Friday, January 24, 2025

ಹಿಜಾಬ್‌ ಹಿಂದಿರುವ ಶಕ್ತಿಗಳೇ ಪ್ರವೀಣ್‌ ಹತ್ಯೆ ಹಿಂದಿದ್ದಾರೆ : ಆರಗ ಜ್ಞಾನೇಂದ್ರ

ಬೆಂಗಳೂರು : ಅಮಾಯಕ ಯುವಕ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವ ವೇಳೆ ಘಟನೆ ನಡೆದಿದೆ ಎಂದು ಗೃಹ ಸಚಿವ ಅರಗ ಜ್ಙಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕರಾವಳಿಯಲ್ಲಿ ಬಹಳ ವರ್ಷಗಳಿಂದ ಇಂತ ಘಟನೆಗಳು ನಡೆಯುತ್ತಿವೆ. ಪೋಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಮನವಿ ಮಾಡ್ತಾ ಇದ್ದೇನೆ. ಸೈದ್ದಾಂತಿಕ, ವಾಗಿ ಏನೇ ಭಿನ್ನಾಭಿಪ್ರಾಯ ಇರಬಹುದು. ಆದರೆ ಕೊಲೆಯಂತಹಾ ಕೃತ್ಯಗಳು ನಡೆಯಬಾರದು. ಸಾಕಷ್ಟು ದೊಡ್ದ ಪ್ರಮಾಣದಲ್ಲಿ ಪೋಲೀಸರು ಅಲ್ಲಿ ಇದ್ದಾರೆ. ಸುವ್ಯವಸ್ಥೆ ಕಾಪಾಡಿಕೊಳ್ಳಲು ಕ್ರಮ ತೆಗೆದುಕೊಳ್ತಾರೆ. ಅಲ್ಲಿ ಜನರನ್ನು ಕನ್ಬಿನ್ಸ್ ಮಾಡುವ ಪ್ರಯತ್ನ ಮಾಡುತ್ತೇವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ತೀವಿ ಎಂದರು.

ಇನ್ನು, ಡಿಕೆಶಿ ಭ್ರಷ್ಟ ಉತ್ಸವ ಎಂದ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ನಮ್ಮನ್ನು ಭ್ರಷ್ಟರು ಅಂತಾ ಟೀಕೆ ಮಾಡ್ತಿದಾರೋ, ಅವರು ಏನು ಹಾಗಾದ್ರೆ ಅವರ ಪಕ್ಷದ ರಮೇಶ್‌ ಕುಮಾರ್ ಅವರೇ ಬಹಿರಂಗ ವಾಗಿ ಹೇಳಿಕೊಂಡಿದ್ದಾರೆ. ಡಿಕೆ ಮೇಲೆ ಇಡಿ ತನಿಖೆ ಆಗ್ತಿದೆ. ಅವರು ಇನ್ನೊಬ್ಬರ ಮೇಲೆ ಆರೋಪ ಮಾಡ್ತಾರೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ, ಪಕ್ಷದ ವಿರುದ್ಧ ಆಕ್ರೋಶ ವಿಚಾರವಾಗಿ ಮಾತನಾಡಿದ ಅವರು, ಈ ಮತಾಂಧ ಶಕ್ತಿಗಳು ಒಂದು ರಾಜ್ಯದಲ್ಲಿ ಮಾತ್ರ ಕಾರ್ಯಾಚರಣೆ ಮಾಡ್ತಿಲ್ಲ. ಅವರ ಕಾರ್ಯಾಚರಣೆ ಎರಡು ರಾಜ್ಯಗಳಲ್ಲಿ ನಡೀತಿದೆ. ಗಡಿ ಭಾಗದಲ್ಲಿ ಈ ಕೃತ್ಯಗಳನ್ನು ಮಾಡ್ತಿದಾರೆ. ಕೇರಳ ಸರ್ಕಾರದ ಜತೆ ಸಿಎಂ ಸಹ‌ ಮಾತಾಡಿದ್ದಾರೆ ಎಂದರು.

RELATED ARTICLES

Related Articles

TRENDING ARTICLES