Monday, December 23, 2024

ಕ್ಯಾರೆಕ್ಟರ್​​ ಟೀಸರ್​​​​ ಮೂಲಕ ಭಟ್ರ ಟೀಮ್​ ಹೈಪ್​ ಕ್ರಿಯೇಟ್​​

ಭಟ್ರ ತಲೆಯಲ್ಲಿ ಮೂಡಿ ಬರ್ತಿರೋ ವಿಚಿತ್ರ ಚಿತ್ರಪಟ ಗಾಳಿಪಟ 2. ಅವರ ಲೇಖನಿಯ ಸಾಲು ಹಾಗೂ ಸಂಭಾಷಣೆಗಳು ನಕ್ಕು ನಕ್ಕು  ಹೊಟ್ಟೆ ಹುಣ್ಣಾಗುವಂತೆ ಮಾಡುತ್ತವೆ.  ಎಣ್ಣೆ ಸಾಂಗ್​​ ದ್ಯಾವ್ಲೇ ದ್ಯಾವ್ಲೇ ಎಂದು ಮಾತು ತೊದಲಿಸಿದ್ದ ಗಾಳಿಪಟ ಟೀಮ್​​​​​​ ಒಂದಿಲ್ಲೊಂದು ಹೊಸತನಗಳ ಮೂಲಕ ಸದ್ದು ಮಾಡ್ತಿದೆ. ಇದೀಗ ಗಣಿ ಕನ್ನಡ್​​ ಗೊತ್ತಿಲ್ಲ ಅಂತಿದ್ರೆ, ದಿಗ್ಗಿ ಪ್ಯಾಂಟ್​ ಇಲ್ಲದೆ ನಿಂತಿದ್ದಾರೆ.

ಭಟ್ರ ಗಾಳಿಪಟ.. ಗಣಿ ಕನ್ನಡ್​​ ಗೊತ್ತಿಲ್ಲ..ದಿಗ್ಗಿ ಪ್ಯಾಂಟ್​ ಇಲ್ಲ

ಕ್ಯಾರೆಕ್ಟರ್​​ ಟೀಸರ್​​​​ ಮೂಲಕ ಭಟ್ರ ಟೀಮ್​ ಹೈಪ್​ ಕ್ರಿಯೇಟ್​​

ನೀನು ಬಗೆಹರಿಯದ ಹಾಡಲ್ಲಿ ಈಜಿದ ಗ್ಲಾಮರಸ್​ ಶರ್ಮಿಳಾ

ಜಯಂತ್​ ಕಾಯ್ಕಿಣಿ, ಭಟ್ರ ಸಾಹಿತ್ಯದಲ್ಲಿ ಗಾಳಿಪಟ 2 ಮಿಂಚು

ಯೋಗರಾಜ್​​ ಭಟ್ರು ಸರ್ವ ಕಾಲಕ್ಕೂ ಸ್ಯೂಟ್​ ಆಗೋ ಕಥೆ ಹೇಳೋದ್ರಲ್ಲಿ ಸಿದ್ಧ ಹಸ್ತರು. ಇದೀಗ ಗಾಳಿಪಟ ಚಿತ್ರದ ಸೀಕ್ವೆಲ್​ ಎಳೆಯನ್ನು ಇಟ್ಕೊಂಡು ಮತ್ತೊಂದು ವಿಭಿನ್ನ ಕಥೆ ಹೇಳೋಕೆ ಹೊರಟಿದ್ದಾರೆ. ಗಾಳಿಪಟ ಚಿತ್ರ ಬರೆದ ದಾಖಲೆಯನ್ನು ಮುರಿಯೋದು ಕಷ್ಠವಾದ್ರೂ ಅದ್ರ ಸಾಲಿಗೆ ನಿಲ್ಲೋ ಮಟ್ಟಕ್ಕೆ ಭಟ್ರು ಕಥೆ ರೆಡಿ ಮಾಡಿಕೊಂಡಿದ್ದಾರೆ. ಈಗಾಗ್ಲೇ ಗಾಳಿಪಟ 2 ಸಿನಿಮಾ ಪ್ರತಿ ಹೆಜ್ಜೆಯಲ್ಲೂ ಹೈಪ್​ ಕ್ರಿಯೇಟ್ ಮಾಡ್ತಾ ಬಂದಿದೆ.

