Wednesday, January 22, 2025

‘ಪುಷ್ಪ ದಿ ರೈಸ್’ ​​​​​ನಲ್ಲಿ ಅಲ್ಲು ಅರ್ಜುನ್​​ ನ್ಯೂ ಗ್ಲಾಮರ್​​ ಲುಕ್​​​​​

ಪುಷ್ಟ ದಿ ರೂಲ್​​ ಚಿತ್ರದ ಮೂಲಕ ಗ್ಲೋಬಲ್​ ಐಕಾನ್​ ಆಗಿ ಮಿಂಚಿದ್ದ ಸೂಪರ್ ಸ್ಟಾರ್​ ಅಲ್ಲು ಅರ್ಜುನ್​​ ನ್ಯೂ ಲುಕ್​​ ಸಖತ್​ ವೈರಲ್​ ಆಗಿದೆ. ಅಲ್ಲು ವಿಭಿನ್ನ ಪ್ರಯೋಗಗಳಿಗೆ ಫುಲ್​ ಫೇಮಸ್ಸು. ಸ್ಟೈಲೀಶ್​ ಸ್ಟಾರ್​ ನ್ಯೂ ರಗಡ್​​ ಲುಕ್​​ ಕಂಡು ಫ್ಯಾನ್ಸ್​​ ಪೆಚ್ಚಾಗಿದ್ದಾರೆ. ಅರೆ..! ಎನಿದು ಅವತಾರ..? ವಾವ್ಹ್..!​​​

ಪುಷ್ಪನ ಕೈಯಲ್ಲಿ ಸಿಗಾರ್​​​.. ಪಕ್ಕಾ ಮಾಸ್​​ ರಗಡ್​​​ ಲುಕ್​​

ಚಿತ್ತೂರ್ ಸ್ವಾಗ್​​ನಲ್ಲಿ ಸೀಕ್ವೆಲ್​ ಸಿನಿಮಾ ರಣಭಯಂಕರ

ಪ್ರತಿ ಬಾರಿಯೂ ಅಚ್ಚರಿ ಮೂಡಿಸೋ ಸ್ಟೈಲಿಶ್ ಐಕಾನ್

‘ಪುಷ್ಪ ದಿ ರೈಸ್’ ​​​​​ನಲ್ಲಿ ಅಲ್ಲು ಅರ್ಜುನ್​​ ನ್ಯೂ ಗ್ಲಾಮರ್​​ ಲುಕ್​​​​​

ಕೋಟ್ಯಂತರ ಅಲ್ಲು ಅಭಿಮಾನಿಗಳು ಪುಷ್ಟ ಸೀಕ್ವೆಲ್​ ಚಿತ್ರದ ಹೊಸ ಅಪ್ಡೇಟ್​ ಏನು ಅಂತಾ ಕೇಳ್ತಿದ್ರು. ನಿರ್ದೇಶಕ ಸುಕುಮಾರ್​​, ಇತ್ತೀಚೆಗೆ ಚಿತ್ತೂರಿನ ತೆಲುಗು ಭಾಷೆಯನ್ನು ಬಲ್ಲವರಿಗೆ ಸಿನಿಮಾದಲ್ಲಿ ನಟಿಸುವ ಸದಾವಕಾಶ ಕಲ್ಪಿಸಿದ್ರು. ಇದಾದ ನಂತ್ರ ಪುಷ್ಪ ಸಿನಿಮಾದ ಯಾವ ಅಪ್ಡೇಟ್​ ಕೂಡ ಫ್ಯಾನ್ಸ್​ಗೆ ಸಿಕ್ಕಿರಲಿಲ್ಲ. ಗೂಗಲ್​​ ಇಣುಕಿದ್ರೂ ಪುಷ್ಪನ ಕುರಿತಾಗಿ ಇಂಟ್ರೆಸ್ಟಿಂಗ್​​ ಮಾಹಿತಿಗಳಿರಲಿಲ್ಲ. ಇದೀಗ ಪುಷ್ಪ ಟೀಮ್​ ಕಡೆಯಿಂದ ಎಲ್ಲರೂ ಮುಟ್ಟಿನೋಡಿಕೊಳ್ಳುವ ಪೋಸ್ಟರ್​ ರಿಲೀಸ್​ ಆಗಿದೆ. ಅಲ್ಲು ನ್ಯೂ ರಗಡ್​ ಲುಕ್​​​​​​​ಗೆ ಅಬ್ಬಬ್ಬಾ..! ಅಂತಾ ಶಾಕ್​ ಆಗಿದ್ದಾರೆ.

ಅಲ್ಲು ಅರ್ಜುನ್​​ ಏನೇ ಮಾಡಿದ್ರೂ ಅದೊಂದು ಫ್ಯಾಷನ್​ ಆಗಿಬಿಡುತ್ತೆ. ಅವರು ಸುಮ್ನೆ ನಡೆದ್ರೂ ಅದೊಂದು ಐಕಾನಿಕ್​ ಸ್ಟೈಲ್​ ಆಗುತ್ತೆ. ಹೇರ್​ಸ್ಟೈಲ್​​​​, ಡ್ರೆಸ್​​​​, ಸ್ಯೂಟ್​​ ಎಲ್ಲಾ ವಿಚಾರದಲ್ಲೂ ಅಲ್ಲು ಅರ್ಜುನ್​ ಫಾಲೋ ಮಾಡೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇದೀಗ ಅಲ್ಲು ಶೇರ್​ ಮಾಡಿಕೊಂಡಿರೋ ಹೊಸ ಪೋಸ್ಟರ್​​​ ಕಿಚ್ಚು ಹಚ್ಚಿದೆ. ಕೈಯಲ್ಲಿ ಸಿಗಾರ್​ ಹಿಡಿದಿದ್ದು, ಜಾಕೆಟ್​​ ತೊಟ್ಟಿದ್ದಾರೆ. ಬ್ಲಾಕ್​ ಗ್ಲಾಸ್​​ ಹಾಕಿದ್ದು, ಕೆಂಪು ಶರ್ಟ್​​, ಬ್ಲಾಕ್​ ಜಾಕೆಟ್​ ಹಾಕಿದ್ದಾರೆ. ಸದ್ಯ, ಈ ಪೋಸ್ಟರ್​ ಎಲ್ಲಾ ಕಡೆ ಟಾಕ್​ ಆಫ್​ ದಿ ಟೌನ್​ ಆಗಿದೆ.

ಅಲ್ಲು ಸಿನಿಮಾಗಳನ್ನು ಗಮನಿಸಿದವ್ರಿಗೆ ಅವ್ರ ಸ್ಟೈಲ್​​​​ ಮ್ಯಾನರಿಸಂ ಅರ್ಥ ಆಗಿರುತ್ತೆ. ಪ್ರತಿ ಚಿತ್ರಗಳಲ್ಲೂ ಅವರ ಬಾಡಿ ಲಾಂಗ್ವೇಜ್​​ನಿಂದ ಹಿಡಿದು, ಡೈಲಾಗ್​​ ಡೆಲಿವರಿವರೆಗೂ ಕಂಪ್ಲೀಟ್​​​ ಚೇಂಜ್​ ಓವರ್​ ಬಯಸೋ ವರ್ಸಟೈಲ್​​ ಆ್ಯಕ್ಟರ್​​ ಅಲ್ಲು ಅರ್ಜುನ್​​. ಅವರನ್ನು ಸ್ಟಾರ್​ ಕ್ರಿಕೆಟರ್​​ನಿಂದ ಹಿಡಿದು ಸ್ಟಾರ್​​ ನಟರವರೆಗೂ ಅನುಕರಣೆ ಮಾಡ್ತಾರೆ. ಇದೀಗ ರಿಲೀಸ್​ ಆಗಿರೋ ಅಲ್ಲು ನ್ಯೂಗ್ಲಾಮ್​​ ಲುಕ್​ ಕೂಡ ಪುಷ್ಪ ದಿ ರೈಸ್​ ಚಿತ್ರದ ಸ್ಟೈಲ್​​ ಎಂದೇ ಬಣ್ಣಿಸಲಾಗ್ತಿದೆ.

ಚಂದನವನ ಮರಗಳ ಸ್ಮಂಗ್ಲಿಂಗ್​​​​ನಲ್ಲಿ ಪಂಟನಾಗಿ ತನ್ನದೇ ಸಾಮ್ರಾಜ್ಯ ಹುಟ್ಟು ಹಾಕಿರೋ ಪುಷ್ಪ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾನೆ. ಇದೀಗ ಚಾಪ್ಟರ್​2 ನಲ್ಲಿ ಸ್ಮಂಗ್ಲಿಂಗ್​ ವ್ಯವಹಾರಗಳು ಇಂಟರ್​​ನ್ಯಾಷನಲ್​​ ಲೆವೆಲ್​​​ ತಲುಪಲಿವೆಯಂತೆ. ಹಾಗಾಗಿಯೇ ಅವನ ಸ್ಟೈಲ್​​ ಬದಲಾಗಿದೆ. ಜತೆಗೆ ವೈರಿಗಳು ಕತ್ತಿ ಮಸೆಯುತ್ತಿರೋದ್ರಿಂದ ಕದನದಲ್ಲಿ ಹೋರಾಟ ಭಯಂಕರವಾಗಿರಲಿದೆ.

ಒಟ್ಟು ಐದು ಭಾಷೆಗಳಲ್ಲಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿರುವ ಪುಷ್ಪ ಸೀಕ್ವೆಲ್​​​ ಮೇಲೆ ನಿರೀಕ್ಷೆಗಳು ಬೆಟ್ಟದಷ್ಟಿವೆ. ಶ್ರೀವಲ್ಲಿ ರಶ್ಮಿಕಾ ಮ್ಯಾಜಿಕ್​​ಗಾಗಿ ಕಾಯ್ತಿದ್ದಾರೆ. ಈ ವರ್ಷದ ಕೊನೆಗೆ ತೆರೆಗೆ ಬರೋಕೆ ಸಜ್ಜಾಗಿರುವ ಪುಷ್ಪ ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲಕ್ಕೆ ಈ ಪೋಸ್ಟರ್​ ಕಿಡಿ ಹಚ್ಚಿದೆ. ಸ್ಮೋಕಿಂಗ್​​ ಆರೋಗ್ಯಕ್ಕೆ ಹಾನಿಕರ ಎಂದು ಫೋಟೋ ಕೆಳಗೆ ಅಲ್ಲು ಬರೆದುಕೊಂಡಿದ್ದಾರೆ. ಆದ್ರೆ, ಅಭಿಮಾನಿಗಳು ಮಾತ್ರ, ಸಿಗರೇಟ್​​ಗೆ ಬೆಂಕಿ ಹಚ್ಚಬಹುದು ಎಂದು ಕಮೆಂಟ್ಸ್​ ಮಾಡ್ತಿದ್ದಾರೆ.

ರಾಕೇಶ್ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES