Friday, January 10, 2025

ನಳಿನ್​ ಕುಮಾರ್​ ಕಟೀಲ್​ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

ದಕ್ಷಿಣ ಕನ್ನಡ: ಬಿಜೆಪಿ ದ.ಕ.ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಬಿಜೆಪಿ ಕಾರ್ಯಕರ್ತರು , ಮೃತದೇಹದ ಅಂತಿಮ ದರ್ಶನ ಪಡೆಯಲು ಸಚಿವ ಸುನೀಲ್ ಕುಮಾರ್ ಜತೆ ಬೆಳ್ಳಾರೆಗೆ ಬಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ , ಅಪರಾಧಿಗಳ ಬಂಧನ ಆಗುತ್ತಿಲ್ಲ. ಇನ್ನೆಷ್ಟು ಕಾರ್ಯಕರ್ತರ ಹತ್ಯೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಮುಖಂಡರನ್ನು ತರಾಟೆಗೆ ತೆಗೆದು ಕೊಂಡರು .

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಮತ್ತು ಸಚಿವ ಸುನೀಲ್ ಸುಮಾರು ಅರ್ಧ ಗಂಟೆ ಕಾರಿನಲ್ಲೇ ಕುಳಿತಿದ್ದರು . ಈ ವೇಳೆ ರಾಜ್ಯಾಧ್ಯಕ್ಷರ ಕಾರು ಟೈರ್ ಪಂಕ್ಚರ್ ಆಗಿ, ಕಾರ್ಯ ಕರ್ತರು ಅವರ ಕಾರನ್ನೇ ಮಗುಚಿ ಹಾಕಲು ಮುಂದಾದರು.

ಎಚ್ಚೆತ್ತುಕೊಂಡ ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದು ರಿಸಿದರು . ಈ ವೇ ಳೆ ಓರ್ವ ಕಾರ್ಯಕರ್ತನಿಗೆ ಏಟಾಗಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿಯಿಂದ ಗಲಿಬಿಲಿಗೊಂಡ ಬಿಜೆಪಿ ರಾಜ್ಯಾಧ್ಯಕ್ಷರು ಅಲ್ಲಿಂದ ತೆರಳಿದರು.

RELATED ARTICLES

Related Articles

TRENDING ARTICLES