Thursday, December 26, 2024

ದೇಶದ ಆಶಾಕಿರಣವೇ ಆರ್.ಎಸ್.ಎಸ್ : ಕೆ.ಎಸ್​.ಈಶ್ವರಪ್ಪ

ಶಿವಮೊಗ್ಗ : ಒಕ್ಕಲಿಗರು, ಕುರುಬರ ನಾಯಕರು ಎಂದು ಬೀಗುವ ಇವರು ಮೊದಲು ಬಿಜೆಪಿ, ಆರ್.ಎಸ್.ಎಸ್. ಬಗ್ಗೆ ತಿಳಿದುಕೊಳ್ಳಲಿ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಇಂತಹ ಕೆಟ್ಟ ಮುಖ್ಯಮಂತ್ರಿ ನೀಡಿದ್ದೆವೆಲ್ಲಾ ಎಂದು ಬೇಸರವಾಗುತ್ತೆ. ಯಂಸೇವಕರು, ಆರ್.ಎಸ್.ಎಸ್. ಬಗ್ಗೆ ಇವರು ಮೊದಲು ತಿಳಿದುಕೊಳ್ಳಲಿ. ಸಿದ್ಧರಾಮಯ್ಯಗೆ ಆರ್.ಎಸ್.ಎಸ್. ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲ. ಆರ್.ಎಸ್.ಎಸ್., ಸ್ವಯಂ ಸೇವಕರ ಪಾದದ ಧೂಳಿಗೂ ನೀವು ಸರಿಸಮಾನರಲ್ಲ ನೀವು. ದೇಶದ ಆಶಾಕಿರಣವೇ ಆರ್.ಎಸ್.ಎಸ್ ಎಂದರು.

ಇನ್ನು, ರಾಷ್ಟ್ರದ್ರೋಹಿ ಎಂದು ಆರ್.ಎಸ್.ಎಸ್. ಗೆ ಕರೆಯುತ್ತಿರಾ..? ಒಂದೆರೆಡು ದಿನ ನೀವು ಕೂಡ ಆರ್.ಎಸ್.ಎಸ್. ಗೆ ಬನ್ನಿ. ಆರ್.ಎಸ್.ಎಸ್. ಬಗ್ಗೆ ಮಾತನಾಡುವ ಮುನ್ನ ನಿಮ್ಮ ನಾಲಿಗೆ ತೊಳೆದುಕೊಳ್ಳಿ. ಆರ್.ಎಸ್.ಎಸ್. ಬಗ್ಗೆ ಗಂಧಗಾಳಿ ಗೊತ್ತಿಲ್ಲದ ನೀವು ಇಂತಹ ಮಾತು ಏಕೆ ಆಡ್ತಿರಾ…..? ಬೇಕಾದರೆ, ನಾನೇ ಇವರಿಗೆ ಆರ್.ಎಸ್.ಎಸ್. ಶಾಖೆಗೆ ಕರೆದುಕೊಂಡು ಹೋಗುತ್ತೇನೆ ಮೊದಲು ಇವರು ಆರ್.ಎಸ್.ಎಸ್. ಮತ್ತು ದೇಶದ ಜನರ ಕ್ಷಮೆ ಕೇಳಲಿ ಎಂದು ಹೇಳಿದರು.

ಅದಲ್ಲದೇ, ಬಿಜೆಪಿ ಮುಖ್ಯಮಂತ್ರಿ ಸ್ಥಾನದ ರಾಜಿನಾಮೆ ಕೇಳ್ತಿರಾ…..? ಈಗಾಗಲೇ ಪ್ರವೀಣ್ ಕೊಲೆಗಡುಕರನ್ನು ಬಂಧಿಸಲಾಗಿದೆ. ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದೇವೆ. ರಾಜಕಾರಣಕ್ಕೂ ಇತಿಮಿತಿ ಇದೆ. ನೀವುಗಳು ಇತಿಮಿತಿ ಮೀರಿ ಮಾತನಾಡುತ್ತಿದ್ದಿರಾ. ಒಬ್ಬ ಮುಖ್ಯಮಂತ್ರಿ ಆಗಿದ್ದೆನೆ ಎಂಬುದನ್ನು ಮರೆತು ಮಾತನಾಡುತ್ತಿದ್ದಿರಾ ಎಂದು ಸಿದ್ಧರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ಮಾಡಿದರು.

ಇನ್ನು, ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ ನಡೆಸುತ್ತಾರೆ. ಮಾದ್ಯಮದವರ ಮೇಲೆ ಹಲ್ಲೆ ಮಾಡುತ್ತಿರಲ್ಲಾ. ರಮೇಶ್ ಕುಮಾರ್ ಅವರನ್ನು ಅರೆಸ್ಟ್ ಮಾಡಿ. ನಾನು ಅವರನ್ನು ಬಂಧಿಸಲು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ. ಮೊದಲು ರಮೇಶ್ ಕುಮಾರ್ ಅವರನ್ನು ಬಂಧಿಸಿ. ರಮೇಶ್ ಕುಮಾರ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಕಾಂಗ್ರೆಸ್ ನವರು ಬಳಸುವ ಪದಗಳು ನೋಡಿದರೆ ರಕ್ತ ಕುದಿಯುತ್ತದೆ. ಪತ್ರಿಕೆಗಳನ್ನು ಓದಿದರೆ, ಕಾಂಗ್ರೆಸ್ ನವರ ಮಾತು ನೋಡಿದರೆ ಒಡೀ ದಿನ ಪತ್ರಿಕಾಗೋಷ್ಠಿ ನಡೆಸಬೇಕಾಗುತ್ತದೆ ಕಾಂಗ್ರೆಸ್ ನವರು ಮಾತುಗಳು ಹಾಗೆ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು,

RELATED ARTICLES

Related Articles

TRENDING ARTICLES