Wednesday, January 22, 2025

ರಾಜ್ಯದಲ್ಲಿ PFI ಹಾಗೂ SDPI ಸಂಪೂರ್ಣ ಬ್ಯಾನ್ ಮಾಡಬೇಕು : ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ : ಬಿಜೆಪಿ ನಾಯಕರು ನಾಲಾಯಕ್ , ನಿಮಗೆ ನಾಚಿಕೆ, ಮಾನ‌‌ ಮರ್ಯಾದೆ ಇಲ್ಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಅಂಟಿಕೊಳ್ಳದೆ ಹಿಂದುತ್ವದಿಂದ ರಾಜಿನಾಮೆ ನೀಡಿದ್ದು ಗ್ರೇಟ್‌. ನಾನು ಅವರಿಗೆ ಅಭಿನಂದನೆ‌ ಸಲ್ಲಿಸುತ್ತೇನೆ. ಬಿಜೆಪಿ ನಾಯಕರು ನಾಲಾಯಕ್ , ನಿಮಗೆ ನಾಚಿಕೆ, ಮಾನ‌‌ ಮರ್ಯಾದೆ ಇಲ್ಲ. ಪ್ರವೀಣ್ ಶವಯಾತ್ರೆಯಲ್ಲಿ ಭಾಗವಹಿಸಿದ ಲಾಠಿ ಚಾರ್ಚ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಬಿಜೆಪಿ ನಾಯಕರ ಮೇಲೆ ಕಾರ್ಯಕರ್ತರ ಆಕ್ರೋಶ ಮಡುಗಟ್ಟಿದೆ. ಬರೀ ಕಟೀಲು ಕಾರ್ ಅಲುಗಾಡಿಸುವ ಬದಲು ಬೇರೆ ಕ್ರಮಕ್ಕೆ ಮುಂದಾಗಬೇಕಿತ್ತು. ಅಧಿಕಾರದಲ್ಲಿ ಇದ್ದಾಗ ಒಂದು ಇಲ್ಲದಿದ್ದಾಗ ಒಂದು ರೀತಿ ನಾಟಕವನ್ನು ಬಿಟ್ಟು ಬಿಡು. ಕಠಿಣ ಕ್ರಮ ಎನ್ನುವ ಶಬ್ಧವನ್ನು ರೆಕಾರ್ಡ್ ಮಾಡಿಕೊಂಡು ಇಟ್ಟುಕೊಂಡು ಬಿಡಿ. ಮುಂದೆ ಬೇರೆ ಕಾರ್ಯಕರ್ತ ಹತ್ಯೆಯಾದಗ ಅದನ್ನೇ ಪ್ಲೇ ಮಾಡಿ. ಇಂದಿನದು ಜನೋತ್ಸವ ಅಲ್ಲಾ ಮರಣೋತ್ಸವ. ಕಾರ್ಯಕ್ರಮ ರದ್ದು ಮಾಡಿ ಒಳ್ಳೆಯದು ಮಾಡಿದ್ದಿರಿ ಎಂದರು.

ಅದಲ್ಲದೇ, ಅಧಿಕಾರದ ದಾಹ ಇರುವಂತಹ ಜನಪ್ರತಿನಿಧಿಗಳಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ.ನ ಮಾನ ಮರ್ಯಾದೆ ಇದ್ದಿದ್ರೆ ಪ್ರವೀಣ್ ಹತ್ಯೆಗೆ ನ್ಯಾಯ ಕೊಡಿಸುತ್ತಿದ್ದರು. ಅದನ್ನ ಬಿಟ್ಟು ಅಧಿಕಾರದ ದಾಹದಿಂದ ಜನಪ್ರತಿನಿಧಿಗಳು ಸುಮ್ಮನೆ ಕುಳಿತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸುರಕ್ಷತೆ ಅಷ್ಟೇ ಅಲ್ದೆ ಎಲ್ಲ ವಿಷಯಗಳಲ್ಲೂ ವಿಫಲವಾಗಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES