Friday, November 22, 2024

ಸಿದ್ದರಾಮಯ್ಯ ಭೇಟಿಯಾಗಲು ಪಾದಯಾತ್ರೆ !

ಚಿಕ್ಕೋಡಿ : ತಮ್ಮ ನೆಚ್ಚಿನ ಸಿನೆಮಾ ನಟರನ್ನು, ವಿಶೇಷ ವ್ಯಕ್ತಿಗಳನ್ನು, ರಾಜಕಾರಣಿಯನ್ನು ಭೇಟಿಯಾಗಲು ಹಲವಾರು ಜನ ಏನೇನೋ ಮಾಡುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಸಂತೋಷ ವಿಠೊಬಾ ಚೋರಮುಲೆ (35) ಎಂಬ ಯುವಕ ದಾವಣಗೆರೆಯಲ್ಲಿ ಜರುಗಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಸುಮಾರು 365 ಕಿ.ಮೀ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸುತ್ತಿದ್ದಾನೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಿಂದ ನಿನ್ನೆ ಬೆಳಿಗ್ಗೆ ಪಾದಯಾತ್ರೆ ಪ್ರಾರಂಭ ಮಾಡಿದ ಈ ಅಭಿಮಾನಿ ಪಾದಯಾತ್ರೆಯ ಮೂಲಕ 365 ಕಿ.ಮೀ ದೂರವನ್ನು ಕ್ರಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಬೇಕು, ಅವರು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು, ಅವರು ಮುಖ್ಯಮಂತ್ರಿಯಾದರೆ ನಮ್ಮ ಕರ್ನಾಟಕ ಹಸಿವು ಮುಕ್ತವಾಗುತ್ತೆ, ಬಡವರು ದೀನ ದಲಿತರು ಸುಖ ಸಂಸಾರದಿಂದ ಬಾಳುತ್ತಾರೆ ಎಂದು ಪಾದಯಾತ್ರೆ ಮೂಲಕ‌ ಸಿದ್ದರಾಮಯ್ಯ ಅವರನ್ನ ಬೇಟಿಗೆ ಮುಂದಾಗಿದ್ದಾನೆ.

ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬೇಕು ಎಂದು ಈತ ಮೋಳೆ ಗ್ರಾಮದಿಂದ ಶ್ರೀಶೈಲವರೆಗೆ ಪಾದಯಾತ್ರೆ ಮಾಡಿದ್ದ, ಅದಲ್ಲದೆ ಹೋದ ವರ್ಷ ಅವರ ಹುಟ್ಟುಹಬ್ಬದಂದು ಹಾಗೂ ಅವರಿಗೆ ಕೊರೋನಾ ತಗುಲಿದ ವೇಳೆ ಬೇಗ ನಿವಾರಣೆ ಆಗಲೆಂದು ಮೋಳೆ ಗ್ರಾಮದಿಂದ ಐನಾಪೂರ ಸಿದ್ದೇಶ್ವರ ದೇವಸ್ಥಾನದವರೆಗೆ ದೀರ್ಘ ದಂಡನಮಸ್ಕಾರ ಹಾಕಿ ದೇವರಿಗೆ ಹರಕೆ ಕಟ್ಟಿಕೊಂಡಿದ್ದ

ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ಈತ ತನ್ನ ಪಾದಯಾತ್ರೆಯ ಮೂಲಕ ವ್ಯಕ್ತಪಡಿಸುತ್ತಿದ್ದು, ಅದಕ್ಕಾಗಿ 365 ಕೀಮಿ ಪಾದಾಯತ್ರೆ ಕೈಗೊಂಡಿದ್ದಾನೆ.

RELATED ARTICLES

Related Articles

TRENDING ARTICLES