ಹಳೆ ಟೀಮ್​​ನ್ನೆ ಉಳಿಸಿಕೊಂಡಿರುವ ಭಟ್ರು, ಸಿಂಗರ್​ ರಾಜೇಶ್​ ಹೊರತಾಗಿ ಪವನ್​​ಗೆ ಜಾಗ ಕಲ್ಪಿಸಿದ್ದಾರೆ. ಸಿನಿಮಾದ ಎಕ್ಸಾಮ್​ ಸಾಂಗ್​ ಆರಂಭದಲ್ಲೇ ಸಿನಿಮಾದ ಮೇಳಿನ ನಿರೀಕ್ಷೆಯನ್ನು ಡಬಲ್​ ಮಾಡಿದೆ. ಇತ್ತೀಚೆಗೆ ಕಜಕಿಸ್ತಾನದಲ್ಲಿ ದ್ಯಾವ್ಲೇ ದ್ಯಾವ್ಲೇ ಅಂತಾ ಬಾಯಿ ತೊದಲಿಸಿದ್ದ ಗಣಿ ಅಂಡ್​ ಟೀಮ್​​ ಕುಡುಕರ ನಾಡಗೀತೆಯಾಗಿ ಸದ್ದು ಮಾಡಿತ್ತು. ಇದೀಗ ಭಟ್ರ ಗರಡಿಯಲ್ಲಿನ ಒಂದೊಂದೆ ಪಾತ್ರಗಳ ಪರಿಚಯವಾಗ್ತಿದ್ದು, ಕ್ಯಾರೆಕ್ಟರ್​​ ಟೀಸರ್​ ರಿಲೀಸ್ ಆಗಿದೆ. ಗಣಿ ಬಾಯಲ್ಲಿ ಕನ್ನಡ್​​​ ಗೊತ್ತಿಲ್ಲವಾಗಿದೆ. ಇನ್ನು ಎಮೋಷನ್​​​​​ ಸೀನ್ಸ್​ನಲ್ಲಿ ಗಣಿಯ ಕ್ಯಾರೆಕ್ಟರ್​​​​ ಇಂಪ್ರೆಸ್ಸಿವ್​ ಆಗಿದೆ.

ಇನ್ನೂ ಗಾಳಿಪಟ ಒಂದರಲ್ಲಿ ದಿಗಂತ್​ ಹಾಗೂ ನೀರು ಜೋಡಿಯ ಮೋಡಿ ಇದ್ರಲ್ಲೂ ಕ್ಯಾರಿಯಾಗಿದೆ. ಆದ್ರೆ ಇಲ್ಲಿ ನೀತು ಮಿಸ್​ ಆಗಿದ್ದಾರೆ. ಇಡೀ ಹಿಮಾಲಯದಲ್ಲಿ ಬೆತ್ತಲೆ ಸುತ್ತಾಡ್ತಾ ಇರೋ ಸನ್ಯಾಸಿಯಾಗಿ ದಿಗಂತ್​​ ಕಾಣಿಸಿದ್ದಾರೆ. ದೂಧ್​ ಪೇಡಾ ದಿಗಂತ್​ಗೆ ಪ್ಯಾಂಟ್​ ಯಾಕೋ ನಿಲ್ತಿಲ್ಲ ಅನ್ನಿಸ್ತಿದೆ. ಪ್ರೀತಿ, ದ್ವೇಷ, ಚಡ್ಡಿ, ಚಳಿಯ ನಡುವೆ ಸಿಕ್ಕು ದಿಗಿ ಫುಲ್​ ದಿಗಿಲಾಗಿದ್ದಾರೆ.

