Sunday, January 19, 2025

ಲಾರಿ ಚಾಲಕನ ನಿರ್ಲಕ್ಷ್ಯ; ವಿದ್ಯಾರ್ಥಿನಿ ಸಾವು

ಬೆಂಗಳೂರು ಗ್ರಾಮಾಂತರ: ವಿದ್ಯಾರ್ಥಿ ಎಂದಿನಂತೆ ಇಂದು ಸಹ ಕಾಲೇಜನ್ನು ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಳು. ಆದರೆ ಜವರಾಯ ಲಾರಿಯ ರೂಪದಲ್ಲಿ ಬಂದು ಹಿಂಬದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಕೊಳತೂರು ಗೇಟ್ ಬಳಿ ನಡೆದಿದೆ. ರೆಡಿ ಮಿಕ್ಸ್ ತುಂಬಿಕೊಂಡು ಬಂದಿದ್ದಂತಹ ಲಾರಿ ಹಿಬಂದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲಿ ಸಾವನಪ್ಪಿದ್ದಾಳೆ, ಚೈತನ್ಯ ಸಾವನ್ನಪ್ಪಿರುವ ವಿದ್ಯಾರ್ಥಿನಿಯಾಗಿದ್ದು ಲಾರಿ ಚಾಲಕ ಸ್ಥಳದಲ್ಲಿ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ ಲಾರಿ ಚಾಲಕನ ನಿರ್ಲಕ್ಷದಿಂದಲೇ ಈ ರೀತಿ ಅಪಘಾತಗಳು ನಡೆಯುತ್ತಿವೆ ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ಸಹ ನಡೆಸಿದ್ದಾರೆ

ಇನ್ನು ಈ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ ಸರ್ವಿಸ್ ರಸ್ತೆ ಸಹ ಇಲ್ಲದ ಕಾರಣ ಮತ್ತೊಂದು ರಸ್ತೆಯಿಂದ ಈ ರಸ್ತೆಗೆ ಬರುವಾಗ ಅನೇಕ ವಾಹನಗಳು ಇದೇ ರೀತಿ ಅಪಘಾತಗಳಾಗಿ ಬಹಳಷ್ಟು ಮಂದಿ ಸಾವನ್ನಪ್ಪಿದ್ದಾರೆ ಈಗಾಗಲೇ ರಸ್ತೆಯಲ್ಲಿ ಸರ್ವಿಸ್ ರಸ್ತೆಯನ್ನು ಜೊತೆಗೆ ನಾಮಫಲಕಗಳನ್ನು ಅಳವಡಿಕೆ ಮಾಡುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಸ್ಥಳೀಯರು ಕೇಳಿಕೊಂಡಿದ್ದರು ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಒಟ್ಟಾರೆ ಲಾರಿ ಚಾಲಕರ ನಿರ್ಲಕ್ಷವು ಅಥವಾ ಅಧಿಕಾರಿಗಳ ಬೇಜವಾಬ್ದಾರಿತನವೋ ಬದುಕಿ ಬಾಳಬೇಕಿದ್ದ ವಿದ್ಯಾರ್ಥಿನಿ ತಂದೆ ತಾಯಿ ಎದುರೇ ಕೊನೆ ಉಸಿರುಳಿದಿದ್ದಾಳೆ ಇನ್ನಾದರೂ ಅಧಿಕಾರಿಗಳು ಹೆಚ್ಚೆತ್ತುಕೊಂಡು ಕ್ರಮವನ್ನು ತೆಗೆದುಕೊಳ್ಳಬೇಕಿದೆ.

RELATED ARTICLES

Related Articles

TRENDING ARTICLES