Sunday, December 22, 2024

ಭ್ರಷ್ಟಾಚಾರ ಡಿಕೆಶಿ‌ ಸಂಸ್ಕೃತಿ: ಸಚಿವ ಅಶ್ವಥ್​​ ನಾರಾಯಣ್

ರಾಮನಗರ: ಮಂಗಳೂರಿನಲ್ಲಿ ಅಮಾಯಕರ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಎನ್‌ಕೌಂಟರ್ ಸೇರಿದಂತೆ ಯಾವುದೇ ಕಠಿಣ ಕ್ರಮಕ್ಕೆ ಸರ್ಕಾರ ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್​​ ನಾರಾಯಣ್​​ ಹೇಳಿದರು.

ನಗರದಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೂ ಕೊಲೆ ಗಡುಕರು, ದುಷ್ಕರ್ಮಿಗಳನ್ನು ರಕ್ಷಿಸುವ ಪ್ರಶ್ನೆ ಇಲ್ಲ. ಈಗಾಗಲೇ ತನಿಖೆಗೆ ತಂಡಗಳನ್ನು ರಚಿಸಲಾಗಿದೆ. ಅಮಾಯಕರ ಜೀವ ರಕ್ಷಣೆ ನಮ್ಮ ಮೊದಲ ಕರ್ತವ್ಯ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಕಾರ್ಯಕರ್ತರ ಆಕ್ರೋಶ ಈ ಸಂದರ್ಭದಲ್ಲಿ ಸಹಜ. ಆದರೆ, ಈಗಾಗಲೇ ಈ ಹತ್ಯೆಗೆ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಸರ್ಕಾರ ಹಾಗೂ ಗೃಹ ಸಚಿವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಯು.ಪಿ. ಮಾದರಿ ಅಲ್ಲ, ಅದಕ್ಕಿಂತ ಐದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಳ್ಳುತ್ತೇವೆ. ಅದರಲ್ಲೂ ಯಾವುದೇ ಮುಲಾಜು ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನನ್ನನ್ನು ಮತ್ತೆ ಇ.ಡಿ. ಬಲೆಗೆ ಸಿಲುಕಿಸಲಾಗುತ್ತಿದೆ’ ಎಂದು ಡಿ.ಕೆ. ಶಿವಕುಮಾರ್ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿ ‘ ಅವರ ಖೆಡ್ಡಾ ಅವರೇ ತೋಡಿಕೊಂಡಿದ್ದಾರೆ. ನಾವೇನು‌ ಮಾಡುವ ಅಗತ್ಯ ಇಲ್ಲ’ ಹಾಗೂ ಭ್ರಷ್ಟಾಚಾರ ಡಿಕೆಶಿ‌ ಸಂಸ್ಕೃತಿ. ಕನಕಪುರದಲ್ಲಿ ಖಂಡಿತ ಅದನ್ನು ಕ್ಲೀನ್ ಮಾಡುತ್ತೇವೆ. ಈ ಬಗ್ಗೆ ಅನುಮಾನ ಬೇಡ ಎಂದರು.

RELATED ARTICLES

Related Articles

TRENDING ARTICLES