Monday, December 23, 2024

50 ದಿನದಲ್ಲಿ ಚಾರ್ಲಿ ಗಳಿಸಿದ್ದೆಷ್ಟು..? ರಕ್ಷಿತ್​​ ಶೆಟ್ಟಿ ಓಪನ್​ ಟಾಕ್​​​​

ಕೆಜಿಎಫ್​ ನಂತ್ರ ಕನ್ನಡದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ 777ಚಾರ್ಲಿ. ಎಲ್ಲರ ಕಣ್ಣಾಲಿಗಳನ್ನು ತೇವ ಮಾಡಿದ್ದ ಚಾರ್ಲಿ ಅಂಡ್​ ಧರ್ಮ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಮಿಂಚಿದ್ದರು. ಇದೀಗ ಚಾರ್ಲಿಗೆ 50ದಿನದ ಸಂಭ್ರಮ. ಈ ಗುಡ್​ ನ್ಯುಸ್​ ಜತೆ ಮತ್ತೊಂದು ಸರ್ಪ್ರೈಸಿಂಗ್​ ಅಂದ್ರೆ, ಚಾರ್ಲಿ ನಿಮ್ಮ ಮನೆಗೂ ಬರಲಿದ್ದಾನೆ. ಚಾರ್ಲಿಯನ್ನು ಹತ್ತಿರದಿಂದ ಮುದ್ದಾಡಬಹುದು. ಅವನ ತುಂಟಾಟವನ್ನು ಕಣ್ತುಂಬಿಕೊಳ್ಳಬಹುದು. ಅದೇಗೆ ಅಂತೀರಾ..?

ಮನೆಯಲ್ಲಿ ಚಾರ್ಲಿಯನ್ನು ಮುದ್ದಾಡೋ ಬಂಪರ್​ ಆಫರ್​​​

777ಚಾರ್ಲಿ ತಂಡಕ್ಕೆ ಡಬಲ್​​​ ಖುಷಿ, ಡಬಲ್​ ಸಂಭ್ರಮ..!

ಯ್ಯೂಟ್ಯೂಬ್​​ನಲ್ಲಿ ಸದ್ದು ಮಾಡ್ತಿವೆ ಚಾರ್ಲಿ ಡಿಲೀಟೆಡ್​ ಸೀನ್ಸ್​​

50 ದಿನದಲ್ಲಿ ಚಾರ್ಲಿ ಗಳಿಸಿದ್ದೆಷ್ಟು..? ರಕ್ಷಿತ್​​ ಶೆಟ್ಟಿ ಓಪನ್​ ಟಾಕ್​​​​

ಚಾರ್ಲಿ, ಈ ಹೆಸ್ರು ಯಾರಿಗೆ ತಾನೆ ಗೊತ್ತಿಲ್ಲ. ಸೂಪರ್​ ಸ್ಟಾರ್​ ನಟರಿಗಿಂತ ಫುಲ್​ ಫೇಮಸ್. ಯೆಸ್​​.. 777ಚಾರ್ಲಿ ಚಿತ್ರದಲ್ಲಿ ನಟಿಸಿರುವ ಶ್ವಾನದ ಹೆಸ್ರು ಚಾರ್ಲಿ. ನಾಯಕ ರಕ್ಷಿತ್​ ಶೆಟ್ಟಿಗಿಂತ ಡಬಲ್​​ ಖ್ಯಾತಿ ಗಳಿಸಿದ್ದಾಳೆ ಚಾರ್ಲಿ. ಈ ಸಿನಿಮಾ ಬಂದ ನಂತ್ರ ಎಲ್ಲರೂ ತಮ್ಮ ನಾಯಿಗಳಿಗೆ ಚಾರ್ಲಿ ಅಂತಾನೆ ಹೆಸರಿಟ್ಟಿದ್ದಾರೆ. ಆ ಲೆವೆಲ್​​ಗೆ ಈ ಸಿನಿಮಾವನ್ನು ಎಲ್ಲರೂ ಹಚ್ಚಿಕೊಂಡಿದ್ದಾರೆ.

ಕಿರಣ್​ ರಾಜ್​ ಅವ್ರ ನಿರ್ದೇಶನದಲ್ಲಿ ಪ್ಯಾನ್​ ಇಂಡಿಯಾ ಲೆವೆಲ್​​​ನಲ್ಲಿ ಅಬ್ಬರಿಸಿದ ಚಾರ್ಲಿ ಇಂದಿಗೆ ಅರ್ಧಶತಕ ಪೂರೈಸಿದೆ. ಹಾಕಿದ ಬಂಡವಾಳಕ್ಕಿಂತ ಹತ್ತು ಪಟ್ಟು ಲಾಭ ಗಳಿಸಿದ ಚಾರ್ಲಿ ಸಿನಿಮಾ ಹೊಸ ದಾಖಲೆ ಬರೆದಿದೆ. ಇದೀಗ 777ಚಾರ್ಲಿ ನೇರವಾಗಿ ಓಟಿಟಿ ಯಲ್ಲಿ ರಿಲೀಸ್ ಆಗ್ತಿದೆ. ಇನ್ಮುಂದೆ ಮೆನಯಲ್ಲೇ ಕೂತು ಚಾರ್ಲಿಯನ್ನು ಮುದ್ದಾಡೋ ಅವಕಾಶ ಸಿಕ್ಕಿದೆ. ಅವನ ತುಂಟಾಟ ತರಲೆಯನ್ನು ಮೊಬೈಲ್​​ನಲ್ಲೇ ನೋಡಿ ಆನಂದಿಸಬಹುದು. ಥಿಯೇಟರ್​​ನಲ್ಲಿ ಮಿಸ್​ ಮಾಡಿಕೊಂಡವ್ರು ಮೊಬೈಲ್​​ನಲ್ಲಿ ಮತ್ತೆ ಮತ್ತೆ ನೋಡಬಹುದು.

ಚಾರ್ಲಿ ಸಿನಿಮಾ ರಿಲೀಸ್​ ಆಗುವ ಮುನ್ನವೇ ಪ್ರೀಮಿಯರ್​ ಶೋಗಳಲ್ಲಿ ನಿರೀಕ್ಷೆಗೂ ಮೀರಿ ಅಧಿಕ ಲಾಭ ಗಳಿಸಿತ್ತು. ಚಾರ್ಲಿ ಅಪ್ಪಿ, ಒಪ್ಪಿ, ಮುದ್ದಾಡಿದ್ದ ಪ್ರೇಕ್ಷಕರಿಗೆ ಮಸ್ತ್​ ಮನರಂಜನೆ ಸಿಕ್ಕಿತ್ತು. ಇದೀಗ ನೇರವಾಗಿ ಓಟಿಟಿಯಲ್ಲಿ ಪ್ರಸಾರವಾಗ್ತಾ ಇರೋದ್ರಿಂದ ಚಾರ್ಲಿ ಟೀಮ್​​ ಖುಷಿಯಲ್ಲಿದೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ಲೆಕ್ಕಾಚಾರದಲ್ಲಿ ಚಾರ್ಲಿ 150 ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಈ ಕುರಿತು ರಕ್ಷಿತ್​​ ಶೆಟ್ಟಿ ಪವರ್​ ಟಿವಿ ಜತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಚಾರ್ಲಿ ಕೇವಲ ಸಿನಿಮಾದಿಂದ ಕ್ರೇಜ್​​ ಹುಟ್ಟಿಸ್ತಾ ಇಲ್ಲ. ಸಿನಿಮಾದ ಕೆಲವು ಡಿಲೀಟ್​ ಆಗಿದ್ದ ವೀಡಿಯೋ ತುಣುಕುಗಳನ್ನು ಸಖತ್​ ಹೈಪ್​ ಕ್ರಿಯೇಟ್​ ಮಾಡ್ತಿವೆ. ಚಿತ್ರತಂಡ ಡಿಲೀಟೆಡ್​ ಸೀನ್ಸ್​ಗಳನ್ನು ಶೇರ್​ ಮಾಡಿಕೊಳ್ತಾ ಇದ್ದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿವೆ. ಫ್ಯಾಕ್ಟರಿಯ ಮತ್ತೊಂದು ಡಿಲೀಟೆಡ್​​​ ಸೀನ್​​ ರಿಲೀಸ್​ ಆಗಿದ್ದು ಸಖತ್​ ಸೌಂಡ್​ ಮಾಡ್ತಿದೆ.

ನಟ ರಕ್ಷಿತ್​ ಶೆಟ್ಟಿ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದ್ರ ಜತೆಯಲ್ಲಿ ಉಳಿದವರು ಕಂಡಂತೆ ಸಿನಿಮಾದ ಮುಂದುವರೆದ ಭಾಗವಾಗಿ ರಿಚರ್ಡ್​ ಆಂಥೋನಿ ಕೂಡ ತಯಾರಿಯಲ್ಲಿದೆ. ಹೊಂಬಾಳೆ ಬ್ಯಾನರ್​ನಲ್ಲಿ ಮೂಡಿ ಬರ್ತಾ ಇರೋ ರಿಚರ್ಡ್​ ಆಂಥೋನಿ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಸಕ್ಸಸ್​​​ ಮೂಡ್​​ನಲ್ಲಿರೋ ರಕ್ಷಿತ್​​ ಶೆಟ್ಟಿ ಸದ್ಯ ಚಾರ್ಲಿ ಚಿತ್ರದ 50 ದಿನದ ಸಂಭ್ರಮದ ಖುಷಿಯಲ್ಲಿದ್ದಾರೆ. ಎನಿವೇ ರಕ್ಷಿತ್​ ಮುಂದಿನ ಸಿನಿಮಾಗಳಿಗೂ ಆಲ್​ ದಿ ಬೆಸ್ಟ್​  ಹೇಳೋಣ.

ರಾಕೇಶ್ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES