ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಓರ್ವ ವ್ಯಕ್ತಿಗೆ ಮಂಕಿಪಾಕ್ಸ್ ಗುಣ ಲಕ್ಷಣಗಳಿವೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಮಾಹಿತಿ ನೀಡಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಓರ್ವ ವ್ಯಕ್ತಿಗೆ ಮಂಕಿಪಾಕ್ಸ್ ಗುಣ ಲಕ್ಷಣಗಳಿದ್ದು ಶಂಕಿತ ವ್ಯಕ್ತಿಯ ಸ್ಯಾಂಪಲ್ನ್ನ ಈಗಾಗಲೇ ಟೆಸ್ಟ್ಗೆ ಕಳುಹಿಸಿದ್ದೇವೆ. ಟೆಸ್ಟ್ ರಿಪೋರ್ಟ್ ಬಂದ ನಂತರ ಖಾತ್ರಿ ಆಗಲಿದೆ ಎಂದು ತಿಳಿಸಿದರು.
ಇನ್ನು ಮಂಕಿಪಾಕ್ಸ್ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಮಂಕಿಪಾಕ್ಸ್ಗೆ ಚಿಕಿತ್ಸೆ ಇದೆ. ಸಾವಾಗುತ್ತೆ ಅಂತ ಇಲ್ಲ ಸಾವು ತೀರಾ ಅನಿರೀಕ್ಷಿತ
ಸ್ಮಾಲ್ ಫಾಕ್ಸ್ ಫ್ಯಾಮಿಲಿಯಿಂದಲೇ ಅದು ಕಾಣ್ತಿರೋದು. ವ್ಯಾಕ್ಸಿನ್ ಪಡೆದುಕೊಂಡವರಿಗೆ ಅದರ ತೀವ್ರತೆ ಕಡಿಮೆ ಇರಲಿದೆ. ಮಂಕಿಪಾಕ್ಸ್ ಮಾರಣಾಂತಿಕ ಖಾಯಿಲೆ ಅಲ್ಲ, ಚಿಕಿತ್ಸೆ ಕೊಟ್ರೆ ಗುಣಮುಖವಾಗಲಿದೆ ಎಂದು ಸ್ಪಷ್ಟನೆ ನೀಡಿದರು.