Wednesday, January 22, 2025

ಕಾಂಗ್ರೆಸ್​​ನಲ್ಲಿ ಪ್ರತಿಯೊಬ್ಬರು ‘ಸಿಎಂ ಹುದ್ದೆ’ಗೆ ಟವೆಲ್ ಹಾಕೋರೆ: ಶಾಸಕ ಹೆಚ್.ಕೆ.ಕುಮಾರಸ್ವಾಮಿ

ಹಾಸನ: ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರತಿಭಟನೆ ನೆಪದಲ್ಲಿ ಪ್ರತಿಯೊಬ್ಬರೂ ಮುಖ್ಯಮಂತ್ರಿ ಹುದ್ದೆಗೆ ಟವಲ್ ಹಾಕಿಕೊಂಡು ಕುಳಿತಿದ್ದಾರೆ ಎಂದು ಹಾಸನದಲ್ಲಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲು ಜೆಡಿಎಸ್ ಶಾಸಕ ಒತ್ತಾಯ ಮಾಡಿದ್ದಾರೆ. ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪ್ರತಿಯೊಬ್ಬರೂ ಟವೆಲ್ ಹಾಕ್ತಿದ್ದಾರೆ. ದಲಿತ ಬಂಧುಗಳು ಬಹಳಷ್ಟು ವರ್ಷದಿಂದ, ಈಗಲೂ ಕೂಡ ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದಾರೆ. ಆದರೆ ಇವತ್ತು ನಮ್ಮ ದಲಿತರು ಯಾರೂ ಕೂಡ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ, ರೇಸ್‌ಗೆ ಬರಲು ಬಿಡ್ತಾ ಇಲ್ಲ. ಇದನ್ನು ದಲಿತರು ಅರ್ಥಮಾಡಿಕೊಳ್ಳಬೇಕು. ಅಲ್ಲದೇ ನಮ್ಮ‌ ಪಕ್ಷದವರು ಯಾವಾಗಲೂ ಸಿಎಂ ಹುದ್ದೆ ಬಗ್ಗೆ ಮಾತನಾಡಿಲ್ಲ.

ಇನ್ನು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತಾ ಜಗತ್ ಜಾಹೀರಾತಾಗಿದೆ,‌ ನಾವು ಬೆಂಬಲಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ 75 ವರ್ಷದಲ್ಲಿ 55 ವರ್ಷ ಆಡಳಿತ ಮಾಡಿದೆ.

ಖರ್ಗೆ, ಕೆ.ಎಚ್.ರಂಗನಾಥ್, ಬಸವಲಿಂಗಪ್ಪ, ಬಿ.ರಾಚಯ್ಯ, ಎನ್.ರಾಚಯ್ಯರಂತಹ ಘಟಾನುಘಟಿ ಲೀಡರ್‌ಗಳಿದ್ದರು ಅವರಿಗೆ ಅಧಿಕಾರವನ್ನ ಕೊಟ್ಟಿಲ್ಲ. ನಾನು ಬೇರೆ ಪಕ್ಷದ ಶಾಸಕನಾಗಿ ಹೇಳುತ್ತಿದ್ದೇನೆ ಖರ್ಗೆಯವರಿಗೆ 80 ವರ್ಷ‌ ತುಂಬಿದೆ, ಅವರ ಅನುಭವಕ್ಕಾದರೂ, ಅವರ ಹೆಸರು ಪ್ರಸ್ತಾಪ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಮತ ಕೊಡುವ ದಲಿತರನ್ನು ಖಂಡಿತವಾಗಿಯೂ ಕಡೆಗಣಿಸಿದೆ
ಅವರ ಬಗ್ಗೆ ಗೌರವ, ಭಯವಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES