Monday, December 23, 2024

ಮಿಗ್​​-21 ಲಘು ವಿಮಾನ ಪತನ : ಇಬ್ಬರು ಪೈಲಟ್​ಗಳು ಸಾವು

ರಾಜಸ್ಥಾನ : ಭಾರತೀಯ ವಾಯುಸೇನೆಯ ಮಿಗ್​​-21 ಲಘು ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಸಾವನ್ನಪ್ಪಿದ್ದಾರೆ.

ರಾಜಸ್ಥಾನದ ಬಾರ್ಮರ್ ಬಳಿ ಭಾರತೀಯ ವಾಯುಸೇನೆಗೆ ಸೇರಿದ ಮಿಗ್​-21 ಜೆಟ್ ವಿಮಾನ ಪತಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಸಾವನ್ನಪ್ಪಿದ್ದಾರೆ. ಈ ಐಎಎಫ್ ವಿಮಾನವು ಬೇಟೂನ ಭೀಮಡಾ ಗ್ರಾಮದ ಬಳಿ ಪತನಗೊಂಡಿದೆ.

ಉತ್ತರಲೈ ವಾಯುನೆಲೆಯಿಂದ ಟೇಕಾಫ್ ಆಗಿದ್ದ ಅವಳಿ ಆಸನದ MiG-21 ತರಬೇತುದಾರ ರಾತ್ರಿ 9.10 ರ ಸುಮಾರಿಗೆ ರಾತ್ರಿ ಹಾರಾಟದ ಸಮಯದಲ್ಲಿ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಯಿತು. ಇಬ್ಬರೂ ಪೈಲಟ್‌ಗಳಿಗೆ ಮಾರಣಾಂತಿಕ ಗಾಯಗಳಾಗಿ ಸಾವನ್ನಪ್ಪಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರೊಂದಿಗೆ ಅಪಘಾತದ ಬಗ್ಗೆ ವಿಚಾರಿಸಿದ್ದು, ಅಪಘಾತದ ಹಿಂದಿನ ನಿಖರವಾದ ಕಾರಣದ ಕುರಿತು ಐಎಎಫ್ ತನಿಖಾ ಕೋರ್ಟ್ ಗೆ ಆದೇಶಿಸಿದ್ದಾರೆ.

RELATED ARTICLES

Related Articles

TRENDING ARTICLES