ಬೆಂಗಳೂರು: ಎಲ್ಲರಿಗೂ ರಕ್ಷಣೆ ಕೊಡೋಕೆ ಸಾಧ್ಯವೇ ಅಂತಾರೆ ? ಸಂಸದರಾದವರು ಇಂತಹ ಹೇಳಿಕೆಯನ್ನಾ ನೀಡೋದಾ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾಡಿದ್ದಾರೆ.
ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ ಎಂಬ ಹೇಳಿಕೆಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮದೇ ಸರ್ಕಾರ,ನಿಮ್ಮದೇ ಡಿಪಾರ್ಟ್ ಮೆಂಟ್ ಆದರರೂ ಸಂಸದರು ಏನು ಹೇಳಿದ್ರು? ಎಲ್ಲರಿಗೂ ರಕ್ಷಣೆ ಕೊಡೋಕೆ ಸಾಧ್ಯವೇ ಅಂತಾರೆ. ಸಂಸದರಾದವರು ಇಂತಹ ಹೇಳಿಕೆಯನ್ನಾ ನೀಡೋದು ಅಲ್ವಾ ಎಂದು ಗುಡುಗಿದರು.
ಇನ್ನು ಖಾಕಿಗೆ ನೀವೇ ಗೌರವ ಕೊಡ್ತಿಲ್ಲ. ಕಳ್ಳರನ್ನ ನೀವೇ ಸಾಕ್ತಿದ್ದೀರಾ? ಒಬ್ಬ ಅಧಿಕಾರಿ ವರ್ಗಾವಣೆಗೆ ದುಡ್ಡು ಕೊಡಬೇಕು. ನಮ್ಮ ಚಿತ್ತಾಪುರದಲ್ಲಿ 15 ಲಕ್ಷ ಕೊಡಬೇಕು. ನಮಗೂ ಇಷ್ಟೊಂದು ಕೊಡ್ತಾರಾ ಅಂತ ಗೊತ್ತಿಲ್ಲ. ಇನ್ನ ಎಲ್ಲೆಲ್ಲಿ ಎಷ್ಟು ಕೊಡಬೇಕು. ಲಂಚ ಕೊಟ್ಟವನು ಸುಮ್ಮನಿರ್ತಾನಾ,ಅವನಿಗೂ ಲಾಭಬೇಕಲ್ಲ. ವರ್ಷದೊಳಗೆ ಮತ್ತೆ ಅವನು ಟ್ರಾನ್ಸ್ಫರ್ ಆಗ್ತಾನೆ. ಇಂಥವರಿಂದ ಇನ್ನೇನು ರಕ್ಷಣೆ ಸಾಧ್ಯ? ಇಂಟೆಲಿಜೆನ್ಸ್ ಇರೋದು ಯಾಕೆ? ಇಂತಹ ಘಟನೆ ಆಗಬಹದೆಂಬ ಮಾಹಿತಿ ಇರಲ್ವೇ ಎಂದು ಆಡಳಿತ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ನಮ್ಮ ಅವಧಿಯಲ್ಲಿ( ಕಾಂಗ್ರೆಸ್ ಅಧಿಕಾರವಧಿ) 1500 ಕೇಸ್ ವಾಪಸ್ ಪಡೆದಿದ್ದವಂತೆ, ನಾವು ಮರ್ಡರ್ ಮಾಡಿದವರ ಕೇಸ್ ವಾಪಸ್ ಪಡೆದಿಲ್ಲ. ವಾಪಸ್ ಪಡೆದಿದ್ದು ರೈತರ ಮೇಲಿನ ಕೇಸ್ ಇದು ವಾಸ್ತವಾಂಶ. ನಿಮ್ಮಲ್ಲಿದ್ದರೆ ದಾಖಲೆ ಬಿಡುಗಡೆ ಮಾಡಿ. ವಾಟ್ಸಾಪ್ ವಿವಿಯಲ್ಲಿ ಕಲಿತರೇ ಇದೇ ಗೊತ್ತಾಗೋದು ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದರು.