Thursday, January 23, 2025

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ: ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುತ್ತಿದ್ದ ನಡೆಯುತ್ತಿದ್ದ ಗಲಾಟೆಯ ದೃಶ್ಯಗಳನ್ನು ಸೆರೆ ಹಿಡಿಯಲು ಮುಂದಾದ ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಹಲ್ಲೆಗೆ ಯತ್ನಿಸಿದ ಆರೋಪ ಎದುರಾಗಿದೆ.

ಕೋಲಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಸಭೆಯು ನಡೆಯುತ್ತಿತ್ರು. ಈ ಸಂದರ್ಭದಲ್ಲಿ ಮಾಜಿ ಸಂಸದ ಕೆಎಚ್.ಮುನಿಯಪ್ಪ ಹಾಗೂ ರಮೇಶ್ ಕು‌ಮಾರ್ ಬೆಂಬಲಿಗರ ಮಧ್ಯೆ ಕೈ-ಕೈ ಮಿಲಾಯಿಸುವ ಹಂತ ತಲುಪಿತು. ಈ ದೃಶ್ಯಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದ್ದ ಪತ್ರಕರ್ತರ ವಿರುದ್ದ ಸಿಟ್ಟಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇಬ್ಬರು ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾದರು ಎಂದು ಆಪಾದಿಸಲಾಗಿದೆ.

ಕಾರ್ಯಕ್ರಮದ ಬ್ಯಾನರ್ ನಲ್ಲಿ ಮಾಜಿ ಸಂಸದ ಕೆಎಚ್.ಮುನಿಯಪ್ಪ ಅವರ ಫೋಟೋ ಇಲ್ಲದಿದಕ್ಕೆ ಪರಸ್ಪರ ಗಲಾಟೆ ಶುರುವಾಗಿತ್ತು. ಈ ಗಲಾಟೆಯ ದೃಶ್ಯವನ್ನು ಪತ್ರಕರ್ತರು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದಾಗ ರಮೇಶ್ ಕುಮಾರ್ ಕೋಪಗೊಂಡು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಬಳಿಕ ರಮೇಶ್ ಕುಮಾರ್ ಸಭೆಯಿಂದ ದಿಢೀರನೆ ಹೊರ ನಡೆದಿದ್ದಾರೆ. ಹಿರಿಯ ನಾಯಕ ರಮೇಶ್ ಕುಮಾರ್ ಅವರ ಈ ನಡೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪರವಾಗಿ ಎಂಎಲ್ಸಿ ಅನಿಲ್ ಕುಮಾರ್, ಶಾಸಕ ಕೆವೈ ನಂಜೇಗೌಡ ರಾಜಿ ಹಾಗೂ ಕ್ಷಮಾಪಣೆಯನ್ನ ಪತ್ರಕರ್ತರು ನಿರಾಕರಿಸಿದರು.

RELATED ARTICLES

Related Articles

TRENDING ARTICLES