Sunday, September 8, 2024

ಬಿಜೆಪಿ ಸರ್ಕಾರ ಹಿಟ್ಲರ್ ರೀತಿಯಲ್ಲಿ ಕಾನೂನು ತರ್ತಿದೆ : ಅಬ್ದುಲ್ ವಾಜೀದ್

ಬೆಂಗಳೂರು : ಕೇಂದ್ರ ಸರ್ಕಾರ ಸಿಂಹ ಘರ್ಜಿಸುವ ರೀತಿಯಲ್ಲಿ ಬದಲಾಯಿಸಿ ಲೋಕಾರ್ಪಣೆ ಮಾಡಿದ್ದು, ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ನಲ್ಲಿರಯವ ರಾಷ್ಟ್ರ ಲಾಂಛನದ ಬದಲಾವಣೆಗೂ ಬಿಬಿಎಂಪಿ ಸಿದ್ಧತೆ ನಡೆಸಿದೆ.

ನಗರದ ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನದಲ್ಲಿ ಕೇಂದ್ರ ಸರ್ಕಾರದ ಬದಲಾವಣೆ ವಿಚಾರವಾಗಿ ಈ ಮೊದಲು ರಾಷ್ಟ್ರ ಲಾಂಛನದಲ್ಲಿ ಸಿಂಹದ ಬಾಯಿ ಮುಚ್ಚಿದ ಮಾದರಿಯಲ್ಲಿತ್ತು. ಈ ಹಿನ್ನೆಲೆ ರಾಜ್ಯದಲ್ಲೂ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳ ಮುಖಛರ್ಯೆ ಬದಲಾಯಿಸಲು ತೀರ್ಮಾನ ಮಾಡಿದೆ.

ಗುಪ್ತ್ ಗುಪ್ತ್ ಆಗಿ ಅಶೋಕ ಪಿಲ್ಲರ್ ಮೇಲಿರುವ ಲಾಂಛನದ ಸಿಂಹಗಳ ಮುಖಛರ್ಯೆ ಬದಲಿಸಲು ಹೊರಟ ಪಾಲಿಕೆ. ಕೇಂದ್ರ ಸರ್ಕಾರದಿಂದ ಹೇಗೆ ಸೂಚನೆಗಳು ಸಿಗುತ್ತದೆಯೋ ಹಾಗೆ ನಾವು ಕೆಲಸ ಮಾಡಲಿದ್ದೇವೆ ಎಂದು ಚೀಫ್ ಕಮಿಷನರ್ ಹೇಳಿದ್ದಾರೆ.

ಇನ್ನು, ಮೈಸೂರು ಸಂಸ್ಥಾನದ ಮಹಾರಾಜ ಶ್ರೀಮಜ್ಜಯಚಾಮರಾಜ ಒಡೆಯರ್ ಬಹದ್ದೂರ್ ಕಾಲದಲ್ಲಿ 1948 ಆಗಸ್ಟ್ 20ರಂದು ಅಶೋಕ ಪಿಲ್ಲರ್ ಮೇಲೆ ರಾಷ್ಟ್ರ ಲಾಂಛನ ಸ್ಥಾಪನೆ ಮಾಡಲಾಗಿದೆ. ಇದೀಗ ಬರೋಬ್ಬರಿ 71 ವರ್ಷಗಳ ಬಳಿಕ ಅಶೋಕ ಸ್ಥಂಭದ ಮೇಲಿನ ರಾಷ್ಟ್ರ ಲಾಂಛನದಲ್ಲಿ ಬದಲಾವಣೆ ಆಗುತ್ತಿದ್ದು, ಈ ಬಗ್ಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಹಿಟ್ಲರ್ ರೀತಿಯಲ್ಲಿ ಕಾನೂನು ತರ್ತಿದೆ. ಹಳೆ ಪಾರಂಪರಿಕ ಕಟ್ಟಡಗಳು. ಪಿಲ್ಲರ್ ಗಳನ್ನು ಕೆಡವಿ ತಮ್ಮಗೆ ಇಷ್ಟವಾದ ಬದಲಾವಣೆ ಮಾಡ್ತಿದೆ ಅಂತ ಬಿಬಿಎಂಪಿ ಕಾಂಗ್ರೆಸ್ ನಾಯಕ ಅಬ್ದುಲ್ ವಾಜೀದ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES