Saturday, October 26, 2024

ನಾವು ಮನೆಯ ಮಗನನ್ನು ಕಳೆದುಕೊಂಡಿದ್ದೇವೆ : ಸುನೀಲ್ ಕುಮಾರ್

ಮಂಗಳೂರು : ಜಿಹಾದಿ ಮಾನಸಿಕತೆಯನ್ನು ಮಟ್ಟ ಹಾಕುವ ಕೆಲಸ ಎರಡೂ ಸರ್ಕಾರ ಗಳು ಮಾಡುತ್ತದೆ ಎಂದು ಮಂಗಳೂರಿನಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮನೆಯ ಮಗನನ್ನು ಕಳೆದುಕೊಂಡಿದ್ದೇವೆ. ಈಗಾಗಲೇ ಒಂಭತ್ತು ಮಂದಿಯನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ. ಆರೋಪಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ನೀಡುತ್ತೇವೆ. ಜಿಹಾದಿ ಮಾನಸಿಕತೆಯನ್ನು ಮಟ್ಟ ಹಾಕುವ ಕೆಲಸ ಎರಡೂ ಸರ್ಕಾರಗಳು ಮಾಡುತ್ತದೆ. ನಾನೂ ಹಿಂದೂ ಸಂಘಟನೆಯಲ್ಲೇ ಬೆಳೆದು ಸಾರ್ವಜನಿಕ ಜೀವನಕ್ಕೆ ಬಂದವನು. ಕಾರ್ಯಕರ್ತನನ್ನು ಕಳೆದು ಕೊಂಡಾಗ ಮತ್ತೊಬ್ಬ ಕಾರ್ಯಕರ್ತನಿಗೆ ಆಗುವ ಆಕ್ರೋಶ ನನಗೆ ಅರಿವಿದೆ ಎಂದರು.

ಅದಲ್ಲದೇ, ಕೊಲೆ ಮಾಡಿದ ಜಿಹಾದಿಗಳನ್ನು ಬಗ್ಗು ಬಡಿದೇ ಬಡಿಯುತ್ತೇವೆ. ಪೊಲೀಸ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮುಖ್ಯಮಂತ್ರಿ ಗಳಿಗೂ ನಿರಂತರ ಮಾಹಿತಿ ನೀಡುತ್ತಿದ್ದೇನೆ. ಮುಂದಿನೆರಡು ದಿನ ಮಂಗಳೂರಿನಲ್ಲೇ ಇದ್ದು ಪರಿಸ್ಥಿತಿ ಅವಲೋಕನ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯ, ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇವೆ ಎಂದು ಹೇಳಿದರು.

ಉತ್ತರಭಾರತದಿಂದ ದಕ್ಷಿಣ ಭಾರತದವರೆಗೆ ನಡೆಯುತ್ತಿರುವ ಜಿಹಾದಿ ಮಾನಸಿಕತೆಯೇ ಪ್ರವೀಣ್ ಕೊಲೆಗೆ ಕಾರಣ ಇದೇ ಜಿಹಾದಿ ಮಾನಸಿಕತೆಯೇ ಪ.ಬಂಗಾಳ,ಕೇರಳದಲ್ಲಿ ಕಾರ್ಯಕರ್ತರನ್ನು ಬಲಿ ಪಡೆಯುತ್ತಿದೆ ಇನ್ನು, ಪ್ರವೀಣ್ ಕೊಲೆ ಚುನಾವಣೆ ವಿಷಯ ಅಲ್ಲ. ಚುನಾವಣೆಗೆ ಬೇಕಾದ ವಿಷಯಗಳೇ ಬೇರೆ ಇದೆ. ಪ್ರವೀಣ್ ಕೊಲೆಯನ್ನು ಚುನಾವಣಾ ವಿಷಯ ಮಾಡುವ ಇರಾದೆ ಬಿಜೆಪಿಗಿಲ್ಲ ಎಂದರು.

RELATED ARTICLES

Related Articles

TRENDING ARTICLES