Thursday, January 9, 2025

ನಮ್ಮನ್ನು ಭ್ರಷ್ಟರು ಅಂತ ಕರೆಯಲು ನಿಮಗೆ ನೈತಿಕತೆ ಇಲ್ಲ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಯಾವುದೇ ತಪ್ಪಿಲ್ಲದ ಹಿಂದುತ್ವವಾದಿಗನ್ನು ಕೆಲವು ಮುಸಲ್ಮಾನ್ ಗೂಂಡಾಗಳು ಕಗ್ಗೊಲೆ ಮಾಡೋದು, ಹಲ್ಲೆ ಮಾಡೋದು ನಡೆಯುತ್ತಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ತಪ್ಪಿಲ್ಲದ ಹಿಂದುತ್ವವಾದಿಗನ್ನು ಕೆಲವು ಮುಸಲ್ಮಾನ್ ಗೂಂಡಾಗಳು ಕಗ್ಗೊಲೆ ಮಾಡೋದು, ಹಲ್ಲೆ ಮಾಡೋದು ನಡೆಯುತ್ತಿದೆ. ಇದನ್ನು ಉಗ್ರವಾಗಿ ಖಂಡನೆ ಮಾಡ್ತೇನೆ. ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಖಂಡನೆ ಮಾಡಬೇಕು. ಯಾರೂ ಇವರಿಗೆ ಬೆಂಬಲ ಕೊಡಬಾರದು. ಕೊಲೆಗಡುಕರನ್ನು ಬಂಧಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದರು.

ಇನ್ನು, ಸರ್ಕಾರ ಬಲಹೀನ, ದೌರ್ಬಲ್ಯ ಅಲ್ಲ. ಇದೇ ರೀತಿ ಮುಂದುವರಿದ್ರೆ ರಾಜ್ಯದಲ್ಲಿ ಶಾಂತಿ ಕಾಪಾಡಲು ಹಿಂದುಗಳು ಸಂಯಮದಿಂದ ನಡೆದುಕೊಂಡು ಹೋಗ್ತಿದ್ದಾರೆ. ಎಷ್ಟು ದಿನದಿಂದ ಶಾಂತಿಯಿಂದ ಇರಲು ಸಾಧ್ಯ. ನಾಳೆ ಸಿ.ಎಂ. ಜೊತೆ ಮಾತನಾಡುತ್ತೇನೆ. ಕೊಲೆಗಡುಕರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಮನವಿ ಮಾಡ್ತೇನೆ. ಹಿಂದುಗಳು ಶಾಂತಿ ಪ್ರಿಯರು ಅದನ್ನು ಪರೀಕ್ಷೆ ಮಾಡಲು ಹೋಗಬೇಡಿ. ಕೊಲೆಗೆ ಕೊಲೆ ಎಂಬುದು ನಮ್ಮ ಉದ್ದೇಶ ಅಲ್ಲ. ಆ ರೀತಿಯಾದರೆ ರಾಜ್ಯದಲ್ಲಿ ರಕ್ತಪಾತವೇ ಆಗುತ್ತದೆ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ಯುವ ಮೋರ್ಚಾ ಕಾರ್ಯಕರ್ತರ ರಾಜಿನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕಾರ್ಯಕರ್ತರ ರಕ್ಷಣೆ ನಮ್ಮ ಕೈಯಲ್ಲಿ ಆಗುತ್ತಿಲ್ಲ ಅಂತಾ ನಾನೇ ಒಪ್ಪಿಕೊಳ್ಳುತ್ತಿದ್ದೇನೆ. ನಮ್ಮ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಕೊಲೆ ಮಾಡುತ್ತಿದ್ದಾರೆ. ಆದರೆ ರಾಜೀನಾಮೆ ಅದಕ್ಕೆ ಪರಿಹಾರವಲ್ಲ. ಕೊಲೆಗಡುಕರಿಗೆ ಕೊಡುತ್ತಿರುವ ಶಿಕ್ಷೆ ಸಾಕಾಗುತ್ತಿಲ್ಲ. ಕಠಿಣ ಶಿಕ್ಷೆ ಕೊಡುವ ಬಗ್ಗೆ ಕ್ರಮ ವಹಿಸಬೇಕಿದೆ. ಹಿಂದುತ್ವ ಸಿದ್ದಾಂತವನ್ನು ದುರ್ಬಲ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಹಿಂದುತ್ವವಾದಿಗಳು ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಇಡೀ ದೇಶದಲ್ಲಿ ನ್ಯಾಷನಲ್ ಹೆರಾಲ್ಡ್ ನಲ್ಲಿ ಆಗಿರುವ ಭ್ರಷ್ಟಾಚಾರ ಮತ್ತೊಂದಿಲ್ಲ. 2 ಸಾವಿರ ಕೋಟಿಗೂ ಅಧಿಕ ಲೂಟಿ ಆಗಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ವಿವರಣೆ ಕೊಡಿ ಅಂದ್ರೆನೇ ಗಲಾಟೆ ಮಾಡ್ತಿದ್ದಾರೆ. ಡಿಕೆಶಿ ಮನೆಯಲ್ಲಿ ಈಡಿ ದಾಳಿಯಾದಾಗ ಕೋಟಿಗಟ್ಟಲೆ ಹಣ ಪತ್ತೆಯಾಗಿ ತಿಹಾರ್ ಜೈಲಿಗೆ ಹೋಗಿ ಬಂದ್ರು. ಮತ್ತೆ ಇನ್ನೆರಡು ಮೂರು ದಿನದಲ್ಲಿ ವಿಚಾರಣೆಗೆ ಹೋಗ್ತಿದ್ದಾರೆ. ಆದರೆ ಬಿಜೆಪಿಯ‌ನ್ನು ಭ್ರಷ್ಟಾಚಾರ ಅಂತಾ ಕರೆಯುತ್ತಿದ್ದಾರೆ. ನೀವು ಭ್ರಷ್ಟರು ಎಂಬುದು ಗೊತ್ತಾಗಿದೆ. ನಮ್ಮನ್ನು ಭ್ರಷ್ಟರು ಅಂತಾ ಕರೆಯಲು ನಿಮಗೆ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಈಶ್ವರಪ್ಪ ಕಿಡಿ ಕಾಡಿದ್ದಾರೆ.

RELATED ARTICLES

Related Articles

TRENDING ARTICLES