ನೀನು ಬಗೆಹರಿಯದ ಹಾಡು. ನೋಡು ಹದಿಹರೆಯದ ಪಾಡು ಅಂತಾ ಪವನ್​ ಹಾಗೂ ಶರ್ಮಿಳಾ ನೀರಲ್ಲಿ ಮುಳುಗಿ ರೊಮ್ಯಾನ್ಸ್​ ಮಾಡಿರೋ ಹಾಡು ಕೂಡ ಸಖತ್​ ಸೌಂಡ್​ ಮಾಡ್ತಿದೆ. ಕಾಯ್ಕಿಣಿ ರೊಮ್ಯಾಂಟಿಕ್​ ಸಾಹಿತ್ಯ ಪ್ರೇಮಸಾಗರದಲ್ಲಿ ಎಲ್ಲರನ್ನು ತೇಲಿಸಿದೆ. ನಿಹಾಲ್​​ ಹಿನ್ನೆಲೆ ಗಾಯನದಲ್ಲಿ ಈ ಹಾಡು ರಿಪೀಟ್​ ಮೋಡ್​ನಲ್ಲಿ ಕೇಳಬೇಕು ಅನ್ನಿಸುತ್ತೆ. ಅರ್ಜುನ್​ ಜನ್ಯಾ ಮ್ಯೂಸಿಕ್​​ ಕಿಕ್ಕು ಕೊಡುತ್ತದೆ.

ಗೋಲ್ಡನ್​ ಸ್ಟಾರ್​ ಗಣೇಶ್​​, ದಿಗಂತ್​​​, ಪವನ್​ ಕುಮಾರ್​​, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಅನಂತ್​ ನಾಗ್​​ ಸೇರಿದಂತೆ ಘಟಾನುಘಟಿಗಳ ಸಾರಥ್ಯದಲ್ಲಿ ಗಾಳಿಪಟ ಆಗಸ್ಟ್​​ 12ಕ್ಕೆ ಮುಗಿಲೆತ್ತರಕ್ಕೆ ಹಾರಲಿದೆ. ಇದ್ರ ಜತೆಯಲ್ಲಿ ನಟ ಪವನ್​​ಕುಮಾರ್​​ ಕ್ಯಾರೆಕ್ಟರ್​ ಟೀಸರ್​ ಕೂಡ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಟಟ್ಟು ಮಾಡಿದೆ.

ಸೂರಜ್​ ಪ್ರೊಡಕ್ಷನ್​ ಅಡಿಯಲ್ಲಿ ಉಮಾ ಎಮ್​ ರಮೇಶ್​ ರೆಡ್ಡಿ ನಿರ್ಮಾಣದಲ್ಲಿ ಸಿನಿಮಾ ಅಧ್ಧೂರಿಯಾಗಿ ಮೂಡಿ ಬಂದಿದೆಯಂತೆ. ಸಂತೋಷ್​ ರೈ ಪತಾಜೆ ಕ್ಯಾಮೆರಾ ಕಣ್ಣಲ್ಲಿ ಪ್ರತಿ ಫ್ರೇಮು ಕೂಡ ಹೊಸ ಫೀಲ್​ ಕೊಡಲಿದೆಯಂತೆ. ಎನಿವೇ ಭಟ್ರ ಕ್ಯಾರೆಕ್ಟರ್​ ಟೀಸರ್​​​​ ಸಿನಿಮಾ ಮೇಲಿನ ಕುತೂಹಲವನ್ನು ಡಬಲ್​ ಮಾಡಿರೋದಂತೂ ಸತ್ಯ. ಗಾಳಿಪಟ ಸಕ್ಸಸ್​​ ಮತ್ತೆ ರಿಪೀಟ್​ ಆಗುತ್ತಾ ಕಾದು ನೋಡ್ಬೇಕು.

ರಾಕೇಶ್​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವ

RELATED ARTICLES

Related Articles

TRENDING ARTICLES