ಶಿವಮೊಗ್ಗ: ದೇಶದಲ್ಲೀಗ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪಾದಯಾತ್ರೆಗೆ ಕರೆ ನೀಡಿದ್ದು, ಹೋರಾಟದ ನೆಲೆ, ರಾಜಕೀಯವಾಗಿ ತನ್ನದೇ ಛಾಪು ಮೂಡಿಸಿರುವ ತೀರ್ಥಹಳ್ಳಿಯಲ್ಲಿ ಇಂದು ಮಹಾತ್ಮ – ಹುತಾತ್ಮರ ನೆನಪಿನ ನಡಿಗೆ ಕಾರ್ಯಕ್ರಮ ನಡೆಸಲಾಗಿದೆ. ಕತ್ತಲಿನಿಂದ ಬೆಳಕಿನೆಡೆಗೆ-ಸ್ವಾತಂತ್ರ್ಯ ಜಾಗೃತಿ ನಡಿಗೆ ಘೋಷವಾಕ್ಯದಡಿ ಈ ಪಾದಯಾತ್ರೆ ನಡೆಸಲಾಯ್ತು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಹಾತ್ಮರು, ಹುತಾತ್ಮರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಹಾಗೂ ಕತ್ತಲಿನಿಂದ ಬೆಳಕಿನೆಡೆಗೆ-ಸ್ವಾತಂತ್ರ್ಯ ಜಾಗೃತಿ ನಡಿಗೆ ಘೋಷವಾಕ್ಯದಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ನೂರಾರು ಕಾಂಗ್ರೆಸ್ ಮುಖಂಡರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಗೊಳಿಗೆ ಗ್ರಾಮದಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಸುಮಾರು 20 ಕಿ.ಮೀ. ಪಾದಯಾತ್ರೆ ನಡೆಸಿದ್ರು.
ಇನ್ನು, ಈ ಪಾದಯಾತ್ರೆಗೆ ಕಾಂಗ್ರೆಸ್ ನಾಯಕರೇ ವಿರೋಧಿಸಿದ್ದು,ಡಾ.ಆರ್.ಎಂ.ಮಂಜುನಾಥ ಗೌಡ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಎಂದು ಕಿಮ್ಮನೆ ರತ್ನಾಕರ್ ಪತ್ರ ಕೂಡ ಬರೆದಿದ್ದರು.ಆದಾಗ್ಯೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಪಕ್ಷದ ಮುಖಂಡರು, ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ರು.
ಒಟ್ಟಿನಲ್ಲಿ ಪಾದಯಾತ್ರೆ ವಿರೋಧಿಸಿದ್ದ ಕಿಮ್ಮನೆ ರತ್ನಾಕರ್ ವಿರುದ್ಧ ಆರ್.ಎಂ. ಮಂಜುನಾಥ ಗೌಡ ಸೈಲೆಂಟಾಗಿಯೇ ತೊಡೆ ತಟ್ಟಿದ್ದು, ಪಾದಯಾತ್ರೆ ರದ್ದು ಮಾಡುವಂತೆ ಬಹಿರಂಗ ಕೂಡ ಪತ್ರ ಬರೆದಿದ್ದರು. ಆದರೆ, ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ.
ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ, ಶಿವಮೊಗ್ಗ