Monday, December 23, 2024

ರಾ ರಾ ರಕ್ಕಮ್ಮ ಸಾಂಗ್​ಗೆ ಸ್ಟೆಪ್​ ಹಾಕಿದ ಪುರಸಭೆ ಸದಸ್ಯರು

ತುಮಕೂರು: ಜಿಲ್ಲೆ ಪಾವಗಡದಲ್ಲಿ ಸಮಸ್ಯೆಗಳ ಸರಮಾಲೆಗಳಿದ್ದು, ಸಮಸ್ಯೆ ಆಲಿಸಬೇಕಿದ್ದ ಪುರಸಭೆ ಸದಸ್ಯರು ಮಾತ್ರ ಮೋಜು ಮಸ್ತಿಯಲ್ಲಿ ಬ್ಯುಸಿಯಾಗಿದ್ದಾರೆ.

ಪಾವಗಡ ಪುರಸಭೆ ಸದಸ್ಯರು ಜೋಗ್ ಪಾಲ್ಸ್​ನಲ್ಲಿ ಭರ್ಜರಿ ಎಂಜಾಯ್ ಮಾಡುತ್ತಿದ್ದಾರೆ. ರಾ ರಾ ರಕ್ಕಮ್ಮ ಸಾಂಗ್​ಗೆ ಸ್ಟೆಪ್​ ಹಾಕಿದ ಪುರಸಭೆ ಸದಸ್ಯರು. 10ಕ್ಕೂ ಹೆಚ್ಚು ಸದಸ್ಯರ ವಿಡಿಯೋ ವೈರಲ್ ಆಗಿದೆ. ಜನರ ಸಮಸ್ಯೆ ಆಲಿಸದೆ ಮಜಾ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇನ್ನು, ಬೀದಿ ದೀಪಗಳ ಸಮಸ್ಯೆ, ಗುಂಡಿ ಬಿದ್ದಿರೋ ರಸ್ತೆಗಳು, ಚರಂಡಿ ವ್ಯವಸ್ಥೆಯೂ ಸರಿಯಿಲ್ಲ. ಸ್ವಚ್ಛತೆಯಿಲ್ಲದೆ ಅನೇಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ನಗರದ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಜನಪ್ರತಿನಿಧಿಗಳು, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಿಲ್ಲ ಹೀಗಾಗಿ ಪುರಸಭೆ ಸದಸ್ಯರ‌ ನಡೆಗೆ ಜನಸಾಮಾನ್ಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES