Monday, December 23, 2024

ವಿಕ್ರಾಂತ್​​ ರೋಣ ಮೊದಲ ದಿನ ಗಳಿಸಿದ್ದೆಷ್ಟು..?

ವರ್ಲ್ಡ್​​ ವೈಡ್​​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​​ ಫೀವರ್​ ಜೋರಾಗಿದೆ. ಗುಮ್ಮನ ಅವತಾರ ಕಂಡು ಗಢ ಗಢ ನಡುಗಿರುವ ಪ್ರೇಕ್ಷಕರು ರೋಣನಿಗೆ ಸೈ ಎಂದಿದ್ದಾರೆ. ತೆರೆ ಕಂಡ ಎಲ್ಲಾ ಥಿಯೇಟರ್​ಗಳಲ್ಲೂ ಕಿಚ್ಚನ ಕ್ರೇಜ್​​​​ ಮುಗಿಲು ಮುಟ್ಟಿದೆ. ಫಸ್ಟ್​ ಡೇ ರೋಣನ ಖಾತೆಗೆ ಕೋಟಿ ಕೋಟಿ ಹಣ ಜಮಾ ಆಗಿದೆ. ಫಸ್ಟ್ ಡೇ ಬಾಕ್ಸ್​​ ಆಫೀಸ್​ ಲೆಕ್ಕಾಚಾರಗಳೇನು..? ರೋಣ ಗಳಿಸಿದ್ದೆಷ್ಟು..?

ಕರ್ನಾಟಕದಲ್ಲಿ 20 ಕೋಟಿ ಗಡಿ ದಾಟಿದ ರೋಣ..!

2500 ಪ್ರದರ್ಶನ.. ಎಲ್ಲಾ ಕಡೆ 95% ಹೌಸ್​​ಫುಲ್​​​​

ಟಾಲಿವುಡ್​​​​, ಕಾಲಿವುಡ್​​​​ನಲ್ಲೂ ಕಿಚ್ಚನಿಗೆ ಬಹುಪರಾಕ್​​

ದಿಲ್ಲಿಯಲ್ಲಿ ಕಿಚ್ಚನಿಗೆ ವೀರೇಂದ್ರ ಹೆಗ್ಗಡೆ ಆಶೀರ್ವಾದ..!

ಕನ್ನಡ ಸಿನಿಮಾಗಳ ಗೆಲುವಿನ ನಾಗಾಲೋಟ ಮತ್ತೆ ಮುಂದುವರೆದಿದೆ. ಗುಡ್ಡದ ಭೂತ ಕಂಡು ಬೆಚ್ಚಿ ಬಿದ್ದಿರುವ ಚಿತ್ರಪ್ರೇಮಿಗಳು ಕಿಚ್ಚನನ್ನು ತಲೆ ಮೇಲೆ ಹೊತ್ತು ಮೆರೆದಿದ್ದಾರೆ. ಫಸ್ಟ್​​ ಡೇ ವರ್ಲ್ಡ್​ ವೈಡ್​​ ಗುಡ್​​ ರೆಸ್ಪಾನ್ಸ್​ ಸಿಕ್ಕಿರೋದ್ರಿಂದ, ಕಮರೊಟ್ಟು ಬ್ರಹ್ಮರಾಕ್ಷಸನಿಗೆ ಜೈಕಾರ ಸಿಕ್ಕಿದೆ. ಹೌದು, ಗುಮ್ಮ ಬಂದ, ಗುಮ್ಮ ಬಂದ ಅಂತಾ ಎಲ್ಲರಿಗೂ ಭಯ ಹುಟ್ಟಿಸಿದ್ದ ವಿಕ್ರಾಂತ್​ ರೋಣ ಚಿತ್ರ ಬಾಕ್ಸ್​​ ಆಫೀಸ್​​ನಲ್ಲಿ ಧೂಳೆಬ್ಬಿಸಿದೆ.

ಮೊದಲ ದಿನ ಪ್ರಪಂಚದಾದ್ಯಂತ ಒಂಬತ್ತು ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ತೆರೆ ಕಂಡಿದ್ದ ರೋಣ ಬಹುತೇಕ ಹೌಸ್​​ಫುಲ್​​​ ಪ್ರದರ್ಶನ ಕಂಡಿದೆ. ಕರುನಾಡಿನಲ್ಲಿ 2500 ಕ್ಕೂ ಅಧಿಕ ಪ್ರದರ್ಶನ ಕಂಡು ಅಬ್ಬರಿಸಿ ಬೊಬ್ಬಿರಿದಿರುವ ವಿಕ್ರಾಂತ್​​ ರೋಣ ಕೋಟಿ ಕೋಟಿ ದೋಚಿದೆ. ಕರ್ನಾಟಕದಲ್ಲಿ ಒಟ್ಟಾರೆ ಫಸ್ಟ್​ ಡೇ ಕಲೆಕ್ಷನ್​​ನಲ್ಲಿ 23 ಕೋಟಿಗೂ ಅಧಿಕ ಕಮಾಯಿ ಮಾಡಿದೆ.

ರಾರಾ ರಕ್ಕಮ್ಮ ಗೆಜ್ಜೆ ಸಪ್ಪಳಕ್ಕೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ಕಿಚ್ಚನ ಅಲ್ಟಿಮೇಟ್​ ಆ್ಯಕ್ಟಿಂಗ್​ಗೆ ಫುಲ್​ ಮಾರ್ಕ್ಸ್​​​ ಕೊಟ್ಟಿರುವ ಚಿತ್ರರಸಿಕರು ಕರ್ನಾಟಕ ಹೊರತು ಪಡಿಸಿ ಬೇರೆ ರಾಜ್ಯಗಳಲ್ಲೂ ಗೆಲ್ಲಿಸಿದ್ದಾರೆ. ಗ್ಲೋಬಲ್​ ಸ್ಟಾರ್​ ಕಿಚ್ಚನಿಗೆ ಉತ್ತರ ಭಾರತದಲ್ಲೂ ಗುಡ್​ ರೆಸ್ಪಾನ್ಸ್​ ಸಿಕ್ಕಿದೆ.  50 ದೇಶಗಳಲ್ಲಿ ಘರ್ಜಿಸುತ್ತಿರುವ ರೋಣ ನಿರೀಕ್ಷೆಗೂ ಮೀರಿ ಲಾಭ ಕಂಡಿದೆ

ರಂಗಿತರಂಗ ಮೇಕಿಂಗ್​ ಸ್ಟೈಲ್​ನಲ್ಲೇ ಹೊಸ ಕಥೆ ಹೆಣೆದು ಫ್ಯಾಂಟಸಿ ಜಗತ್ತನ್ನು ಸೃಷ್ಠಿಸಿರುವ ಅನೂಪ್​ ಭಂಡಾರಿ ಕರಾಮತ್ತು, ಮಾಂತ್ರಿಕತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲಾ ಕಡೆ ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿದ್ದು ವಿಶ್ವದಾದ್ಯಂತ ಮೊದಲ ದಿನದ ಗಳಿಕೆ 35 ಕೋಟಿ ಬಾಚಿದೆ ಎಂದು ಕಿಚ್ಚ ಕ್ರಿಯೇಷನ್ಸ್​​ ಟ್ವಿಟ್​​ ಮೂಲಕ ಅಧಿಕೃತವಾಗಿ ತಿಳಿಸಿದೆ.

3ಡಿ ಎಫೆಕ್ಟ್​​​​​ನಲ್ಲಿ ಕಣ್ಣಿಗೆ ರಾಚುವ ಅದ್ಭುತ ದೃಶ್ಯಗಳು ರೋಚಕವಾಗಿ ಮೂಡಿ ಬಂದಿವೆ. ಅನೂಪ್​ ಭಂಡಾರಿ ಆ್ಯಕ್ಷನ್​ ಕಟ್​​ ಪರಮಾದ್ಭುತ. ವಿಲಿಯಮ್​ ಡೇವಿಡ್​ ಕ್ಯಾಮೆರಾ ಕೈಚಳಕ ಬಲುರೋಚಕ. ಕಿಚ್ಚ ಕಂಚಿನ ಕಂಠದಲ್ಲಿ ಸಿನಿಮಾ ಸುಂದರವಾಗಿ ಮೂಡಿ ಬಂದಿದೆ. ಅಜನೀಶ್​ ಲೋಕನಾಥ್​ ಸಂಗೀತದ ಆಲಾಪನೆ ಇನ್ನು ಸೊಗಸಾಗಿದೆ. ಈ ನಡುವೆ ದಿಲ್ಲಿಯಲ್ಲಿ ಎಮ್​ ಪಿ ಗಳಿಗಾಗಿ ಮೀಸಲಾಗಿದ್ದ ವಿಕ್ರಾಂತ್​ ರೋಣ ಶೋನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಮೊದಲ ದಿನದಲ್ಲೇ ಬಾಕ್ಸ್​ ಆಫೀಸ್​ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿರುವ ವಿಕ್ರಾಂತ್​, ವೀಕೆಂಡ್​ಗೆ ಡಬಲ್​​​ ಕಮಾಯಿ ಮಾಡುವ ಸಾಧ್ಯತೆ ಇದೆ. ಎನಿವೇ ಕಿಚ್ಚನ ಸಿನಿಮಾ ಅಬ್ಬರ ಮುಂದುವರೆಯಲಿ ಎಂದು ಆಶಿಸೋಣ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES