Wednesday, January 22, 2025

KPSC ಯ ಮತ್ತೊಂದು ಮಹಾ ಕಳ್ಳಾಟ ಬಯಲು..!

ಬೆಂಗಳೂರು : ಸಣ್ಣ ಮಕ್ಕಳನ್ನು ಕೇಳಿದ್ರೂ ಹೆವಿ ವೆಹಿಕಲ್ ಓಡೋದು ಡೀಸೆಲ್​ನಿಂದ ಅಂತಾರೆ. ಆದ್ರೆ, KPSC ಬ್ರೇಕ್ ಇನ್ಸ್​ಪೆಕ್ಟರ್ ಆಗಬಯಸುವವರು ಪೆಟ್ರೋಲ್ ಹೆವಿ ವೆಹಿಕಲ್​ನಲ್ಲಿ ಒಂದು ವರ್ಷದ ಡ್ರೈವಿಂಗ್ ಲೈಸೆನ್ಸ್ ಬೇಕೆಂದು ಕೇಳಿತ್ತು. ಹೀಗಾಗಿ ಸಾವಿರಾರು ಅರ್ಹ ಅಭ್ಯರ್ಥಿಗಳು ಇದ್ರಿಂದ ವಂಚಿತರಾದ್ರು. ಆದ್ರೀಗ ಫೈನಲ್ ನೋಟಿಫಿಕೇಷನ್ ಆಗಿ 141 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ಅಕ್ರಮದ ವಾಸನೆಯೂ ಬರಲಾರಂಭಿಸಿದೆ.

ಇನ್ನು 2016ರಲ್ಲಿ KPSC ಹೊರಡಿಸಿದ್ದ ಈ ನೋಟಿಫಿಕೇಷನ್‌ನಿಂದಾಗಿ ಹಲವಾರು ಮಂದಿ RTO ಬ್ರೇಕ್ ಇನ್ಸ್​ಪೆಕ್ಟರ್ ಹುದ್ದೆಯಿಂದ ವಂಚಿತರಾಗಿದ್ದಾರೆ. ಫೈನಲ್ ನೋಟಿಫಿಕೇಷನ್​ನಲ್ಲಿ KPSCಯಲ್ಲಿ ಡೀಸೆಲ್ ಬಸ್​ನಲ್ಲಿ ಹೆವಿ ಲೈಸೆನ್ಸ್ ಪಡೆದವರನ್ನು ಸದ್ಯ ಆಯ್ಕೆ ಮಾಡಿಕೊಳ್ಳಲಾಗಿದೆ. ಇದೊಂದು ಪಕ್ಕಾ ಮೆರಿಟ್ ಆಧಾರದ ಆಯ್ಕೆ ಅಂತ KPSC ಹೇಳ್ತಿದೆ. ಇತ್ತ RTO ಅವ್ರು ನೇಮಕ ಮಾಡಿ ನಮಗೆ ಕಳುಹಿಸ್ಬೇಕಷ್ಟೇ. ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತಿದೆ. ಹೀಗಾಗಿ ಹುದ್ದೆ ತಪ್ಪಿಸಿಕೊಂಡ ಆಕ್ಷಾಂಕ್ಷಿಗಳ ಸಿಟ್ಟು ಮಾತ್ರ ನೆತ್ತಿಗೇರಿದೆ.

ಒಟ್ಟಿನಲ್ಲಿ KPSC ಮೇಲೆ ಜನ ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ. KPSC ಎನ್ನೋದೇ ಒಂದು ಭ್ರಷ್ಟ ವ್ಯವಸ್ಥೆ ಅನ್ನೋ ಹಂತಕ್ಕೆ ಬಂದು ನಿಂತಿದೆ. ಅದ್ರಲ್ಲೂ ಈ ಬ್ರೇಕ್ ಇನ್ಸ್​ಪೆಕ್ಟರ್ ಇನ್ಸಿಡೆಂಟ್ ಜನರ ಅನುಮಾನವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದ್ದಂತೂ ಸುಳ್ಳಲ್ಲ.

ಕೃಷ್ಣಮೂರ್ತಿ, ಪವರ್ ಟಿವಿ, ಬೆಂಗಳೂರು

RELATED ARTICLES

Related Articles

TRENDING ARTICLES