ಬೆಂಗಳೂರು : ಸುಮಾರು 15ಕ್ಕೂ ಹೆಚ್ಚು ಜನರನ್ನು ಬಂಧಿಸಿ, ವಿಚಾರಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಮನೆಯ ಬಳಿಯೇ ಕೇರಳ ಬಾರ್ಡರ್ ಇದೆ. ಅಲ್ಲಿಂದ ಇಲ್ಲಿಗೆ ಬಂದು ಏನೋ ಮಾಡಿ ಹೋಗೋದು. ಇದು ಬಹಳ ವರ್ಷಗಳಿಂದ ನಡೆದೆ ಇದೆ. ಕೇರಳ ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಚಾರಣೆ ಮಾಡಿದ್ರೆ ಮಾತ್ರ, ಕೊಲೆಗಡುಕರಿಗೆ ಶಿಕ್ಷೆ ಆಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಕೆಲಸ ಮಾಡ್ತಿದ್ದಾರೆ ಎಂದರು.
ಅದಲ್ಲದೇ, ಸಿಎಂ ಅವರನ್ನು ನಾನು ಅಭಿನಂದಿಸುತ್ತೇನೆ. ಸೂತಕದ ಮನೆಯಲ್ಲಿ ನಾವು ಏನು ಮಾಡಬಾರದಿತ್ತು. ಅದೇ ನಿರ್ಣಯವನ್ನು ಸಿಎಂ ಮಾಡಿದ್ದಾರೆ. ಮಂಗಳೂರು ವಾತಾವರಣ ಬಹಳ ಶಾಂತಿಯುತವಾಗಿದೆ. ಅಲ್ಲಿನ ಜನರು ತುಂಬಾ ಬುದ್ದಿವಂತರು. ಆಕ್ರೋಶ ಕೂಡ ಹೊರಗೆ ಹಾಕ್ತಾರೆ. ವ್ಯವಸ್ಥೆ ಹಾಳು ಮಾಡದ ರೀತಿ ಸಹಕರಿಸುತ್ತಾರೆ. ಇದು ಅವರ ಸಂಸ್ಕೃತಿ. ಇವತ್ತು ಯಾವುದೇ ಗಲಾಟೆಗಳು ಇಲ್ಲ. ಆದರೂ ಕೂಡ ಪೊಲೀಸರು, ಕಟ್ಟು ನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆ ಎಂದು ಹೇಳಿದರು.