Monday, December 23, 2024

ತಾಕತ್ ಇದ್ದರೆ SDPI, PFI ಬ್ಯಾನ್ ಮಾಡಿ: ಕಾಂಗ್ರೆಸ್​​

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸರ್ಕಾರದ ಬುಡಕ್ಕೇ ಬೆಂಕಿ ಬಿದ್ದಂತೆ ಆಗಿದೆ‌. ಪ್ರವೀಣ್ ಹತ್ಯೆ ಪ್ರಕರಣ ಖಂಡಿಸಿ, ಹಿಂದೂಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು, ಸರ್ಕಾರ ವಿರುದ್ಧವೇ ರೋಷಾಗ್ನಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಕೂಡ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ‌. ಅದ್ರಲ್ಲೂ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ತನಿಖೆಗೆ ಒಳಪಡಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸರ್ಕಾರದ ವಿರುದ್ಧ ಸ್ವಪಕ್ಷೀಯ ಕಾರ್ಯಕರ್ತರೇ ರೋಷಾಗ್ನಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಕೂಡ ಸರ್ಕಾರ ವಿರುದ್ಧವೇ ತಿರುಗಿಬಿದ್ದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಸಿಎಂ ಸ್ಥಾನ ನಿಭಾಯಿಸೋದಕ್ಕೆ ಬಸವರಾಜ ಬೊಮ್ಮಾಯಿಗೆ ಆಗುತ್ತಿಲ್ಲ‌. ಗೃಹ ಸಚಿವರು ರಾಜೀನಾಮೆ ಕೊಡ್ಬೇಕು ಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.

BJP ರಾಜ್ಯಾಧ್ಯಕ್ಷರನ್ನು ತನಿಖೆಗೆ ಒಳಪಡಿಸಲು ಸಿದ್ದು ಆಗ್ರಹ :

ಇನ್ನು ರಾಜ್ಯದಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಮಾಡೆಲ್ ಜಾರಿ ಮಾಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹ ಮಾಡುತ್ತಿದ್ದಾರೆ. ಸರ್ಕಾರ ಕೂಡ ಅಗತ್ಯ ಬಿದ್ರೆ ಯುಪಿ ಮಾಡೆಲ್ ಜಾರಿ ಮಾಡುವುದಾಗಿ ಹೇಳಿದೆ. ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ, ಪ್ರತಿಪಕ್ಷ ಕಾಂಗ್ರೆಸ್, ಕರ್ನಾಟಕ ಹಲವು ವಿಚಾರಗಳಿಗೆ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಅಲ್ಲಿನ ಮಾದರಿ ನಮ್ಮ‌ ರಾಜ್ಯದಲ್ಲಿ ಏಕೆ ಜಾರಿ ಮಾಡ್ಬೇಕು ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನಿಮಗೆ ತಾಕತ್ ಇದ್ರೆ SDPI ,PFI ಬ್ಯಾನ್ ಮಾಡಿ ಎಂದು ಸರ್ಕಾರಕ್ಕೆ ಕೈ ನಾಯಕರು ಸವಾಲು ಹಾಕಿದ್ದಾರೆ. ಅಲ್ದೇ ಪ್ರವೀಣ್ ನೆಟ್ಟಾರು ,ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಕಾರಿನ ಚಾಲಕ ಆಗಿದ್ದರು. ಏಕಾಏಕಿ ಪ್ರವೀಣ್ ಕೆಲಸ ಬಿಡಲು ಕಾರಣವೇನು..? ಈ ಬಗ್ಗೆ ಸತ್ಯಾಂಸ ಗೊತ್ತಾಗಬೇಕಾದ್ರೆ, ನಳೀನ್ ಕುಮಾರ್ ಕಟೀಲ್‌ರನ್ನು ತನಿಖೆಗೆ ಒಳಪಡಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇರವಾಗಿ ಸವಾಲು ಹಾಕಿದ್ದಾರೆ.

ಸಿಎಂ ಬೊಮ್ಮಾಯಿ ನಡೆಗೆ HDK ಆಕ್ರೋಶ :

ಇನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್ ನಿವಾಸಕ್ಕೆ ಸಿಎಂ ಭೇಟಿ ನೀಡಿ, ಕುಟುಂಬಕ್ಕೆ ಸ್ವಾಂತನ ಹೇಳಿದ್ದರು. ಅದೇ ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಸೂದ್ ಕೂಡ ಕಳೆದ ವಾರವಷ್ಟೇ ಹತ್ಯೆಯಾಗಿದ್ದ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ‌‌ ಸಿಎಂ ಬೊಮ್ಮಾಯಿ‌ ನಡೆಗೆ‌ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ‌ ಸಿಎಂ‌ ಹೆಚ್ ಡಿ ಕುಮಾರಸ್ವಾಮಿ, ನೀವು ಬಿಜೆಪಿ ಪಕ್ಷಕ್ಕೆ ಮಾತ್ರ ಸಿಎಂ. ಮಸೂದ್ ಕೂಡ ಹತ್ಯೆಯಾಗಿದ್ದಾನೆ. ಅವ್ರ ಕುಟುಂಬದವರನ್ನ ಭೇಟಿ ಮಾಡಿ ಸ್ವಾಂತನ ಹೇಳಲು ನಿಮ್ಗೆ ಆಗಲಿಲ್ವಾ? ಕರ್ನಾಟಕವನ್ನ‌ ಇಬ್ಬಾಗ ಮಾಡುವ ಮನಸ್ಥಿತಿ ನಿಮ್ದು ಎಂದು HDK ಟೀಕಾಪ್ರಹಾರ ನಡೆಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಯುಪಿ ಮಾದರಿ ಜಾರಿಗೆ ಹೆಚ್​ಡಿಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುಲ್ಡೋಜರ್‌ ಸಂಸ್ಕೃತಿ ನಮ್ಮ ರಾಜ್ಯಕ್ಕೆ ಬರೋದು ಬೇಡ. ಬಿಜೆಪಿ ಹಾಗೂ ಕಾಂಗ್ರೆಸ್ ಗಲಾಟೆ ಸೃಷ್ಟಿಸುವ ಕೆಲಸ ಮಾಡ್ತಿದೆ. ಎರಡು ಕೋಮುಗಳ ಮಧ್ಯೆ ಗಲಾಟೆ ಸೃಷ್ಟಿಸುವ ಕೆಲಸ ಮಾಡ್ತಿದೆ. ನನ್ನ ಅವಧಿಯಲ್ಲಿ ಒಂದಾದ್ರೂ ಕೋಮು ಗಲಭೆ ನಡೆದಿದ್ಯಾ..?, ಕಾಂಗ್ರೆಸ್, ಬಿಜೆಪಿ ಅವಧಿಯಲ್ಲಿ ಕೋಮು ಗಲಭೆ ಹೆಚ್ಚಾಗಿವೆ. ರಾಜ್ಯದಲ್ಲಿ ತುಘಲಕ್ ದರ್ಬಾರ್‌ ಇದೆ ಅಂತ ಹೆಚ್‌ಡಿಕೆ ಪವರ್‌ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ಕುವೆಂಪು, ಬಸವಣ್ಣ ಮಾಡೆಲ್ ಎಲ್ಲಿ ಹೋಯ್ತು..? ಅಂತಾ ಬಿಜೆಪಿ ನಾಯಕರಿಗೆ ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಪ್ರಶ್ನಿಸಿದ್ದಾರೆ. ಪರಿಸ್ಥಿತಿ ಕೈತಪ್ಪಿರುವ ಕಾರಣ ಯೋಗಿ ಮಾಡೆಲ್ ಕುರಿತು ಮಾತನ್ನಾಡುತ್ತಿದ್ದಾರೆ
ಗಟ್ಟಿಯಾದ ಗೃಹ ಸಚಿವರನ್ನ ಕೇಳುತ್ತಿರೋದು ಅವರದೇ ಪಕ್ಷದ ಯತ್ನಾಳ್ ಅಲ್ಲವಾ..? ಇವರಿಗೆ ಯಾಕೆ ಆರಗ ಜ್ಞಾನೇಂದ್ರರನ್ನ ಬದಲಾಯಿಸಲು ಆಗುತ್ತಿಲ್ಲಅಂತಾ ಬಿಜೆಪಿ ನಾಯಕರಿಗೆ ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಪ್ರಶ್ನಿಸಿದ್ದಾರೆ.

ಇನ್ನು ಪಕ್ಷ ಹಾಗೂ ಸರ್ಕಾರದಿಂದ ಪ್ರವೀಣ್ ಕುಟುಂಬಕ್ಕೆ ಪರಿಹಾರ ಹಣ ನೀಡಿದೆ.ಹೀಗಾಗಿ, ಪರಿಹಾರ ವಿಚಾರದಲ್ಲೂ ನೀವು ರಾಜಕೀಯ ಮಾಡ್ಬೇಡಿ,ಮಸೂದ್ ಕುಟುಂಬಕ್ಕೂ ಪರಿಹಾರ ಹಣ ನೀಡಿ ಎಂದು ಕಾಂಗ್ರೆಸ್, ಜೆಡಿಎಸ್, ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಒಟ್ಟಾರೆ,ಕರವಾಳಿಯಲ್ಲಿ ಸರಣಿ ಹತ್ಯೆ ಪ್ರಕರಣಗಳು ಇದೀಗ ರಾಜಕೀಯ ಸ್ವರೂಪ ಪಡೆದಿದೆ. ಇದು ಮುಂದೆ ಯಾವ ಸ್ವರೂಪ ಪಡೆಯುತ್ತೆ. ಯುಪಿ ಮಾಡೆಲ್ ಜಾರಿಯಾಗುತ್ತಾ ಎನ್ನೋದನ್ನು ಕಾದು ನೋಡಬೇಕಿದೆ.

ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್ ಟಿವಿ

RELATED ARTICLES

Related Articles

TRENDING ARTICLES