Wednesday, January 22, 2025

ಯಶ್ ಕನ್ನಡ ಸಿನಿಮಾ ಇಂಡಿಯಾಗೆ ತೋರಿಸಿದ್ರು; ಸುದೀಪ್ ವರ್ಲ್ಡ್​ಗೆ ತೋರಿಸ್ತಾರೆ: ಉಪೇಂದ್ರ

ಬೆಂಗಳೂರು: ಬಹು ನಿರೀಕ್ಷೆಯುಳ್ಳ ಕನ್ನಡದ ‘ವಿಕ್ರಾಂತ್ ರೋಣ ಸಿನಿಮಾವು ಜುಲೈ 28ರಂದು ತೆರೆಗೆ ಬರುತ್ತಿದೆ. ವಿಶ್ವಾದ್ಯಂತ ನಾನಾ ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದ್ದು, ಇಂದು ರಿಲೀಸ್​ಗೂ ಮೊದಲು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗಿದೆ.

ಈ ಕಾರ್ಯಕ್ರಮಕ್ಕೆ ಉಪೇಂದ್ರ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ಅವರು ಸುದೀಪ್ ಆ್ಯಂಡ್ ಟೀಂಗೆ ಶುಭಾಶಯ ಕೋರಿದ್ದಾರೆ. ಹಾಗು ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ ಆಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಕೆಜಿಎಫ್ 2’ ಸಿನಿಮಾ ಮಾಡಿದ ಮೋಡಿ ತುಂಬಾ ದೊಡ್ಡದು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ‘ವಿಕ್ರಾಂತ್ ರೋಣ’ ಸಿನಿಮಾ ಮೀರಿಸಲಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ ಉಪೇಂದ್ರ. ‘ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಪ್ಯಾನ್ ವರ್ಲ್ಡ್​ ಸಿನಿಮಾ. ಕನ್ನಡಿಗರು ಯಾರಿಗೂ ಕಡಿಮೆ ಇಲ್ಲ ಎಂದು ಯಶ್ ಇಂಡಿಯಾದ ಬಾಕ್ಸ್ ಆಫೀಸ್​ ಹೊಡೆದರು. ನಾವು ವರ್ಲ್ಡ್​ ಬಾಕ್ಸ್ ಆಫೀಸ್​ ಹೊಡಿತೀವಿ’ ಎಂದು ಬಹಳ ಖುಷಿಯಿಂದ ಉಪ್ಪಿ ಹೇಳಿದರು.

ಹಲವು ವರ್ಷಗಳ ಹಿಂದೆ ಸುದೀಪ್ ಸಿಕ್ಕಿದ್ದರು. ಡೈರೆಕ್ಟರ್ ಆಗಬೇಕು ಅಂತ ಬಂದಿದ್ರು. ಡೈರೆಕ್ಟರ್ ಯಾಕೆ ಆಗ್ತೀರಾ? ಇಷ್ಟು ಎತ್ತರ ಇದ್ದೀರ, ಹೀರೋ ಆಗಿ ಅಂತ ಹೇಳಿದೆ. ಅವರು ಹೀರೋ ಆಗಿ, ನಂತರ ಸೂಪರ್ ಸ್ಟಾರ್ ಆದರು. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ’ ಎಂದು ಕಿಚ್ಚನ ಬಗ್ಗೆಯ ಮೆಚ್ಚುಗೆ ಮಾತುಗಳನ್ನು ಆಡಿದರು ಉಪೇಂದ್ರ.

ಇನ್ನು ಎಷ್ಟು ಖುಷಿ ಆಗುತ್ತೆ ಗೊತ್ತಾ ಈ ತರಹ ಸೌಂಡ್ ಕೇಳೋಕೆ, ಇನ್ನು 50 ವರ್ಷ ಬದುಕಿಬಿಡ್ತೀನಿ ಇದನ್ನ ಕೇಳ್ತಾ. ನನ್ನ ಸುದೀಪ್ ಅವರದ್ದು 25-30 ವರ್ಷದ ಸಂಬಂಧವಾಗಿದೆ ಎಂದರು.

RELATED ARTICLES

Related Articles

TRENDING ARTICLES