಸ್​ ಮೂಡ್​​ನಲ್ಲಿದ್ದಾರೆ. ತಮ್ಮ ಮುದ್ದಿನ ಮಡದಿ ರಾಧಿಕಾ ಪಂಡಿತ್​ ಜತೆ ಯ್ಯೂರೋಪ್​​​, ಇಟಲಿ ಟೂರ್​​ ಮಾಡ್ತಿದ್ದಾರೆ. ಜಾಲಿಮೂಡ್​​ನಲ್ಲಿದ್ದ ರಾಕಿಭಾಯ್​​ಗೆ ಅಲ್ಲಿನ ಫ್ಯಾನ್ಸ್​​ ಕಾದು ನಿಂತು ಮಾತನಾಡಿಸಿದ್ದಾರೆ. ಸೆಲ್ಫಿ ಪಡೆದು ದಿಲ್​ಖುಷ್​ ಆಗಿದ್ದಾರೆ. ಅಂತೂ ದೇಶದ ಗಡಿಯಾಚೆ ಎಲ್ಲೆ ಮೀರಿದ ಪ್ರೀತಿ ಅಭಿಮಾನ ಕಂಡು ಯಶ್​​ ಫಿದಾ ಆಗಿದ್ದಾರೆ.

ರಾಕಿಭಾಯ್​​ ನೆಕ್ಸ್ಟ್​​​ ಪ್ರಾಜೆಕ್ಟ್​ ಬಗ್ಗೆ ಹಲವಾರು ಗಾಸಿಪ್​ಗಳು ಕೇಳಿ ಬರುತ್ತಲೇ ಇವೆ. ಇತ್ತ ಟಾಲಿವುಡ್​ನ ಖ್ಯಾತ ನಿರ್ಮಾಪಕ ದಿಲ್​ರಾಜು ಕೂಡ 100 ಕೋಟಿ ಸಂಭಾವನೆಯ ಆಫರ್​ ಕೂಡ ಕೊಟ್ಟಿರೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ನರ್ತನ್​​ ಪ್ರಾಜೆಕ್ಟ್​​ನಲ್ಲಿ ಯಶ್​​ ನಟಿಸ್ತಾರೆ ಅನ್ನೋ ಗಾಳಿಸುದ್ದಿಯೂ ಬಿರುಗಾಳಿ ಎಬ್ಬಿಸ್ತು. ಇತ್ತ ನೀಲ್​​​ ಕೆಜಿಎಫ್​​ 3ಗೆ ಸಲಾರ್​​ ಸಿನಿಮಾ ಅಡ್ಡ ನಿಂತಿದೆ. ಹಾಗಾದ್ರೆ ಯಶ್​​ ಯಾವುದೋ ದೊಡ್ಡ ಪ್ಲಾನ್​ ಮಾಡಿಕೊಂಡಿರೋದಂತೂ ಪಕ್ಕಾ. ಹಾಗಾಗಿಯೇ ಯಾವುದೋ ಪ್ರಾಜೆಕ್ಟ್​ ಮೇಲೆ ಇಟಲಿಗೆ ಹೋಗಿದ್ದಾರೆ ಎನ್ನಲಾಗ್ತಿದೆ.

ಸ್ಯಾಂಡಲ್​​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ಜತೆ ಇಟಲಿ, ಯೂರೋಪ್​​ನಲ್ಲಿ ಸುತ್ತಾಡ್ತಿರೋ ಯಶ್​ ಕೆಲವು ಫೋಟೋಗಳನ್ನು ಶೇರ್​ ಮಾಡ್ತಿದ್ದಾರೆ. ಮುದ್ದಾದ ಜೋಡಿಯ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್​​​ ಕಮೆಂಟ್ಸ್​ ಹರಿದು ಬರ್ತಿವೆ. ಈ ನಡುವೆ ಹೋಟೆಲ್​​​ನಲ್ಲಿ ಬಾಂಗ್ಲಾ, ಇಟಲಿಯ ಫ್ಯಾನ್ಸ್​​​ಗಳನ್ನು ಯಶ್​ ಮೀಟ್​ ಆಗಿದ್ದು, ಆ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದ್ರ ಜತೆಯಲ್ಲಿ ನನ್ನ ಮೇಲಿನ ಪ್ರೀತಿ ಗಡಿ ಮೀರಿದೆ ಎಂದು ಬರೆದುಕೊಂಡಿದ್ದಾರೆ.

ಯಶ್​ ಮ್ಯಾನರಿಸಂ, ಆ್ಯಕ್ಟಿಂಗ್​​​, ಅವರ ಸ್ಟೈಲ್​​ಗೆ ಪ್ರಪಂಚದಾದ್ಯಂತ ಅಭಿಮಾನಿಗಳು ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಅವರ ಸಿನಿಮಾ ನೋಡಿ ಹುಚ್ಚು ಅಭಿಮಾನದಿಂದ ಸಾಗರ ದಾಟಿ ಭೇಟಿ ಮಾಡಲು ಬರುತ್ತಾರೆ. ಇದೀಗ ಇಟಲಿಯಲ್ಲಿರೋ ಯಶ್​ ಅವರನ್ನು ಕಂಡು ಬಾಂಗ್ಲಾ ಹಾಗೂ ಇಟಲಿ ಅಭಿಮಾನಿಗಳು ಥ್ರಿಲ್​ ಆಗಿದ್ದು ಯಶ್​ ಜತೆ ಕೆಲಹೊತ್ತು ಸಮಯ ಕಳೆದಿದ್ದು ಯಶ್​ ರೇಂಜ್​​​​​​​ ಯಾವ ಲೆವೆಲ್​​​​​ಗಿದೆ ಅನ್ನೋದು ಮತ್ತೆ ಪ್ರೂವ್ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES