Friday, January 24, 2025

ಹಿಂದೂ‌ ಸಂಘಟನೆ, ನಮ್ಮ‌ ಕಾರ್ಯಕರ್ತರು ಟಾರ್ಗೆಟ್ ಆಗಿದ್ದಾರೆ : ರೇಣುಕಾಚಾರ್ಯ

ಬೆಂಗಳೂರು : ಹರ್ಷ, ಚಂದ್ರು ಆಯ್ತು, ನಿನ್ನೆ ಪ್ರವೀಣ್ ಹೀಗೆ ನಿರಂತರವಾಗಿ ಹತ್ಯೆ ನಡೆಯುತ್ತಿದೆ ಎಂದು ಸಿಎಂ‌ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೋ ಒಂದು ಕಡೆ ನಮಗೆ ನೋವಾಗ್ತಿದೆ. ಹಿಂದೂ‌ ಸಂಘಟನೆ, ನಮ್ಮ‌ಕರ್ಯಕರ್ತರು ಟಾರ್ಗೆಟ್ ಆಗಿದ್ದಾರೆ. ಇದರ ಅಂತ್ಯ ಯಾವಾಗ.? ಯು.ಪಿ‌ ಸಿಎಂ‌ ಆದಿತ್ಯನಾಥ್ ಮಾದರಿಯಲ್ಲಿ ಇವರನ್ನ ಹದು ಬಸ್ತಿನಲ್ಲಿ‌ ಇಡಬೇಕು. ನಿರಂತರವಾಗಿ ಹತ್ಯೆ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಇದನ್ನ ಗಂಭೀರವಾಗಿ ಪರಿಗಣಿಸ್ತಾರೆ ಎಂದರು.

ಅದಲ್ಲದೇ, ಕಾಂಗ್ರೆಸ್ ಕಾಲದಲ್ಲಿ 10-15 ಜನರ ಹತ್ಯೆ ಆಗ್ತಿತ್ತು. ಈಗ ಕಂಟ್ರೋಲ್ ಆಗಿದೆ. ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡ್ತೀವಿ. ನನಗೆ ಬೆದರಿಕೆ ಕರೆ ಬಂದಿತ್ತು, ಆರೋಪಿಗಳನ್ನ ಪತ್ತೆ ಹಚ್ಚಲಾಗಿಲ್ಲ. ನನ್ನಂತವರಿಗೆ ಹೀಗಾದ್ರೆ ಹೇಗೆ, ನಾನೇನು ಹೆದರಲ್ಲ. ನಾನು ಸಾವಿರಾರು ಜನರ ಮದ್ಯೆ ಇರ್ತೇನೆ. ಹೊನ್ನಾಳಿಯಲ್ಲಿ ಮಾರಿಕಾಂಬಾ ಉತ್ಸವದಲ್ಲಿ ಇದ್ದೆ. ಹೊನ್ನಾಳಿ ಯುವಕರು ನನಗೆ ಬೆಂಗಾವಲಾಗಿದ್ರು. ನನಗೆ ಹೀಗಾದ್ರೆ, ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದು ಪ್ರಶ್ನಿಸಿದ್ದಾರೆ.

RELATED ARTICLES

Related Articles

TRENDING ARTICLES