Wednesday, January 22, 2025

ಗಣಿನಾಡಿನಲ್ಲಿ ಖತರ್‌ನಾಕ್ ದಂಪತಿ ಅಂದರ್

ಬಳ್ಳಾರಿ: ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಒಂದು ವಾರದಿಂದಷ್ಟೇ ಮಹಾನಗರ ಪಾಲಿಕೆ ಪೌರ ಕಾರ್ಮಿಕ ನಾರಾಯಣಪ್ಪ ಮನೆಯಲ್ಲಿ ಕಳ್ಳತನವಾಗಿತ್ತು.ಮನೆಯಲ್ಲಿ ಮಗಳ ಮದುವೆ ಹಿನ್ನೆಲೆಯಲ್ಲಿ ಹುಲಿಗೆಮ್ಮ ದೇವಸ್ಥಾನದಿಂದ ವಾಪಸ್ ಮನೆಗೆ ಬರುವಷ್ಟರಲ್ಲೇ 110 ಗ್ರಾಂ ಬಂಗಾರ, 715 ಗ್ರಾಂ ಬೆಳ್ಳಿ ಸೇರಿ ನಗದು ಕಳ್ಳತನವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕೂಡ ನಾರಾಯಣಪ್ಪ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದರು. ಇದೀಗ ಭಾಸ್ಕರ್, ಪೆದ್ದಕ್ಕ ಎಂಬ ಕಿಲಾಡಿ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನುಕಳೆದ ಹಲವು ವರ್ಷಗಳಿಂದಲೂ ಕಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿರುವ ಈ ದಂಪತಿ ಈವರೆಗೆ ಹತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ, ಈವರೆಗೆ ತಲೆಮರೆಯಿಸಿಕೊಂಡಿದ್ದ ಈ ದಂಪತಿ ಕಳೆದ ವಾರ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಈಗ ಅಂದರ್ ಆಗಿ ಜೈಲು ಸೇರಿದ್ದಾರೆ.ಬಂಗಾರ,ಬೆಳ್ಳಿ, ನಗದು ವಾಪಸ್ ಸಿಕ್ಕಿರುವುದು ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈಗ ಸಂತಸ ತಂದಿದೆ.
ಮಾಡಬಾರದ ಕೆಲ್ಸ ಮಾಡಿರುವ ಕಿಲಾಡಿ ದಂಪತಿ ಜೈಲು ಸೇರಿದ್ದು, ಇನ್ನೂ ಯಾವೆಲ್ಲಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಲಿದೆ.

ಬಸವರಾಜ ಹರನಹಳ್ಳಿ ಪವರ್ ಟಿವಿ, ಬಳ್ಳಾರಿ

RELATED ARTICLES

Related Articles

TRENDING ARTICLES