ಇಂದು ಕಾರ್ಗಿಲ್ ವಿಜಯ ದಿವಸ ಜುಲೈ 26ರಂದು ಇಡೀ ದೇಶವೇ ಹೆಮ್ಮೆ ಪಡುವ ದಿನ. 1999ರಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ದಿವಸವಿದು.
ಕಾರ್ಗಿಲ್ ಗಿರಿಶ್ರೇಣಿಗಳ ಮೇಲೆ ಮೋಸದಿಂದ ಕಾಲಿಟ್ಟ ಶತ್ರು ರಾಷ್ಟ್ರ ಪಾಕಿಸ್ತಾನವನ್ನು 1999ರ ಜುಲೈ 26ರಂದು ನಮ್ಮ ಸೈನಿಕರು ಎಡೆಮುರಿ ಕಟ್ಟಿದ್ರು. ‘ಅಪರೇಷನ್ ವಿಜಯ’ ಮೂಲಕ ಕಾರ್ಗಿಲ್ ಯುದ್ದ ಗೆದ್ದು ಬೀಗಿದ್ರು ಇದರ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತೆ. ಕಾರ್ಗಿಲ್ ಯುದ್ಧ ನಡೆದು ಇಂದಿಗೆ 23 ವರ್ಷ ಕಳೆದಿದೆ. ವೀರ ಸೇನಾನಿಗಳು ತಾಯಿ ಭಾರತ ಮಾತೆಗೆ ಪ್ರಾರ್ಣಾಪಣವನ್ನು ಅರ್ಪಿಸಿದ್ದಾರೆ. ಈ ದಿನದಂದು ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸಲಾಗುತ್ತದೆ.