Monday, May 20, 2024

ಉತ್ತರಕನ್ನಡ ಜಿಲ್ಲೆಯಲ್ಲಿಲ್ಲ ಸುಸಜ್ಜಿತ ಆಸ್ಪತ್ರೆ..!

ಕಾರವಾರ : ಉತ್ತರಕನ್ನಡ ಕನ್ನಡ ಜಿಲ್ಲೆ ಅಂದಾಕ್ಷಣ ಎಲ್ಲರಿಗೂ ನೆನಪಾಗೋದೆ ಇಲ್ಲಿನ ಹತ್ತಾರು ಜಲಪಾತಗಳು ಕಡಲತೀರಗಳು ಸೌಂದರ್ಯ ಭರಿತವಾಗಿರೋ ಪ್ರವಾಸಿ ತಾಣಗಳು.ಆದ್ರೆ, ಇಲ್ಲಿಗೆ ಬರೋ ಪ್ರವಾಸಿಗರಿಗೆ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು ದುರಂತ. ಚಿಕಿತ್ಸೆಗಾಗಿ 200 ಕಿಲೋಮಿಟರ್ ಹೋಗಬೇಕಾಗಿದ್ದು, ಇದರಿಂದಾಗಿ ಅದೆಷ್ಟೋ ಜೀವಗಳು ಆಸ್ಪತ್ರೆಗೆ ತಲುಪುವುದರೊಳಗೆ ಪ್ರಾಣ ಕಳೆದುಕೊಂಡ ಸಾಕಷ್ಟು ಉದಾರಣೆಗಳು ಇವೆ.ಕಳೆದ ಒಂದು ವಾರದ ಹಿಂದಷ್ಟೆ ಹೊನ್ನಾವರಿಂದ ರೋಗಿಯೊಬ್ಬರನ್ನು ಕುಂದಾಪುರ ಆಸ್ಪತ್ರೆಗೆ ಸಾಗಿಸೋ ವೇಳೆ ಶಿರೂರು ಟೋಲ್ ಗೇಟ್ ಬಳಿ ಆ್ಯಂಬುಲೆನ್ಸ್ ಪಲ್ಟಿಯಾಗಿ ನಾಲ್ವರು ಮೃತಮಟ್ಟಿದ್ದರು. ಈ ಘಟನೆ ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳಿಸಿದೆ. ಇಷ್ಟಕ್ಕೆಲ್ಲಾ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಇರೋದೇ ಪ್ರಮುಖ ಕಾರಣ ಎಂಬುದು ಸದ್ಯ ಚರ್ಚೆ ಆಗುತ್ತಾ ಇರೋ ವಿಚಾರವಾಗಿದೆ. ಈ ಅಪಘಾತದ ಬೆನ್ನಲ್ಲೇ ಜಿಲ್ಲೆಯ ಜನತೆ ಹೋರಾಟದ ಹಾದಿ ಹಿಡಿದಿದ್ದು, ಸರ್ಕಾರ ಜಿಲ್ಲೆಯಲ್ಲೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು ಅಂತಾ ಹೋರಾಟಕ್ಕೆ ಇಳಿದಿದ್ದಾರೆ.

ಈಗಾಗಲೇ ರಾಷ್ಟ ಮಟ್ಟದಲ್ಲಿ ಟ್ವಿಟ್ಟರ್ ಅಭಿಯಾನ ಆರಂಭಿಸಲಾಗಿದ್ದು, We Need Emergency Hospital in Uttara Kannda ಎನ್ನುವ ಹ್ಯಾಷ್ ಟ್ಯಾಗ್ ನಡಿ ಟ್ವಿಟ್ಟರ್ ಅಭಿಯಾನ ನಡೆಸಿದ್ದು, ಈಗಾಗಲೇ ಆರೋಗ್ಯ ಸಚಿವ ಡಾ.ಸುಧಾಕರ್, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್ಡಿ ಕುಮಾರ ಸ್ವಾಮಿ ಸೇರಿ ಅನೇಕರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್ ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೊಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದ್ರೆ, ಇದ್ಯಾವುದಕ್ಕೂ ಮಣಿಯದ ಜಿಲ್ಲೆಯ ಜನ್ರು ಸರಕಾರ ಬರುವ ಚುನಾವಣೆಯೊಳಗೆ ಆಸ್ಪತ್ರೆ ಶಂಕುಸ್ಥಾಪನೆ ಮಾಡದೆ ಹೋದ್ರೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಇನ್ನೂ ಉತ್ತರಕನ್ನಡ ಜಿಲ್ಲೆಯಲ್ಲಿ ಯಾರೇ ಅನಾರೋಗ್ಯಕ್ಕೆ ಒಳಗಾದ್ರೆ ಪಕ್ಕದ ರಾಜ್ಯ ಗೋವಾ ಇಲ್ಲವೆ ಮಂಗಳೂರೂ, ಉಡುಪಿ, ಹುಬ್ಬಳ್ಳಿ, ಶಿವಮೊಗ್ಗ ಜಿಲ್ಲೆಗೆಗಳಿಗೆ ಚಿಕಿತ್ಸೆಗಾಗಿ ಪ್ರಯಾಣಿಸಬೇಕಿದೆ. ಈ ವೇಳೆ ಅದೆಷ್ಟೋ ಜನ್ರು ತಮ್ಮ ಪ್ರಾಣ ಕಳೆದುಕೊಂಡಿರೋ ಉದಾರಣೆಗಳು ಕೂಡ ಇದೆ.ಇಷ್ಟಾದ್ರೂ ಇದುವರೆಗೆ ಜಿಲ್ಲೆಯನ್ನು ಆಳಿರುವ ರಾಜಕಾರಣಿಗಳು ಮಾತ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡೋ ಬಗ್ಗೆ ಸ್ವಲ್ಪವೂ ಪ್ರಯತ್ನ ಮಾಡಿದಂತೆ ಕಾಣುತ್ತಾ ಇಲ್ಲ. ಯಾವಾಗ ಜಿಲ್ಲೆಯ ಜನತೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತಾ ಹೋರಾಟಕ್ಕೆ ಇಳಿದ ಬಳಿಕ ಜಿಲ್ಲೆಯ ರಾಜಕಾರಣಿಗಳು ಆ್ಯಕ್ಟಿವ್ ಆಗಿದ್ದಾರೆ. ಈಗಾಗಲೇ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿಯೂ ಸಹ ಹೋರಾಟದ ರೂಪುರೇಷೆಗಳು ಆರಂಭವಾಗಿದ್ದ,ಜುಲೈ, 30ರಂದು ಹೊನ್ನಾವರದಲ್ಲಿ ಉಪವಾಸ ಸತ್ಯಾಗ್ರಹ ಆರೋಭಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸೋದಕ್ಕೆ ಮುಂದಾಗಿದ್ದಾರೆ. ಈ ಅಂಗವಾಗಿ ಶಿರಸಿಯಲ್ಲಿ ವಿನೂತನ ರೀತಿ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಹತ್ತು ಹಲವು ಯೋಜನೆಗೆಗಳಿಗೆ ತ್ಯಾಗ ಮಾಡಿರೋ ಜಿಲ್ಲೆಯಲ್ಲಿ ಈಗ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎನ್ನುವ ಹೋರಾಟ ತೀವ್ರಗೊಳ್ಳುತ್ತಾ ಇದ್ದು, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಉದಯ ಬರ್ಗಿ ಪವರ್ ಟಿವಿ ಕಾರವಾರ.

RELATED ARTICLES

Related Articles

TRENDING ARTICLES