Thursday, December 19, 2024

ಸಚಿವ ಸುನೀಲ್​​ ಕುಮಾರ್ ಕ್ರಿಮಿನಲ್ ವ್ಯಕ್ತಿ: ಎಂ. ಲಕ್ಷ್ಮಣ್

ಮಂಡ್ಯ: ಪ್ರವೀಣ್ ನೆಟ್ಟಾರೂ ಹತ್ಯೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಬಿಜೆಪಿ ವಿರುದ್ದ ಆರೋಪ ಮಾಡಿದ್ದಾರೆ.

ಪ್ರವೀಣ್​​ ಹತ್ಯೆ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತನ್ನ ಹತ್ಯೆ ಮಾಡಿದ್ದಾರೆ. ಇದರ ಹಿಂದೆ ನೂರಕ್ಕೆ ನೂರರಷ್ಟು ಬಿಜೆಪಿ ಕೈವಾಡ ಇದೆ. ಸೂಕ್ತ ತನಿಖೆ ನಡೆದೆರೆ ತಪ್ಪಿತಸ್ಥರು ಸಿಕ್ತಾರೆ ಎಂದು ತನಿಖೆಗೆ ಒತ್ತಾಯಿಸಿದರು.

ಬಡವರು, ಶೂದ್ರರನ್ನು ಮುಂದೆ ಬಿಟ್ಟು ಹೊಡೆಯುವ ಕೆಲಸವನ್ನ ಇವರೇ ಮಾಡ್ತಾರೆ, ಜತೆಗೆ ಕಿಡಿ ಅಚ್ಚುವ ಕೆಲಸವನ್ನು ಮಾಡುತ್ತಾರೆ. ಹೀಗಾಗಿ ರಾಜ್ಯದ ಜನರು ಬಹಳ ಎಚ್ಚರಿಕೆಯಿಂದರಬೇಕು.

ಇನ್ನು ಬಿಜೆಪಿ ಮಾಡಿರುವ ಕಾರ್ಯಕ್ರಮ ಏನು ಇಲ್ಲ. ಇಂದಿಗೆ ಬೊಮ್ಮಾಯಿ ಒಂದು ವರ್ಷ ಕಂಪ್ಲಿಟ್ ಮಾಡ್ತಾರೆ. ಏನು ಮಾಡಿದ್ದೀರಿ ? ಲಾ ಅಂಡ್ ಆರ್ಡರ್ ರಾಜ್ಯದಲ್ಲಿ ಡೌನ್ ಆಗಿದೆ. ಆರ್.ಎಸ್.ಎಸ್.ನವರು ಆರಗ ಜ್ಞಾನೇಂದ್ರನಂತವರನ್ನು ಹೋಂ ಮಿನಿಸ್ಟರ್ ಮಾಡಿದ್ದೀರಿ? ಅವರು ಅರೆಬರೆ ಜ್ಞಾನ ಇದೆ ಹುಚ್ಚನ ತರ ಸ್ಟೇಟ್ ಮೆಂಟ್ ಕೊಡುವ ವ್ಯಕ್ತಿ. ಜೊತೆಗೆ ಸಚಿವ ಸುನೀಲ್​​ ಕುಮಾರ್ ಕ್ರಿಮಿನಲ್ ವ್ಯಕ್ತಿ. ಅವನು ಕರಾವಳಿ ಪ್ರದೇಶವನ್ನ ಸಂಪೂರ್ಣ ನಾಶ ಮಾಡಿದ್ದಾರೆ. ದಿನ ಬೆಳಿಗ್ಗೆ ಎದ್ರೆ ಕೋಮು ಗಲಭೆ. ಬಿಜೆಪಿಯವರಿಗಂತೂ ಮುಸ್ಲಿಂರವರು ಏಕೈಕ ಗುರಿಯಾಗಿಬಿಟ್ಟಿದ್ದಾರೆ ಎಂದು ಆಡಳಿತ ಪಕ್ಷದ ವಿರುದ್ಧ ಗುಡುಗಿದರು.

RELATED ARTICLES

Related Articles

TRENDING ARTICLES