ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ರಾಜ್ಯದ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಹೀಗಾಗಿ ಪ್ರಕರಣವನ್ನು ರಾಜ್ಯ ಸರ್ಕಾರ NIA ತನಿಖೆಗೆ ವಹಿಸಿದೆ. ಹತ್ಯೆ ಖಂಡಿಸಿ ಬಿಜೆಪಿ ವಿರುದ್ಧ ಸಮರ ಸಾರಿದ್ದ ತಮ್ಮದೇ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಸರ್ಕಾರ ಮಣಿದಿದ್ದು, ಅಂತಾರಾಜ್ಯ ಲಿಂಕ್ ಇದೆ ಎಂದು NIAಗೆ ತನಿಖೆಗೆ ನೀಡುವ ಮೂಲಕ ಕಾರ್ಯಕರ್ತರ ಭಾವನೆಗೆ ಸರ್ಕಾರ ಮಣೆ ಹಾಕಿದೆ
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲು ನಿರ್ಧಾರ ಮಾಡಿದೆ.ಪ್ರವೀಣ್ ಹತ್ಯೆ ಕೇಸ್‌ನಲ್ಲಿ ಅಂತಾರಾಜ್ಯದ ನಂಟು ಹೊಂದಿರುವ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ.
ಕೇರಳ ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಣೆ :
ಪ್ರವೀಣ್ ಹತ್ಯೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ರೊಚ್ಚಿಗೆದ್ದಿದ್ದರು. ತನಿಖೆ ನಡೆಸುತ್ತಿದ್ದ ರಾಜ್ಯ ಪೊಲೀಸರಿಗೆ ಪ್ರಕರಣ ಜಟಿಲವಾಗುತ್ತಾ ಹೋಗಿತ್ತು. ಯಾಕಂದ್ರೆ, ಕೇರಳದ ಮೂಲದ ವ್ಯಕ್ಯಿಗಳು ಸಂಘಟಿತವಾಗಿ ಅಪರಾದ ಎಸಗಿರೋದಕ್ಕೆ ತನಿಖೆ ವೇಳೆ ಕುರುಹು ಪತ್ತೆಯಾಗಿತ್ತು.ಹೀಗಾಗಿ ಡಿಜಿ ಐಜಿ ಪ್ರವೀಣ್ ಸೂದ್, ಗುಪ್ತಚರ ಇಲಾಖೆಯ ಎಡಿಜಿಪಿ ಬಿ.ದಯಾನಂದ ಜೊತೆ ಶಕ್ತಿ ಭವನದಲ್ಲಿ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, NIAಗೆ ವಹಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ದಕ್ಷಿಣಕನ್ನಡ ಮತ್ತು ಕೇರಳ ಗಡಿ ಭಾಗದಲ್ಲಿ ಸುಮಾರು 55 ಕಡೆ ಗಡಿ ಹಚ್ಚಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಗಡಿ ಹಳ್ಳಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಜತೆಗೆ ಪೊಲೀಸ್ ಚೆಕ್ ಪೋಸ್ಟ್ ಹಾಕುವುದು, ಪರಿಸ್ಥಿತಿ ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಮೀಸಲು ಪಡೆಯ ಬೆಟಾಲಿಯನ್ ನಿಯೋಜಿಸುವುದರ ಜೊತೆಗೆ ಈ ಭಾಗದಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸೂಚಿಸಿರುವ ಸಿಎಂ, ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ರು.
ಹಾಗಾದ್ರೆ ಹೇಗಿರುತ್ತೆ ನ್ಯಾಷನಲ್ ಇನ್‌ವೆಸ್ಟೀಗೇಷನ್ ಏಜೆನ್ಸಿಯ ತನಿಖೆ ಎಂಬುದನ್ನು ನೋಡೋದಾದ್ರೆ.
ಹೇಗಿರುತ್ತೆ NIA ತನಿಖೆ..?
1. NIA ಸಂಸ್ಥೆಗೆ ಯಾವುದೇ ಬೌಂಡರಿ ಇರುವುದಿಲ್ಲ
2. ಅವರು ಯಾರನ್ನು ಬೇಕಾದರೂ ಕೂಡ ಪ್ರಶ್ನೆ ಮಾಡಬಹುದು
3. NIA ತನಿಖೆಯಲ್ಲಿ ಯಾರು ಕೂಡ ಹಸ್ತಕ್ಷೇಪ ಮಾಡುವುಂತಿಲ್ಲ
4. ರಾಜಕಾರಣಿಗಳು ಕೂಡ NIA ಅಧಿಕಾರಿಗಳು ಹೇಳಿದಂತೆ ಕೇಳಬೇಕು
5. NIA ಟೆಕ್ನಿಕಲಿ ಹಾಗೂ ಲೀಗಲಿ ಸ್ಟ್ರಾಂಗ್ ಇರುವಂತಹ ಸಂಸ್ಥೆ
6. ಪೊಲೀಸ್ ಇಲಾಖೆ ನೀಡಿದಂತೆಯೇ ಇಲ್ಲಿ ಕೂಡ ಅಧಿಕಾರಿಗಳು ಇರ್ತಾರೆ
7. ಇನ್‌ಪೆಕ್ಟರ್, ACP, DCP, DySP ಕಮಿಷನರ್ ಕೂಡ ಇರ್ತಾರೆ
8. ಪ್ರತಿ ರಾಜ್ಯದಲ್ಲೂ NIA ಅಧಿಕಾರಿಗಳು ಇರ್ತಾರೆ
ಇದೇ ವೇಳೆ ಫಾಜಿಲ್ ಕೊಲೆ ಪ್ರಕರಣದ ತನಿಖೆಗೂ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ. ಆ ಪ್ರಕರಣದ ತನಿಖೆಯೂ ಚುರುಕಾಗಿ ನಡೆಯುತ್ತಿದೆ ಎಂದ್ರು. ಅಲ್ಲದೆ, ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಶೀಘ್ರದಲ್ಲೇ ಎಲ್ಲಾ ಧಾರ್ಮಿಕ ಮುಖಂಡರ ಜತೆ ಶಾಂತಿ ಸಭೆ ನಡೆಸಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡುತ್ತೇವೆ ಎಂದ್ರು. ಒಟ್ನಲ್ಲಿ ಕರಾವಳಿಯನ್ನು ಕಂಗೆಡಿಸಿರುವ ತನಿಖೆಯನ್ನು NIAಗೆ ನೀಡುವ ಮೂಲಕ ಇಡೀ ರಾಜ್ಯದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಬಿಜೆಪಿ ಕಾರ್ಯಕರ್ತರ ಒತ್ತಾಯಕ್ಕೆ ಒತ್ತು ಕೊಡುವ ಮೂಲಕ ಪರಿಸ್ಥಿತಿ ಸ್ವಲ್ಪ ತಿಳಿಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ.