Monday, December 23, 2024

‘ವಾಟ್​ ಲಗಾ ದೇಂಗೆ’ ಎಂದು ಮತ್ತೆ ಅಬ್ಬರಿಸಿದ ವಿಜಯ್ ದೇವರಕೊಂಡ

ಕ್ರೇಜ್​ ಕಾ ಬಾಪ್​​ ವಿಜಯ್​ ದೇವರಕೊಂಡ ಕ್ರಾಸ್​​ಬ್ರೀಡ್​ ಟೈಗರ್​ ಆಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಇದೀಗ ವಾಟ್​ ಲಗಾ ದೇಂಗೆ ಅಂತಾ ಘರ್ಜನೆ ಮಾಡ್ತಿರೋ ಟೈಗರ್, ಸೋಶಿಯಲ್​​ ಮೀಡಿಯಾದಲ್ಲಿ ಹೈಪ್​ ಕ್ರಿಯೇಟ್​ ಮಾಡ್ತಿದ್ದಾನೆ. ಸದ್ಯ ಲೈಗರ್​​ ಚಿತ್ರದ ವಾಟ್​ ಲಗಾ ಸಾಂಗ್ ಯ್ಯೂಟ್ಯೂಬ್​​​​ ಟ್ರೆಂಡಿಂಗ್​ನಲ್ಲಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಾಟ್​​ ಲಗಾ ದೇಂಗೆ ಸಾಂಗ್​​​.. ಲೈಗರ್​​​​ ಬ್ಯಾಂಗ್​​ ಬ್ಯಾಂಗ್​​​​​..!

ನಾವು ಭಾರತೀಯರು.. ಯಾರಿಗೂ ಜಗ್ಗದ, ಬಗ್ಗದ ಟೈಗರ್ಸ್​​​​​​​

ಶಿವಗಾಮಿ ರಮ್ಯಾ ಲೋಕಲ್​​ ಗಮ್ಮತ್ತಿನಲ್ಲಿ ಲೈಗರ್​ ತಾಕತ್ತು..!

ತೊದಲು ಭಾಷೆಯಲ್ಲೇ ಕ್ರಾಸ್​ಬ್ರೀಡ್​​ ಟೈಗರ್​ ಮೆಗಾ ಪಂಚ್​​

ಅರ್ಜುನ್​ ರೆಡ್ಡಿ ಸಿನಿಮಾ ಮೀರಿಸೋ ಲೆವೆಲ್​​ಗೆ ವಿಜಯ್​ ದೇವರಕೊಂಡ ಸಜ್ಜಾಗಿದ್ದಾರೆ. ಕಟ್ಟು ಮಸ್ತಾದ ಉಕ್ಕಿನ ದೇಹ ತೋರಿಸುತ್ತಾ ಅಭಿಮಾನಿಗಳನ್ನು  ಬೆಚ್ಚಿ ಬೆವರಿಳಿಸಿದ್ದ ವಿಜಯ್​ ಹೊಸ ಕಿಚ್ಚು ಹಚ್ಚಿದ್ದರು. ಇಷ್ಟಲ್ಲದೆ ಲೈಗರ್​ ಚಿತ್ರಕ್ಕಾಗಿ ಬೆತ್ತಲಾಗಿದ್ದಲ್ಲದೇ ಟ್ರೈಲರ್​ ಮೂಲಕ ಟೈಗರ್​ ಘನಘೋರ ಘರ್ಜನೆ ಹೇಗಿರುತ್ತೆ ಅನ್ನೋದನ್ನು ತೋರಿಸಿದ್ದರು. ಇದೀಗ ವಾಟ್​​ ಲಗಾ ಸರದಿ. ಟಾಪ್​ ಟ್ರೆಂಡಿಂಗ್​​ನಲ್ಲಿದೆ ವಾಟ್​ ಲಗಾ ದೇಂಗೆ ಸಾಂಗ್​​.

ವಿ ಆರ್​ ಇಂಡಿಯನ್ಸ್​. ಎದೆಯಲ್ಲಿ ರಕ್ತ ಕುದೀತಿದೆ. ಯುದ್ಧ ಮಾಡೋಕೆ ಕ್ರಾಸ್​ ಬ್ರೀಡ್​​ ಟೈಗರ್​​​ ಕಾಲ್ಕೆರೆದು ನಿಂತಿದೆ. ವಾಟ್​ ಲಗಾ ದೇಂಗೆ ಅಂತಾ ವಿಜಯ್​ ದೇವರಕೊಂಡ ಅಬ್ಬರಿಸ್ತಿದ್ದಾರೆ. ಈ ಹಾಡಲ್ಲಿ ಅರ್ಜುನ್​​ ರೆಡ್ಡಿ ಮುಖದಲ್ಲಿ ಬೆಂಕಿಯ ಕಿಚ್ಚು ಕೆಂಡಕಾರುತ್ತಿದೆ. ಕೋಪ, ತಾಪದಲ್ಲಿ ಬೆಂದಿರೋ ಹೆಬ್ಬುಲಿ ಎದುರಾಳಿಗಳ ಎದೆಸೀಳಿ ರಕ್ತ ಕುಡಿಯೋಕೆ ಪರಿತಪಿಸುತ್ತಿದೆ.

ಈಗಾಗ್ಲೇ ಸಿನಿಮಾದ ಟ್ರೈಲರ್​​ ಎಲ್ಲರನ್ನು ಮೂಖವಿಸ್ಮಿತಗೊಳಿಸಿದೆ. ಶಿವಗಾಮಿಯ ಪಂಚಿಂಗ್​ ಡೈಲಾಗ್​​​ ರಕ್ತ ಕುದಿಯುವಂತೆ ಮಾಡುತ್ತದೆ. ಲೈಗರ್​ ಮೈಕೊಡವಿ ಬರೋ ಸಿಂಹದಂತೆ ಕಂಡರೆ, ಎದುರಾಳಿ ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​​ ಟೆರರ್​​ ಆಗಿ ಕಾಣುತ್ತಾರೆ. ಇವರಿಬ್ರ ಕಾಂಬಿನೇಷನ್​​​, ಜಟಾಪಟಿ ನೋಡೋಕೆ ಚಿತ್ರಪ್ರೇಮಿಗಳು ಉತ್ಸುಕರಾಗಿದ್ದಾರೆ.

ಒಂದು ಕಡೆ ಲೈಗರ್​, ಐ ಯಾಮ್​ ಫೈಟರ್​ ಅಂತಾ ಮೈ ಕೊಡವಿ ಬರೋ ಸಿಂಹನಂತೆ ಘರ್ಜನೆ  ಮಾಡ್ತಿದ್ರೆ, ನೀನು ಫೈಟರ್​ ಆದ್ರೇ, ನಾನು ಏನು ಅಂತಾ ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಸವಾಲಾಕುತ್ತಾರೆ. ಒಟ್ನಲ್ಲಿ ವಿಶ್ವ ಕಂಡ ಶ್ರೇಷ್ಠ ದಿಗ್ಗಜ ಮೈಕ್​​ ಟೈಸನ್​​ ಜೊತೆ ನಡೆಯೋ ಯುದ್ಧ ಭರ್ಜರಿಯಾಗಿರಲಿದೆ. ಹಸಿದ ಹೆಬ್ಬುಲಿಗಳ ಹೋರಾಟ ಭಯಂಕರವಾಗಿರಲಿದೆ. ಹಾಲಿವುಡ್​​​ ರೇಂಜ್​​​ ಮೀರಿಸೋ ಲೈಗರ್​ ಟ್ರೈಲರ್​​ಗೆ ಚಿತ್ರರಸಿಕರು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಸಿನಿಮಾದ ಕಥೆ ಬರೆದು ನಿರ್ದೇಶನ ಮಾಡ್ತಿರೋ ಪೂರಿ ಜಗನ್ನಾಥ್​​​​​​ ಅವರ ಡ್ರೀಮ್​​ ಪ್ರಾಜೆಕ್ಟ್​ ಇದು. ಈ ಚಿತ್ರಕ್ಕೆ ಕರಣ್​ ಜೋಹರ್​​, ಚಾರ್ಮಿ ಕೌರ್​​, ಅಪೂರ್ವ ಮೆಹ್ತಾ, ಸೇರಿದಂತೆ ಪೂರಿ ಜಗನ್ನಾಥ್​ ಕೂಡ ಬಂಡವಾಳ ಹೂಡಿದ್ದಾರೆ. ವಿಷ್ಣು ಶರ್ಮಾ ಕ್ಯಾಮೆರಾ ಕೈಚಳಕ ಟ್ರೈಲರ್​ ಪೂರ್ತಿ ಜಗಮಗಿಸುತ್ತೆ. ಅಂತೂ ಕ್ರಾಸ್​ ಬ್ರೀಡ್​ ಕರಾಮತ್ತು ಸಿಲ್ವರ್​​ ಸ್ಕ್ರೀನ್​ ಮೇಲೆ ಹೇಗಿರುತ್ತೋ ಅನ್ನೋ ಕುತೂಹಲ ಬೆಟ್ಟದಷ್ಟಿದೆ. ಸದ್ಯ ರಿಲೀಸ್ ಆಗಿರೋ ವಾಟ್​ ಲಗಾ ದೇಂಗೆ ಸಾಂಗ್​​, ಈ ಕ್ರೇಜ್​​​​​ನಾ ಹತ್ತು ಪಟ್ಟು ಜಾಸ್ತಿ ಮಾಡಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES