Thursday, December 26, 2024

2023ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ : ಹೆಚ್​ಡಿಕೆ

ಬೀದರ್​ : ರಾಜ್ಯದಲ್ಲಿ ರೈತರ ಸಾಲು ಸಾಲು ಆತ್ಮಹತ್ಯೆ ನಡೆಯುತ್ತಿದೆ ಇದು ಬಿಜೆಪಿ ಆಡಳಿತ ತೋರಿಸುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚ ರಥಯಾತ್ರೆ ಕಾರ್ಯಕ್ರಮ 104 ಕ್ಷೇತ್ರದಲ್ಲಿ ಶೀಘ್ರದಲ್ಲೇ ದಿನಾಂಕ ನಿಗದಿಯಾಗಿದ್ದು, ಜನತಾ ಜಲದಾರೆ ರೀತಿಯಲ್ಲೆ ಪಂಚ ರಥಯಾತ್ರೆ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ಉದ್ಯೋಗ ಗ್ರಾಮಗಳ ಅಭಿವೃದ್ಧಿ ಬಗ್ಗೆ ಪಕ್ಷಸ ನಿಲುವು ತಿಳಿಸಲು ಈ ಯಾತ್ರೆ ನಡೆಯುತ್ತಿದ್ದು, ಬೀದರ್ ಕಲ್ಬುರ್ಗಿ ರಾಯಚೂರು ಜಿಲ್ಲೆಯ ಅಭ್ಯರ್ಥಿಗಳನ್ನ ಒಂದೆರಡು ವಾರದಲ್ಲಿ ಘೋಷಣೆ ಮಾಡಲಾಗುತ್ತದೆ ಎಂದರು.

ಇನ್ನು, ಯಾವುದೇ ಪಕ್ಷದ ಬೆಂಬಲ ವಿಲ್ಲದೆ 2023 ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ರೈತರ ಸಾಲು ಸಾಲು ಆತ್ಮಹತ್ಯೆ ನಡೆಯುತ್ತಿದೆ ಇದು ಬಿಜೆಪಿ ಆಢಳಿತ ತೋರಿಸುತ್ತಿದೆ. ಕೋವಿಡ್ ಸಮಯದಲ್ಲಿ ಮೃತ್ತಪಟ್ಟವರಿಗೆ ಸರಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಕೇವಲ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ನಿಕೀಲ್ ಕುಮಾರಸ್ವಾಮಿ ಪಕ್ಷ ಸಂಘಟನೆಗೆ ಮಾಡುತ್ತಾರೆ ಅವರ ಸ್ಪರ್ಧೆ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿದರು.

ಅದಲ್ಲದೇ, ರೈತರ ಸಾಲ ಮನ್ನಾ ಬಗ್ಗೆ ನಾನು ಯೋಚನೆ ಬಿಟ್ಟಿರುವೆ ಅವರು ಸಾಲಗಾರ ಆಗದಂತೆ ಮಾಡುವುದು ಹೇಗೆ ಎಂದು ಯೋಚಿಸಿರುವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯವರು ಅಪ್ರೆಷನ್ ಕಮಲ ಮಾಡುವ ಪ್ರಶ್ನೆಯೆ ಬರುವುದಿಲ್ಲ. ಆಪ್ರೆಷನ್ ಮಾಡುವ ಅವಕಾಶ ಕೊಟ್ಟರೆ ಅವರು ಮಾಡುತ್ತಾರೆ ಆದರೆ ಅದಕ್ಕೆ ಅವಕಾಶ ಸಿಗುವುದಿಲ್ಲ ಎಂದರು.

ಮಂಗಳೂರಿನಲ್ಲಿ ಕೊಲೆಯಾದ ಮೂರು ಕುಟುಂಬಕ್ಕೆ ನಾನು ಭೆಟ್ಟಿ ಮಾಡುವೆ, ಪ್ರವೀಣ ಕೊಲೆ ಕೇಸ್ ಎನ್ ಐಎ ಗೆ ಕೊಡುತ್ತೇವೆಂದು ಹೇಳಿದ್ದಾರೆ ಆದರೆ ಅವರಿಗೆ ಕೊಟ್ಟಿರುವ ಕೇಸ್ ಗಳು ಐದಾರು ವರ್ಷಕಳೆದರೂ ಏನಾಗಿದೆ ಅಂತಾ ಗೊತ್ತಿಲ್ಲ. ಆದರೆ ಅವರಿಗೆ ಪ್ರವೀಣ್ ಕೊಲೆ ಕೇಸ್​ ಕೊಟ್ಟರೆ ಅದರ ತನಿಕೆ ಮುಗಿಯೋದು ಎಷ್ಟು ವರ್ಷಬೇಕು. ಆದರೆ ಅವರ ಕುಟುಂಬದ ‌ಹೆಣ್ಣು ಮಕ್ಕಳು NIAಗೆ ಕೊಡಿ ಎಂದು ಕೇಳಿದ್ದಾರೆ ಪಾಪ ಅವರಿಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES