ಹುಬ್ಬಳ್ಳಿ: ಕಠಿಣ ಕ್ರಮ ಎನ್ನುವ ಶಬ್ದವನ್ನು ರೆಕಾರ್ಡ್ ಮಾಡಿ ಇಟ್ಟುಕೊಂಡು ಬಿಡಿ. ಮುಂದೆ ಬೇರೆ ಕಾರ್ಯಕರ್ತ ಹತ್ಯೆಯಾದಾಗ ಅದನ್ನೇ ಪ್ಲೇ ಮಾಡಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ವಿವಿಧ ಪದವಿಗಳಿಗೆ ರಾಜೀನಾಮೆ ನೀಡಿದ ಕಾರ್ಯಕರ್ತರಿಗೆ ಸೆಲ್ಯೂಟ್. ಇದು ಮೊದಲೇ ಆಗಬೇಕಿತ್ತು. ಅಧಿಕಾರಕ್ಕೆ ಅಂಟಿಕೊಳ್ಳದೆ ಹಿಂದುತ್ವದಿಂದ ರಾಜೀನಾಮೆ ನೀಡಿದ್ದು ಗ್ರೇಟ್. ಬಿಜೆಪಿ ನಾಯಕರು ನಾಲಾಯಕ್, ನಿಮಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಪ್ರವೀಣ್ ಶವಯಾತ್ರೆಯಲ್ಲಿ ಭಾಗವಹಿಸಿದ ಲಾಠಿ ಚಾರ್ಚ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ನಾಯಕರ ಮೇಲೆ ಕಾರ್ಯಕರ್ತರ ಆಕ್ರೋಶ ಮಡುಗಟ್ಟಿದೆ. ಬರೀ ಕಟೀಲು ಕಾರು ಅಲುಗಾಡಿಸುವ ಬದಲು ಬೇರೆ ಕ್ರಮಕ್ಕೆ ಮುಂದಾಗಬೇಕಿತ್ತು. ಇಂದಿನದ್ದು ಜನೋತ್ಸವ ಅಲ್ಲಾ ಮರಣೋತ್ಸವ. ಕಾರ್ಯಕ್ರಮ ರದ್ದು ಮಾಡಿ ಒಳ್ಳೆಯದು ಮಾಡಿದ್ದೀರಿ. ಇಲ್ಲದಿದ್ದರೆ ಇಂದು ವೇದಿಕೆ ಮೇಲೆ ಚಪ್ಪಲಿಗಳ ರಾಶಿ ನೋಡುತ್ತಿದ್ದೀರಿ. ಅಧಿಕಾರದಲ್ಲಿ ಇದ್ದಾಗ ಒಂದು, ಇಲ್ಲದಿದ್ದಾಗ ಒಂದು ರೀತಿ ನಾಟಕವನ್ನು ಬಿಟ್ಟು ಬಿಡಿ ಎಂದು ಕಿಡಿಕಾರಿದರು.