Thursday, January 23, 2025

ಚಟಗಳಿಗೆ ದಾಸನಾಗಿದ್ದ ಯುವಕ ಬೀದಿ ಹೆಣ

ಹಾವೇರಿ: ಆತ ಗಾಂಜಾ ನಶೆಯಲ್ಲಿ ತೇಲಾಡ್ತಿದ್ದ. ಕುಡಿತದ ಅಮಲಿನಲ್ಲಿ ಮುಳುಗಿರ್ತಿದ್ದ. ಹೀಗೆ ಚಟಗಳಿಗೆ ದಾಸನಾಗಿದ್ದವನು ಇಂದು ಬೀದಿಯಲ್ಲಿ ಹೆಣವಾಗಿ ಬಿದ್ದಿದ್ದಾನೆ. ಹೀಗೆ ಬೀದಿ ಹೆಣವಾದವನ‌ ಸಾವಿನ ಸುತ್ತ ಈಗ ಅನುಮಾನದ ಹುತ್ತ ಬೆಳೆದಿದೆ.

ನವೀನ್​ ರಾಥೋಡ್​ (27) ಮೃತ ದುರ್ದೈವಿ. ಈತ​ ವಿಜಯನಗರ ಜಿಲ್ಲೆಯ ಹಡಗಲಿಯ ತುಂಗಭದ್ರ ಬಡಾವಣೆಯ ನಿವಾಸಿ. ಗುರುವಾರ ಮುಂಜಾನೆ ಹಾವೇರಿ ತಾಲೂಕಿನ ಸೋಮನಕಟ್ಟೆ ಗ್ರಾಮದ ಬಳಿ ಮೃತದೇಹ ಪತ್ತೆಯಾಗಿದೆ. ರಸ್ತೆ ಪಕ್ಕ ಅನಾಥ ಶವವಾಗಿ ಬಿದ್ದಿದ್ದನ್ನು ಕಂಡ ಸ್ಥಳೀಯರು ಗುತ್ತಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುತ್ತಿಗೆಯ ಸುತ್ತ ಗಾಯದ ಗುರುತುಗಳು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಇನ್ನು ನವೀನ್​ ಕುಡಿತದ ಚಟಕ್ಕೆ ದಾಸನಾಗಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ದಿನವಿಡೀ ಅಮಲಿನಲ್ಲಿ ಮುಳುಗಿರ್ತಿದ್ದನಂತೆ, ಅಷ್ಟೆ ಅಲ್ಲದೆ, ಗಾಂಜಾ ವ್ಯಸನಿಯಾಗಿದ್ದ ನವೀನ್ ಸದಾ ನಶೆಯಲ್ಲಿ ತೇಲಾಡ್ತಿದ್ದನಂತೆ. ಕಳೆದ ಆರು ತಿಂಗಳ ಹಿಂದಷ್ಟೇ ಕುಡಿತದ ಚಟ ಬಿಡಿಸಲು ಮೈಸೂರಿಗೆ ಕಳುಹಿಸಿದ್ರು. ಆದರೆ, ನವೀನ್​ ಬದಲಾಗಿರಲಿಲ್ಲ. ಜೀವನಕ್ಕಾಗಿ ಕೊಡಿಸಿದ್ದ ಆಟೋದಲ್ಲಿದ್ದ ಗ್ಯಾಸ್ ಕಳ್ಳತನ ಮಾಡೋದು, ಮನೆಯಲ್ಲಿದ್ದ ಹಣ ಕದ್ದು ಕುಡಿಯುತ್ತಿದ್ದನಂತೆ, ಬುಧವಾರವಷ್ಟೇ ಮನೆಯಲ್ಲಿ ಹಣ ಪಡೆದು ಹುಬ್ಬಳ್ಳಿಗೆ ಹೋಗುವುದಾಗಿ ತೆರಳಿದ್ದ ನವೀನ್ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆಯಾಗಿರುವುದು ದುರಂತ.

ನವೀನನಿಗೆ ಸಹೋದರ, ಸಹೋದರಿ ಸೇರಿ ಕುಟುಂಬದಲ್ಲಿ ಮೂವರು ವೈದ್ಯರಿದ್ದಾರೆ. ತಂದೆ ನಿವೃತ್ತ ಬ್ಯಾಂಕ್ ಮ್ಯಾನೇಜರ್. ಇಂತಹ ಒಳ್ಳೆಯ ಕುಟುಂಬದಲ್ಲಿ ಬೆಳೆದಿದ್ದ ನವೀನ್ ಚಟಗಳನ್ನು ಮೈತುಂಬಾ ಅಂಟಿಸಿಕೊಂಡು ಬೀದಿ ಹೆಣವಾಗಿರೋದು ನಿಜಕ್ಕೂ ವಿರ್ಪಯಾಸ.

ವೀರೇಶ್ ಬಾರ್ಕಿ, ಪವರ್ ಟಿವಿ, ಹಾವೇರಿ

RELATED ARTICLES

Related Articles

TRENDING ARTICLES