ಹಾಸನ : ಸಿದ್ದರಾಮಯ್ಯ ಹುಟ್ಟು ಹಬ್ಬ ಅಮೃತಮಹೋತ್ಸವ ಮುಗಿಯೊವರೆಗೆ ಪಾದಯಾತ್ರೆ ಮಾಡಬಾರದು ಎಂದು ಸಿದ್ದರಾಮಯ್ಯ ಅಭಿಮಾನಿಗಳು ತಾಕೀತು ಮಾಡಿದ್ದಾರೆ.
ನಿನ್ನೆಯಿಂದ ಪಾದಯಾತ್ರೆ ಆರಂಭಿಸಿದ್ದ ಡಿಕೆ ಶಿವಕುಮಾರ್ ಬೆಂಬಲಿತ ಕೈ ನಾಯಕರ ಗುಂಪು. ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಶ್ರೀಧರ್ ಗೌಡ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಯನ್ನು, ರಾತ್ರಿ ಕ್ಷೇತ್ರದ ದೊಡ್ಡಳ್ಳಿಗೆ ಪಾದಯಾತ್ರೆ ಬಂದಾಗ ಸಿದ್ದರಾಮಯ್ಯ ಅಭಿಮಾನಿಗಳು ತಡೆದಿದ್ದಾರೆ.
ಇನ್ನು, ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಅಡ್ಡಿಪಡಿಸಲು ಪಾದಯಾತ್ರೆ ಹೊರಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಅಭಿಮಾನಿಗಳು ಕೈ ಮುಖಂಡರಾದ ಶ್ರೀಧರ್ ಗೌಡ, ಶೇಷೇಗೌಡರಿಗೆ ರಸ್ತೆಯಲ್ಲಿ ಪಾದಯಾತ್ರೆ ಉದ್ದೇಶ ವಿವರಿಸಲು ಹೊರಟ ನಾಯಕರ ಜೊತೆ ಯುವಕರ ಗುಂಪು ವಾಗ್ಚಾದ ನಡೆಸಿದ್ದಾರೆ. ಯುವಕರ ಗುಂಪು ಸಮಾಧಾನ ಮಾಡಲಾಗದೆ ಸ್ಥಳದಿಂದ ವಾಪಸ್ಸಾದ ಮುಖಂಡರು. ಎರಡೆರಡು ಪ್ರತ್ಯೇಕ ಬಣಗಳಾಗಿ ಪಾದಯಾತ್ರೆ ನಡೆಸಲು ಕಾಂಗ್ರೆಸ್ ಗುಂಪುಗಳು ಪ್ಲಾನ್ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ 75 ಪಾದಯಾತ್ರೆ ಹೆಸರಿನಲ್ಲಿ ಕೆಪಿಸಿಸಿ ಯಿಂದ ಪಾದಯಾತ್ರೆಗೆ ಸೂಚನೆ ನೀಡಿದ್ದಾರೆ. ಆದರೆ ಸ್ಥಳೀಯವಾಗಿ ನಾಯಕರ ಬೆಂಬಲಿತ ಗುಂಪುಗಳ ಪ್ರತ್ಯೇಕ ಪಾದಯಾತ್ರೆ ಮಾಡುತ್ತಿದ್ದು, ಡಿಕೆ ಶಿವಕುಮಾರ್ ಬಣದ ಮುಖಂಡರ ಪಾದಯಾತ್ರೆಗೆ ನೆನ್ನೆ ಸಿದ್ದರಾಮಯ್ಯ ಬೆಂಬಲಿಗರು ಅಡ್ಡಿ ಪಡಿಸಿದ್ದಾರೆ.