Thursday, December 26, 2024

‘ಮುಸ್ಲಿಂ ಯುವಕ ಎಂಬ ಕಾರಣಕ್ಕೆ ಫಾಜಿಲ್ ಮನೆಗೆ ಸಿಎಂ ಹೋಗಿಲ್ಲ’

ಶಿವಮೊಗ್ಗ: ಕರಾವಳಿ ಭಾಗದಲ್ಲಿ ಹಿಂದೂ ಮುಸ್ಲಿಂ ಕೋಮುದ್ವೇಷದಿಂದ ಕೊಲೆಗಳು ನಡೆಯುತ್ತಿವೆ ಎಂದು ಆರೋಪಿಸಿ ಶಿವಮೊಗ್ಗದಲ್ಲಿ ಕೋಮುದ್ವೇಷ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ನಗರದ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿತು.

ಸುನ್ನಿ ಜಮೈತುಲ್ ಉಲ್ಮ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಮೃತ ಪ್ರವೀಣ್ ಮನೆಗೆ ಮಾತ್ರ ಭೇಟಿ ನೀಡಿದ್ದಾರೆ. ಆದರೆ, ಮೃತ ಮುಸ್ಲಿಂ ಯುವಕನ ಮನೆಗೆ ಭೇಟಿ ನೀಡಿಲ್ಲ ಎಂದು ಅವರು ಆರೋಪ ಮಾಡಲಾಗಿತ್ತು.

ಮುಸಲ್ಮಾನ್ ಯುವಕ ಎಂಬ ಕಾರಣಕ್ಕೆ ಫಾಜಿಲ್ ಮನೆಗೆ ಸಿ.ಎಂ. ಹೋಗಲಿಲ್ಲ ಎಂದು ಆರೋಪ ಮಾಡಿದರು. ಫಾಜಿಲ್ ಕುಟುಂಬಕ್ಕೆ ಈವರೆಗೂ ಪರಿಹಾರ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES