Tuesday, January 28, 2025

ಮುಸ್ಲಿಂರು ತಲೆ ಎತ್ತಿ ನಡೆಯಬೇಕು: ಶಾಸಕ ಜಮೀರ್ ಅಹ್ಮದ್

ದಾವಣಗೆರೆ: ಮುಸ್ಲಿಂರು ತಲೆ ತಗ್ಗಿಸಿ ನಡೆಯಬಾರದು, ತಲೆ ಎತ್ತಿ ನಡೆಯಬೇಕು ಎಂದು ಕಾಂಗ್ರೆಸ್​​ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನಲೆ ಅಲ್ಪಸಂಖ್ಯಾತರ‌ ಪೂರ್ವಭಾವಿ ಸಭೆಯಲ್ಲಿಂದು ಮಾತನಾಡಿದ ಅವರು,ಅಂದಿನ ಮುಖ್ಯಮಂತ್ರಿಯಾದ ಹೆಚ್​​ ಡಿ ಕುಮಾರಸ್ವಾಮಿಯವರಿಗೆ ಒತ್ತುವರಿಯಾದ ವಕ್ಫ್ ಆಸ್ತಿಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡೋಣ ಅಂತಾ ಕೆಳಿಕೊಂಡಿದ್ದೇ ಇದರ ಉದ್ದೇಶ ವಕ್ಫ್ ಆಸ್ತಿ ಒತ್ತುವರಿ ಮಾಡುವುದು ಕಡಿಮೆ ಆಗುತ್ತೇ ಎಂದು, ಆದರೆ ಅವರು ಬೇಡ ರೈತರ ಸಾಲ ಮನ್ನಾ ಮಾಡ್ಬೇಕು ಹಣ ಇಲ್ಲ ಅಂದ್ರು. ಈ ವಿಚಾರವಾಗಿ ನಾನು ಸಿದ್ದರಾಮಯ್ಯ ಭೇಟಿ ಮಾಡಿದ್ದೇ. ಆಗ ಅವರು ಅಂದ್ರು ನಾನು ಸಿಎಂ ಇದ್ದಾಗ ತಂದು ಕೊಟ್ಟಿದ್ರೇ ಐದು ಸಾವಿರ ಕೋಟಿ ಕೊಡುತ್ತಿದೆ ಎಂದಿದ್ದರು.

ಅಲ್ಲದೇ ಸಿದ್ದರಾಮಯ್ಯ ಕೊಟ್ಟಿರುವ ಭಾಗ್ಯಗಳು ಯಾರು ಕೊಟ್ಟಿಲ್ಲ, ಎಲ್ಲಿ ಅಲ್ಪಸಂಖ್ಯಾತರು ಇದ್ದರೋ ಅಲ್ಲೆಲ್ಲಾ ಅಭಿವೃದ್ಧಿ ಮಾಡಲು ಸಿದ್ದರಾಮಯ್ಯ ಅವರು ಅನುದಾನ ಕೊಟ್ಟಿದ್ದಾರೆ ಎಂದು  ಅವರನ್ನ ಹಾಡಿ ಹೊಗಳಿದ್ದಾರೆ.

ಇನ್ನು ಮುಸ್ಲಿಂರು ತಲೆ ತಗ್ಗಿಸಿ ನಡೆಬಾರದು, ತಲೆ ಎತ್ತಿ ನಡೆಯಬೇಕು. 2008ರಲ್ಲಿ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್​​ಗೆ ಬಂದಿದ್ದೇ. ಕಾಂಗ್ರೆಸ್​​ನಲ್ಲಿ ನನಗಿಂತ ಹಿರಿಯರಾದ ತನ್ವೀರ್ ಸೇಠ, ಹ್ಯಾರಿಸ್ ನಂತಹವರು ಇದ್ದರು, ಆದರೆ ಆಗ ಕಾಂಗ್ರೆಸ್​​ನಲ್ಲಿ ಸಚಿವ ಸ್ಥಾನ ನೀಡಿದ್ದು ನನಗೆ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತ್ತು ಎಂದರು.

RELATED ARTICLES

Related Articles

TRENDING ARTICLES