Wednesday, January 22, 2025

ಪ್ರವೀಣ್​​​ ಹತ್ಯೆ ಖಂಡಿಸಿ ಸ್ವಪಕ್ಷ ಸರ್ಕಾರದ ವಿರುದ್ಧವೇ ಕಿಡಿಕಾಡಿದ ಶಾಸಕರು

ಮೈಸೂರು: ಪ್ರವೀಣ್ ಹತ್ಯೆ ಖಂಡಿಸಿ ಸ್ವಪಕ್ಷ ಸರಕಾರದ ವಿರುದ್ಧವೇ ಬಿಜೆಪಿಯ ಶಾಸಕ ಹರ್ಷವರ್ಧನ್ ಕಿಡಿಕಾರಿದ್ದಾರೆ.

ಬೆಳ್ಳಾರೆಯ ಪ್ರವೀಣ್​​ ನೆಟ್ಟಾರು ಹತ್ಯೆ ಖಂಡಿಸಿ ಮೈಸೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಾವುದೇ ಸರ್ಕಾರವಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು.ಜನರ ಜೀವ ಉಳಿಸಲು ಕ್ರಮ ಕೈಗೊಳ್ಳಬೇಕು. ಅದು ಸಾಧ್ಯವಾಗದೆ ಇದ್ದರೆ ಅಂತಹ ಸರಕಾರ ಇದ್ದರೆಷ್ಟೂ ಹೋದರೆಷ್ಟು ಎಂದು ಗುಡುಗಿದರು.

ಅಲ್ಲದೇ ಸರ್ಕಾರದ ರಚನೆಗೆ ನಮ್ಮ ಪಕ್ಷದ ಕಾರ್ಯಕರ್ತರ ಬೆವರು, ಶ್ರಮವಿದೆ. ಇದರ ಜೊತೆಗೆ ರಕ್ತ ಬೆರೆಸುವುದು ಬೇಡ. ಸಿಎಂ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರ ಕೂಡ ಕೇರಳದ ಗಡಿ ಭಾಗದಲ್ಲಿದೆ. ಈ ಕ್ಷೇತ್ರದ ಭಾಗಗಳಲ್ಲೂ ಇಂತಹ ಘಟನೆ ನಡೆಯಲ್ಲ ಎಂಬುದಕ್ಕೆ ಗ್ಯಾರಂಟಿ ಏನೂ. ಇಂತಹ ದುಷ್ಟ ಶಕ್ತಿಗಳನ್ನು ಸರ್ಕಾರ ಸಮರ್ಥವಾಗಿ ಮಟ್ಟಹಾಕ ಬೇಕು ಎಂದು ಶಾಸಕ ಹರ್ಷವರ್ಧನ್ ಹೇಳಿದರು.

ಇನ್ನು ಇದೇ ವೇಳೆ ಮಾತನಾಡಿದ ಶಾಸಕ ರಾಮದಾಸ್ ಅವರು, ನಮ್ಮದೇ ದೇಶದಲ್ಲಿ ನಮ್ಮದೇ ರಾಜ್ಯದಲ್ಲಿ ನಮ್ಮವರ ಉಳಿವಿಗಾಗಿ ಹೋರಾಟ ಮಾಡ್ತಾ ಇರೋದು ಶೋಚನೀಯವಾಗಿದೆ. ಭಾರತವು ಯಾವುದೋ ಕಲಿಸ್ತಾನ ಪಾಕಿಸ್ಥಾನ, ಆಫ್ಘಾನಿಸ್ತಾನ ಆಗುವುದು ಬೇಡ.
ಭಾರತವು ಭಾರತವಾಗೇ ಉಳಿಯಬೇಕು. ಭಾರತದ ಉಳಿವಿಗಾಗಿ ಹೋರಾಟ ಮಾಡಬೇಕಾಗಿದೆ. ಭಾರತಾಂಬೆಯ ರಕ್ಷಣೆ ಮಾಡಬೇಕಾಗಿದೆ ಎಂದು ಪ್ರತಿಭಟನೆ ವೇಳೆ ತಮ್ಮದೇ ಸರ್ಕಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES