Sunday, January 19, 2025

ಸೋನಿಯಾಗೆ ವಯಸ್ಸಾಗಿದೆ, ಕಟುವಾಗಿ ನಡೆಸಿಕೊಳ್ಳಬೇಡಿ: ಇ.ಡಿಗೆ ನಾಯಕ ಆಜಾದ್ ಮನವಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ED ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಪಕ್ಷದ ಬಂಡಾಯ ಗುಂಪಾದ ಜಿ-23ರ ಮುಖಂಡ ಗುಲಾಮ್ ನಬಿ ಆಜಾದ್ ಸೋನಿಯಾ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸೋನಿಯಾ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ಆಜಾದ್, ರಾಜಕೀಯ ಎದುರಾಳಿಗಳನ್ನು ವೈರಿಗಳಂತೆ ಪರಿಗಣಿಸಬಾರದು ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಪದೇ ಪದೇ ವಿಚಾರಣೆಗೆ ಒಳಪಡಿಸುವ ಮುನ್ನ ಜಾರಿ ನಿರ್ದೇಶನಾಲಯವು ಅವರ ವಯಸ್ಸು ಮತ್ತು ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಗುಲಾಮ್ ನಬಿ ಆಜಾದ್ ಸಲಹೆ ನೀಡಿದ್ದಾರೆ.

ಅಲ್ಲದೇ ಕಾಂಗ್ರೆಸ್ ಅಧ್ಯಕ್ಷೆ ಅವರಿಗೆ ವಯಸ್ಸಾಗಿದೆ. ಅವರ ಆರೋಗ್ಯ ಕೂಡ ಚೆನ್ನಾಗಿಲ್ಲ. ಹೀಗಾಗಿ ಆಸ್ಪತ್ರೆಗೆ ಕೂಡ ದಾಖಲಾಗಿದ್ದರು. ತನಿಖಾ ಸಂಸ್ಥೆಗಳು ನೀಡುವ ಒತ್ತಡವನ್ನು ಅವರು ಸಹಿಸಿಕೊಳ್ಳಲಾರರು ಎಂದು ತಾವು ಟೀಕಾಪ್ರಹಾರ ನಡೆಸಿದ್ದ ಪಕ್ಷದ ನಾಯಕಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಯುದ್ಧಗಳಲ್ಲಿ ಕೂಡ, ಮಹಿಳೆಯ ಮೇಲೆ ದಾಳಿ ಮಾಡಬಾರದು ಎಂದು ರಾಜರು ಆಜ್ಞೆ ಹೊರಡಿಸುತ್ತಿದ್ದರು. ಹಾಗೆಯೇ ಅನಾರೋಗ್ಯಕ್ಕೆ ಒಳಗಾದವರನ್ನು ಹಾಗೆಯೇ ಬಿಡಬೇಕಿತ್ತು. ವಯಸ್ಸಾದ ಮತ್ತು ಅನಾರೋಗ್ಯಕ್ಕೆ ತುತ್ತಾದ ಸೋನಿಯಾ ಅವರನ್ನು ಕಠಿಣವಾಗಿ ನಡೆಸಿಕೊಳ್ಳಬಾರದು ಎಂದು ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES